ಬೆಂಗಳೂರು: (ಡಿ.22) Karnataka Band: ಮಹಾರಾಷ್ಟ್ರದಲ್ಲಿ MES ಸಂಘಟನೆಗಳು ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಹಿನ್ನಲೆಯಲ್ಲಿ MES ಸಂಘಟನೆಯ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕನ್ನಡ ಬಂದ್ ಮಾಡಲು ನಿರ್ಧಾರ ಮಾಡಿದೆ.
MES ದಬ್ಬಾಳಿಕೆ ಹಾಗೂ ದೌರ್ಜನ್ಯ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆನೀಡಲಾಗಿದೆ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಕರ್ನಾಟಕ ಬಂದ್ ಗೆ ರಾಜ್ಯವೇ ಒಂದಾಗಬೇಕು ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಕಡೆ ಬಂದ್ ಆಗಬೇಕು.

ಎಂಇಎಸ್ ಸಂಘಟನೆಯವರಿಂದ 70 ವರ್ಷಗಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತದೆ. ಉದ್ಭವ್ ಠಾಕ್ರೆ ದಬ್ಬಾಳಿಕೆ ನಮ್ಮ ರಾಜ್ಯದಲ್ಲಿ ಇರುವುದಿಲ್ಲ ರಾಜ್ಯದಲ್ಲಿ MES ಸಂಘಟನೆ ನಿಷೇಧ ಮಾಡಲೇಬೇಕು ಬೆಳಗಾವಿಯ ರಾಜಕಾರಣಿಗಳು ಇವರ ಏಜೆಂಟ್ ಆಗಿದ್ದಾರೆ. ಕನ್ನಡ ಬಾವುಟಕ್ಕೆ ಬೆಂಕಿ ಇತರೆ ಕನ್ನಡಿಗರಿಗೆ ಬೆಂಕಿ ಇಟ್ಟ ಹಾಗೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಕುಮಾರ್ ಅವರು ಕೂಡಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಸಂಘಟನೆಯನ್ನು ನಿಷೇಧ ಮಾಡುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಸಂಘಟನೆಯ ನಿಷೇಧದ ಕುರಿತು ಡಿಸೆಂಬರ್ 29 ರವರೆಗೆ ಕಾಲಾವಕಾಶ ಒಂದು ವೇಳೆ MES ಸಂಘಟನೆ ನಿಷೇಧ ಮಾಡಿದರೆ ಬಂದು ವಾಪಸ್ ತೆಗೆದುಕೊಳ್ಳುವುದಾಗಿ ವಾಟಾಳ್ ನಾಗರಾಜ್ ಅವರು ತಿಳಿಸಿದ್ದಾರೆ.
ಹೊಸ ವರ್ಷ ಆಚರಣೆಗೆ ತಡೆಯುವುದಿಲ್ಲ:
ಕರ್ನಾಟಕ ಬಂದ್ ನಿಂದ ಹೊಸ ವರ್ಷದ ಆಚರಣೆಗೆ ಅಡ್ಡಿಯಾಗುವುದಿಲ್ಲ ಕರ್ನಾಟಕ ಬಂದ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಇರುತ್ತದೆ 6 ಗಂಟೆ ನಂತರ ಏನು ಬೇಕಾದರೂ ಮಾಡಿಕೊಳ್ಳಲಿ ಸಂಭ್ರಮಾಚರಣೆಗೆ ನಾವು ತೊಂದರೆ ಕೊಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಂದೇಮಾತರಂ ವೇದಿಕೆಯ ಅಧ್ಯಕ್ಷ ಶಿವಕುಮಾರ್ ನಾಯಕ್ ಅವರು ಕರ್ನಾಟಕ ಬಂದ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಲ ಕಾಲ ಗಲಾಟೆ ಉಂಟಾಗಿತ್ತು. ಶಿವಕುಮಾರ್ ನಾಯಕ್ ಅವರ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಸುದ್ದಿಗೋಷ್ಠಿಯಿಂದ ಶಿವಕುಮಾರ್ ಅವರನ್ನು ಹೊರ ಕಳಿಸಲಾಯಿತು.