Bone Marrow: ಅಪ್ಪ ಬಡಗಿ, ಅನಕ್ಷರಸ್ಥ ನನ್ನೊಂದಿಗೆ ಹುಟ್ಟಿದವರು ನಾಲ್ವರು, ನನ್ನ ರಕ್ತವನ್ನು ದಿನಕ್ಕೊಮ್ಮೆಯಾದರೂ ವರ್ಗಾವಣೆ ಮಾಡಬೇಕು ನನ್ನ ಅಮ್ಮ ಆಸ್ಪತ್ರೆಗೆ ಕರೆದೊಯ್ಯುತ್ತಾಳೆ ಎಂದು ಹೇಳಿದ್ದು ಬೇರೆ ಯಾರೂ ಇಲ್ಲ ಸ್ವತಃ ಡಾ. ಮೊಹಮ್ಮದ್ ಅನ್ಸರ್.
15 ವರ್ಷಗಳ ಹಿಂದೆ ಉತ್ತರಪ್ರದೇಶದ ಬಡಗಿ ಒಬ್ಬನ ಮಗ ವೈದ್ಯನಾಗುವ ಕನಸು ಕಂಡಿದ್ದ. ಅದೇ ರೀತಿ ಗದಗ ಜಿಲ್ಲೆಯ ಮುಂಡರಗಿಯ ಎಸ್ ಬಿ ಎಸ್ ಆಯುರ್ವೇದಿಕ ಮೆಡಿಕಲ್ ಕಾಲೇಜು ಸೇರಿ ನಂತರ ಲಕ್ನೋಗೆ ಮರಳಿ ವೈದ್ಯಕೀಯ ಸೇವೆಯನ್ನು ಮಾಡುವ ಕನಸನ್ನು ಹೊತ್ತಿದ್ದ. ಹೀಗಿರುವಾಗ ಕೋವಿಡ್ ಮಹಾಮಾರಿ ಜಗತ್ತಿಗೆ ಒಕ್ಕರಿಸಿತು.
ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಕೋವಿಡ್ ನಿಂದಾ ಬಳಲುವವರಿಗೆ ಚಿಕಿತ್ಸೆ ಕೊಡುವುದು ಧರ್ಮವಾಗಿತ್ತು. ಹಗಲು-ರಾತ್ರಿ ರೋಗಗಳ ಚಿಕಿತ್ಸೆಯಲ್ಲಿ ಮುಳುಗಿದ ಡಾ.ಮಹಮ್ಮದ್ ಗೆ ಇಂದು ಅಪ್ಲಾಸ್ಟಿಕ್ ಅನಿಮಿಯ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಸದ್ಯ ಲಕ್ನೋದಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆಯುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ. ಬೋನ್ ಮ್ಯಾರೋ ಚಿಕಿತ್ಸೆ ಅನಿವಾರ್ಯವಾಗಿದ್ದು. ಸುಮಾರು 20 ಲಕ್ಷ ರುಪಾಯಿ ಖರ್ಚಾಗಲಿದೆ ಎಂದು ಬೆಂಗಳೂರಿನ ವೈದ್ಯರು ತಿಳಿಸಿದ್ದಾರೆ.
ಮಹಮ್ಮದ್ ಅನ್ಸರ್ ಅವರು ಉತ್ತರ ಪ್ರದೇಶದ ಅಮೇತೆಯಲ್ಲಿ ಜನಿಸಿದರು. ಅಪ್ಪ ಬಡಗಿ ಕೆಲಸ ಮಾಡಿಕೊಂಡು ಇದ್ದಾರೆ. ತಮ್ಮ ಸಣ್ಣ ಆದಾಯದಿಂದ ತಮ್ಮ ಕುಟುಂಬವನ್ನು ಸಂಭಾಳಿಸಲು ಕಷ್ಟವಾಗಿದೆ. ಅಪ್ಪ-ಅಮ್ಮ ಎಂದಿಗೂ ಶಾಲೆಯ ಮುಖ ಕಂಡವರಲ್ಲ. ನಮ್ಮ ಇಡೀ ಕುಟುಂಬದಲ್ಲಿ ನಾನೇ ಕಾಲೇಜಿನ ಮೆಟ್ಟಿಲು ಹತ್ತಿದವನು.
