Christmas: (ಡಿ.24): ಕ್ರಿಸ್ಮಸ್ ಎಂದರೇ ಸಡಗರ! ಸಂಭ್ರಮ ಇನ್ನು ಕ್ರೈಸ್ತ ಕಾನ್ವೆಂಟಿನಲ್ಲಿ ಓದಿದವರಿಗಂತೂ ಕ್ರಿಸ್ಮಸ್ ಬಂದರೇ ಕುಷಿಯೋ ಕುಶಿ..
ಇಂದು ಕ್ರಿಸ್ಮಸ್ ಈವ್, ಅಂದರೆ ಕ್ರಿಸ್ಮಸ್ ಹಬ್ಬದ ಮೊದಲ ದಿನ ಅಂದು ಕ್ರಿಸ್ಮಸ್ ಸಂತಾ ಕ್ಲಾಸ್ ಎಂಬಾತನು ಮಕ್ಕಳಿಗೆ ಉಡುಗೊರೆಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಪ್ರತಿಯೊಬ್ಬರಿಗೂ ಕೊಡುತ್ತಾನೆಂದು ಕಥೆಯಿದೆ. ಹೌದು ಕ್ರಿಸ್ಮಸ್ ಹಬ್ಬದಂದು ತಮ್ಮಲ್ಲಿರುವ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡುತ್ತಾರೆ. ಅಧಿಕೃತವಾಗಿ 1870 ರಲ್ಲಿ ಅಮೆರಿಕವು ಕ್ರಿಸ್ಮಸ್ ದಿನವನ್ನು ಬರಲ್ಲ ರಜಾದಿನವನ್ನು ಘೋಷಣೆ ಮಾಡಲಾಯಿತು.
ಕ್ರಿಸ್ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಯೇಸುವಿನ ಜನನ ದಿನದಂದು ಕ್ರಿಸ್ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ. ಏಸುಕ್ರಿಸ್ತ ಗೋಶಾಲೆಯಲ್ಲಿ ಜನಿಸಿದರು. ಅದಕ್ಕಾಗಿ ಒಂದು ಕೊಟ್ಟಿಗೆಯನ್ನು ನಿರ್ಮಿಸಿ ಅದರಲ್ಲಿ ಹಸುವಿನ ಗೊಂಬೆಗಳು, ಯೇಸುವಿನ ಗೊಂಬೆಗಳು ಅಲಂಕರಿಸುತ್ತಾರೆ.
ಯೇಸುವಿನ ಕಥೆ ಕೇಳಿ
ಯೇಸುಕ್ರಿಸ್ತನು ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಇಸ್ರೇಲಿ ಯಾದ ಬ್ಲೆತ್ ಹೆಮ್ ನಗರದಲ್ಲಿ ಜನಿಸಿದರು. ಯಹೂದಿ ಧರ್ಮಕ್ಕೆ ಯೇಸು ಸೇರಿದವರು ಎಂಬ ನಂಬಿಕೆ ಇದೆ. ತಂದೆ ಹೆಸರು ಜೋಸೆಫ್ ಹಾಗೂ ತಾಯಿ ಹೆಸರು ಮೇರಿ. ಕಥೆಯಲ್ಲಿ ತಂದೆ ತಾಯಿಗಳಿಬ್ಬರೂ ಬಡಗಿ ತನ್ನ ತಂದೆಗೆ ಯಾವಾಗಲೂ ಸಹಾಯ ಮಾಡುತ್ತಿದ್ದರು ಮೂವತ್ತನೇ ವಯಸ್ಸಿಗೆ ಸಮಾಜ ಕಲ್ಯಾಣಕ್ಕಾಗಿ ಮನಸಿಟ್ಟರೆ ನಂತರ ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತ ಬೋಧನೆಯನ್ನು ಮಾಡುತ್ತಿದ್ದರು.

