ಮಂಗಳೂರು: (ಡಿ.21) Lawyer Rajesh Bhat: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಹಿನ್ನೆಲೆ ಆರೋಪಿ ವಕೀಲ ಎನ್ ರಾಜೇಶ್ ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಪ್ರಕರಣವೇನು?
ರಾಜೇಶ್ ಅವರು ತಮ್ಮ ಕಚೇರಿಯಲ್ಲಿ ಇಂಟರ್ನ್ಶಿಪ್ ಗಾಗಿ ಬಂದಿದ್ದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿನಿಗೆ ದೂರು ನೀಡದಂತೆ ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ ವಿರುದ್ಧ ದೂರು ದಾಖಲಿಸಿದ್ದರು.
ವಿದ್ಯಾರ್ಥಿನಿ ಕೊಟ್ಟ ದೂರು ಹಿನ್ನೆಲೆ ಆರೋಪಿ ರಾಜೇಶ ನಾಪತ್ತೆಯಾಗಿದ್ದರು. ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ಔಟ್ಲುಕ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆರೋಪಿ ವಕೀಲರಿಗೆ ಸಹಕಾರ ನೀಡಿದ ಕಾರಣಕ್ಕಾಗಿ ವಕೀಲನ ಪತ್ನಿ ಸೇರಿದಂತೆ ಹಲವರನ್ನು ಬಂದಿಸಿ ದ್ದರೂ ವಕೀಲ ರಾಜೇಶ್ ಪತ್ತೆಯಾಗಿರಲಿಲ್ಲ.
ಇದೀಗ ಆರೋಪಿ ಘಟನೆ ನಡೆದ ತಿಂಗಳುಗಳ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಮಂಗಳೂರಿನ ವಕೀಲ ರಾಜೇಶ್ ಭಟ್ ಅವರು ಜೆಎಂಎಫ್ಸಿ ಕೋರ್ಟಿಗೆ ಮಧ್ಯಂತರ ಜಾಮೀನು ಸಲ್ಲಿಸಿದ್ದರು. ಹಳೆ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ನ್ಯಾಯಾಲಯ ರಾಜೇಶ್ ಭಟ್ ನನ್ನು ಬಂಧಿಸಿದೆ.

ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದ ವಕೀಲ;
ವಕೀಲ ರಾಜೇಶ್ ಭಟ್ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಕೇಸ್ ದಾಖಲಿಸಿದಂತೆ ಒತ್ತಡ ಹೇರಿದ್ದರು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದರು.
ವಕೀಲ ರಾಜೇಶ್ ಭಟ್ ವಿರುದ್ದ ಅಕ್ಟೋಬರ್ 19ರಂದು ಸಂತ್ರಸ್ಥ ಯುವತಿ ಲೈಂಗಿಕ ಕಿರುಕುಳದ ದೂರು ನೀಡಿದ್ದಳು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಆರೋಪಿ ರಾಜೇಶ್ ಭಟ್ ಬರೋಬ್ಬರಿ ಎರಡು ತಿಂಗಳ ಬಳಿಕ ಮಂಗಳೂರಿನ ಮೂರನೇ ಜೆಎಂಎಫ್‌ಸಿ ಕೋರ್ಟ್‌ಗೆ ಶರಣಾಗಿದ್ದಾರೆ.
ಈ ನಡುವೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನಿಗೆ ಆರೋಪಿ ರಾಜೇಶ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ಜಾಮೀನು ತಿರಸ್ಕರಿಸಿದ ನ್ಯಾಯಾಲಯ ರಾಜೇಶ್ ಭಟ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ. ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ವಕೀಲ ರಾಜೇಶ್ ಭಟ್ ಅಂಬುಲೆನ್ಸ್‌ನಲ್ಲಿಯೇ ನ್ಯಾಯಾಲಯಕ್ಕೆ ಶರಣಾಗಿದ್ದ ಎಂಬ ಮಾಹಿತಿಯಿದೆ. ಆದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪೊಲೀಸ್ ವಾಹನದಲ್ಲೇ ಆರೋಪಿಯನ್ನು ಕರೆದೊಯ್ಯಲಾಯಿತು.
ಈ ನಡುವೆ ಇಂದು ಪ್ರಧಾನ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು ಪೊಲೀಸರು ಆರೋಪಿ ವಕೀಲ ರಾಜೇಶ್ ಭಟ್‌ನನ್ನು ಪೊಲೀಸ್ ಕಸ್ಟಡಿಗೆ ಕೇಳುವ ನಿರ್ಧಾರ ಮಾಡಿದ್ದಾರೆ. ಸಂತ್ರಸ್ಥ ಯುವತಿ ವಕೀಲ ರಾಜೇಶ್ ಭಟ್ ವಿರುದ್ದ ಸಾಕಷ್ಟು ಆರೋಪ ಮಾಡಿರುವುದರಿಂದ ಆ ಎಲ್ಲದರ ಬಗ್ಗೆಯೂ ಪೊಲೀಸ್ ವಿಚಾರಣೆ ನಡೆಯಲಿದೆ