ನವದೆಹಲಿ: (ಡಿ.21) Kannada Flag: ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು MES ಕಾರ್ಯಕರ್ತರು ಸುಟ್ಟುಹಾಕಿದ್ದು ಈ ವಿಚಾರವಾಗಿ ಕರ್ನಾಟಕವೇ ಹೊತ್ತಿ ಉರಿಯುತ್ತಿದ್ದರೂ ರಾಜ್ಯದಿಂದ ಆಯ್ಕೆಯಾದ ಸಂಸದರು ತುಟಿ ಬಿಚ್ಚಿಲ್ಲ.
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟುಹಾಕಿದರು, ಆನಂತರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಒಡೆದು ಹಾಕಿದರೂ ತಮಗೆ ಅರಿವಿಲ್ಲದಂತೆಯೇ ಸಂಸದರು ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಸದರು ಸಂಸತ್ತಿನಲ್ಲಿ ಮಾತನಾಡಿಲ್ಲ.

ದೆಹಲಿಯಲ್ಲಿ ಚಳಿಗಾಲ ಸಂಸತ್ ಅಧಿವೇಶನ ನಡೆಯುತ್ತಿದ್ದು ಬೆಳಗಾವಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವ ವಿವಾದಕ್ಕೆ ರಾಜ್ಯದ ಸಂಸದರು ಕೂಡ ಧ್ವನಿ ಎತ್ತಿ ಮಾತಾಡಲಿಲ್ಲ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸೇರಿ ರಾಜ್ಯದಿಂದ 28ಮಂದಿ ಲೋಕಸಭೆ ಮತ್ತು 11 ಮಂದಿ ರಾಜ್ಯಸಭ ಸದಸ್ಯರಿದ್ದಾರೆ. ಈ ಈ ಪೈಕಿ ಮೂವರು ಕೇಂದ್ರ ಸಚಿವರು ಹಾಗೂ ಒಬ್ಬರು ರಾಜ್ಯಸಭೆ ವಿಪಕ್ಷ ನಾಯಕರಿದ್ದಾರೆ. ಕರ್ನಾಟಕದ ಪರ ಮಾತನಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಇದನ್ನೂ ಓದಿ: Mekedatu Project:ಜ.9 ದಿಂದ ಮೇಕೆದಾಟು ಯೋಜನೆ ಆರಂಭಿಸುವ ಕುರಿತು ಪಾದಯಾತ್ರೆ: ಡಿ.ಕೆ ಶಿವಕುಮಾರ್
ಕರ್ನಾಟಕದಲ್ಲಿ ನಡೆಯುತ್ತಿರುವ ವಿವಾದ ಬಗ್ಗೆ ಯಾವುದೇ ರಾಜಕೀಯ ಪಕ್ಷ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಸ್ಸು ಮಾಡಿಲ್ಲ. ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರದ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಮೌನ ಮುರಿದಿದೆ.