ಅವರ ಬೋಧನೆಗಳನ್ನು ಇಷ್ಟಪಡದ ಯಹೂದಿಗಳು, ಯೇಸುವನ್ನು ವಿರೋಧಿಸಲು ಆರಂಭಿಸಿದರು. ಒಂದು ದಿನ ಯೇಸುವನ್ನು ರೋಮನ್ ಗವರ್ನರ್ ಮುಂದೆ ಹಾಜರುಪಡಿಸಿ ಶಿಲುಬೆಗೆ ಏರಿಸುವ ಶಿಕ್ಷೆಯನ್ನು ವಿಧಿಸಿದ್ದರು. ಅಂದು ಶುಕ್ರವಾರ ಅವರನ್ನು ಗಲ್ಲಿಗೇರಿಸಿ ನಂತರ ಜೀಸಸ್ ದೇವರ ಪವಾಡದಿಂದ ಪುನರ್ಜನ್ಮ ಪಡೆದು ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.
ಮನೆ ಮನೆಗೆ ಬರುತ್ತಾನೆ ಸಾಂತಾ ಕ್ಲಾಸ್
ಪ್ರತಿ ಮನೆಯಲ್ಲಿ ನಕ್ಷತ್ರಗಳನ್ನೂ ನೇತು ಹಾಕುತ್ತಾರೆ. ಕಪ್ಪು ಬೆಲ್ಟ್ ಬೂಟುಗಳನ್ನು ಧರಿಸಿ ಕೊಂಡು ಕೆಂಪು ಬಟ್ಟೆ ಹಾಗೂ ಕೆಂಪು ಟೋಪಿ ಧರಿಸಿ, ದಪ್ಪ ಬಿಳಿ ಮೀಸೆಯನ್ನು ಹೊತ್ತು ಹೆಗಲ ಮೇಲೆ ದೊಡ್ಡ ಚೀಲವನ್ನು ಹಿಡಿದುಕೊಂಡು ಬರುತ್ತಾನೆ. ಅವರೇ ಸಾಂತಾ ಕ್ಲಾಸ್

ಸಂತ ನಿಕೋಲಾಸ್ ನಾಲ್ಕನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಈತ ಪ್ರಸಿದ್ಧ ಹಾಗೂ ಉತ್ತರ ಧ್ರುವದಲ್ಲಿ ವಾಸಿಸುತ್ತಾನೆ ಎಂಬುದು ಪ್ರತೀತಿ. ಎಲ್ಲರೂ ಖುಷಿಯಾಗಿರಬೇಕೆಂದು ಬಯಸುತ್ತಿದ್ದ ಈತ ಹಬ್ಬದಂದು ಎಲ್ಲಾ ಮಕ್ಕಳಿಗೆ ಆಟಿಕೆ,ಸಿಹಿ ತಿಂಡಿ ದಾನ ಮಾಡುತ್ತಿದ್ದ. ನಿಕೋಲಸ್ನ ನಿಧನದ ನಂತರ ಈತನ ಅನುಯಾಯಿಗಳು ಈತನ ಸಂಕೇತವಾಗಿ ದಾನ ಧರ್ಮ ಮುಂದುವರಿಸಿದರು. ಯಾವುದಾದರೂ ವೇಷ ಧರಿಸಿ ಮಕ್ಕಳ ಬಳಿ ತೆರಳಿ ಅವರಿಗೆ ಆಟಿಕೆ, ಸಿಹಿತಿಂಡಿ ಹಂಚುತ್ತಿದ್ದರು.

ಆರಂಭದಿಂದ ಕೊನೆಯವರೆಗೂ ಚರ್ಚ್ ಹಾಗೂ ಮನೆಗಳಲ್ಲಿ ಕ್ಯಾಂಡಲ್ ಹಚ್ಚಿ, ಜಪಮಾಲೆ ಹಿಡಿದು ಭಕ್ತಿ, ಆಧ್ಯಾತ್ಮಿಕತೆಯಿಂದ ಪ್ರಾರ್ಥಿಸಲಾಗುತ್ತದೆ. ಕ್ರಿಸ್ಮಸ್ ದಿನದಂದು ಕ್ರೈಸ್ತರ ಪ್ರತಿ ಮನೆಯಲ್ಲೂ ತಾವೇ ಕ್ರಿಸ್ಮಸ್ ಕೇಕ್ ತಯಾರಿಸಿ ಹಂಚುವುದು ವಿಶೇಷವಾಗಿದೆ. ಕ್ರಿಸ್ಮಸ್ ಮರಗಳನ್ನು ವಿಧವಿಧವಾಗಿ ಶೃಂಗರಿಸಿ ಮನೆಯ ಅಂದವನ್ನು ಹೆಚ್ಚಿಸಿ ಸಡಗರ, ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ,