83 Movie : (ಡಿ.22) : ಭಾರತಕ್ಕೆ ವರ್ಲ್ಡ್ ಕಪ್ ಸಿಕ್ಕಿದಷ್ಟು ಖುಷಿ ಅಷ್ಟೇ ಈ ಚಿತ್ರ ತಂಡಕ್ಕೆ ಸಿಕ್ಕಿದೆ!! ಹೌದು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 83 ಚಿತ್ರಕ್ಕೆ ದೆಹಲಿಸರ್ಕಾರ ಬಂಪರ್ ಬಹುಮಾನ ಘೋಷಿಸಿದೆ.
1983 ರಲ್ಲಿ ಭಾರತ ವಿಶ್ವಕಪ್ ಗೆದ್ದ ಕಥೆಯೊಂದು ತೆರೆಮೇಲೆ ಮೂಡಿ ಬರಲು ಸಿದ್ಧವಾಗಿದೆ. ರಣವೀರ್ ಸಿಂಗ್ ಅವರು ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಹಾಗೂ ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅವರು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕಪಿಲ್ ದೇವ್ ಹಾಗೂ ರಣವೀರ್ ಕಪೂರ್ ಹಾಗೂ ನಟ ಕಿಚ್ಚ ಸುದೀಪ್ ಅವರು 1983 ರಲ್ಲಿ ನೆಡೆದ ವಿಶ್ವಕಪ್ ನೆನಪನ್ನು ಮೆಲಕು ಹಾಕಿದ್ದರು.

ಚಿತ್ರ ತೆರೆಯ ಮೇಲೆ ಬರುವ ಮೊದಲೇ ದೆಹಲಿ ಸರ್ಕಾರ ಚಿತ್ರಕ್ಕೆ ತೆರಿಗೆ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರು ಘೋಷಿಸಿದ್ದಾರೆ. ದೆಹಲಿ ಸರ್ಕಾರಕ್ಕೆ ಧನ್ಯವಾದ ತಿಳಿಸಿರುವ ನಿರ್ದೇಶಕ ಕಬೀರ್ ಖಾನ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bhajarangi 2 :ಪ್ರೀತಿಯ ಅಪ್ಪುಗೆ ‘ಭಜರಂಗಿ-2’ ಅರ್ಪಿಸಿದ ಶಿವಣ್ಣ
ಕಪಿಲ್ ದೇವ ಪಾತ್ರದಲ್ಲಿ ರಣವೀರ್ ಸಿಂಗ್:
ಒಬ್ಬರನ್ನು ಇನ್ನೊಬ್ಬರು ಅನುಕರಿಸಲು ಬಹಳ ಕಷ್ಟ ಆದರೂ ಇಲ್ಲಿ, ಕಪಿಲ್ ದೇವ್ ಅವರನ್ನು ರಣವೀರ್ ಸಿಂಗ್ ಅವರು ಅನುಕರಣೆ ಮಾಡಲು ಹೊರಟಿದ್ದಾರೆ ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಪ್ರತಿದಿನ ನಾಲ್ಕು ಗಂಟೆ ಕ್ರಿಕೆಟ್ ಆಡುತ್ತಾ ತರಬೇತಿಯಲ್ಲಿ ಕಲಿಯುತ್ತಿದ್ದೇನೆ ಎಂದು ಹೇಳಿದ್ದರು. ಅಲ್ಲದೆ ಕಪಿಲ ದೇವ್ ಬೌಲಿಂಗ್ ಸ್ಟೈಲನ್ನು ಅನುಕರಿಸಲು ರಣವೀರ್ ಸಿಂಗ್ ಅವರು ಬಹಳಷ್ಟು ಕಷ್ಟಪಟ್ಟಿದ್ದರು ಎಂದು ಹೇಳಿದ್ದಾರೆ.
83 ಚಿತ್ರದಲ್ಲಿ ಪಂಕಜ ತ್ರಿಪಾಠಿ, ಭಾಸಿನ್ ಜೀವ, ತಾಹೀರ್ ರಾಜ್, ಸಾಕಿಬ್ ಸಲೀಮ್, ಜತಿನ್, ಚಿರಾಗ್ ಪಾಟೀಲ್, ದಿನಕರ ಶರ್ಮಾ, ನಿಶಾಂತ ದಾಹಿಯ, ಸಾಹಿಲ್ ಖಟ್ಟರ್, ಆಮೀ , ಹಾರ್ಡಿ ಸಂಧು, ಅದ್ದಿನಾಥ್, ಆರ್ ಬದ್ರಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ 83 ಸಿನೆಮಾ ಡಿ.24 ರಂದು ಚಿತ್ರಮಂದಿರಗಳಲ್ಲಿ ಹಿಂದಿ ಕನ್ನಡ ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.