ನನ್ನಮ್ಮನಿಗೆ ನಾನು ಡಾಕ್ಟರ್ ಆಗುತ್ತೇನೆ ಎನ್ನುವ ಖುಷಿಗಿಂತ ನಾನು ಅಷ್ಟು ದೂರ ಹೋಗುತ್ತೇನೆ ಎನ್ನುವ ದುಃಖ ಹೆಚ್ಚಾಗಿತ್ತು. ಐದು ವರ್ಷದಲ್ಲಿ ಡಾಕ್ಟರ್ ರಾಗಿ ಬರ್ತೀನಿ ಎಂದು ಹೇಳಿ ಬಂದಿದ್ದೆ. ಆದರೆ ಈಗ ಅಮ್ಮ ನ್ ಸ್ವತಃ ಹಾಸ್ಪಿಟಲ್ ಗೆ ಬಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಕೋವಿಡ್ ಬಂದ ನಂತರ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಕರ್ತವ್ಯವನ್ನು ನಿಭಾಯಿಸಿದ್ದೇವು. ಆದರೆ ಕೆಲ ತಿಂಗಳ ಹಿಂದೆ ಪದೇ ಪದೇ ಜ್ವರ ಕಾಡಲಾರಂಭಿಸಿತು. ಆಸ್ಪತ್ರೆಯಲ್ಲಿ ಸಾಕಷ್ಟು ಸಮಯ ಇರುತ್ತಿದ್ದೆ.
ಸಾಮಾನ್ಯ ಜ್ವರ ಎಂದು ಸುಮ್ಮನಿರುತ್ತಿದ್ದೆ ಆದರೆ ವಿಪರೀತ ಸುಸ್ತಾಗಿತ್ತು. ಎಲ್ಲಾ ರೀತಿಯ ಪರೀಕ್ಷೆಗಳು ಮಾಡಿಸಿಕೊಂಡಾಗ ನನಗೆ ಅಪ್ಲಾಸ್ತಿಕ್ ಅನೀಮಿಯಾ ಬಂದಿದೆ ಎಂದು ಖಚಿತವಾಯಿತು. ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಬಿಡದ ಈ ಖಾಯಿಲೆ. ಬೋನ್ ಮ್ಯಾರೋ ಕಸಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಬೋನ್ ಮ್ಯಾರೋ ಮಾಡಿಸಿಕೊಳ್ಳಲು ಕುಟುಂಬದ ವ್ಯಕ್ತಿಗಳೇ ಆಗಬೇಕು ಅದರಲ್ಲೂ ಜೊತೆ ಹುಟ್ಟಿದ ಅಣ್ಣತಮ್ಮ ರಿಂದಲು ಮಾಡಿಸಬೇಕು. ಡಾ. ಮಹಮ್ಮದ್ ಅವರ ತಮ್ಮನ
ಬೋನ್ ಮ್ಯಾರೋ ಮ್ಯಾಚ್ ಆಗುತ್ತಿದ್ದು ಇದನ್ನು ಕಸಿಮಾಡಲು 20 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿನಿತ್ಯ ನನ್ನ ಅಮ್ಮ ನನಗೆ ರಕ್ತ ಕೊಡಿಸಲು ಆಸ್ಪತ್ರೆಗೆ ಬರುತ್ತಾರೆ ಅವರ ಮುಖ ನೋಡಲು ಸಂಕಟವಾಗುತ್ತಿದೆ ಎನ್ನುತ್ತಾರೆ ಡಾ. ಮಹಮ್ಮದ್
ಚಿಕಿತ್ಸೆಗಾಗಿ ಸಹಾಯ ಹಸ್ತವನ್ನು ಕೋರಿದ್ದಾರೆ. ದಾನಿಗಳು ವೈದ್ಯರ ಚಿಕಿತ್ಸೆಗಾಗಿ ಹಣವನ್ನು ಈ ಮೂಲಕ ನೀಡಬಹುದು:
Bank Details
Mohd Ansar and Rajiya
Bank of BarodaBranch: CHATHU-UP
A/C Number: 47600100000835
IFSC Code: BARB0CHATHU
Google Pay: 7054146313