Secular TV
Tuesday, January 31, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

D K Shivakumar:ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ! ನನಗೆ ಯಾರೂ ಮತಾಂತರಕ್ಕೆ ಬಲವಂತ ಮಾಡಿಲ್ಲ: ಡಿಕೆ ಶಿವಕುಮಾರ್

Secular TVbySecular TV
A A
Reading Time: 1 min read
ಗಣಪತಿ ಮೂರ್ತಿ 2-4 ಅಡಿ ನಿರ್ಬಂಧ ಹಿಂಪಡೆಯಲು ಸರ್ಕಾರಕ್ಕೆ ಡಿಕೆಶಿ ಆಗ್ರಹ
0
SHARES
Share to WhatsappShare on FacebookShare on Twitter

ಬೆಳಗಾವಿ: (ಡಿ.21) D K Shivakumar: ಬೆಳಗಾವಿಯಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ,ನಾವು ಮೊದಲಿನಿಂದಲೂ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಈ ಮಸೂದೆ ಮಂಡನೆಯನ್ನು ನಾವು ಆಕ್ಷೇಪಿಸುತ್ತೇವೆ.

ಈ ಮಸೂದೆ ಸಂವಿಧಾನ ವಿರುದ್ಧವಾಗಿದ್ದು, ನಾವು ಅದನ್ನು ವಿರೋಧಿಸಲೇಬೇಕಿದೆ. ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸಲು, ರಾಜಕೀಯ ಉದ್ದೇಶಕ್ಕಾಗಿ ವಿಷಯಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ.

ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಎಂಬ ಕಾನೂನು ಈಗಾಗಲೇ ಇದ್ದರೂ ಧಾರ್ಮಿಕ ಸ್ವಾತಂತ್ರ್ಯ, ಬದುಕಿನ ಹಾಗೂ ವಿಚಾರದ ಹಕ್ಕನ್ನು ಯಾರು ಕಸಿಯಲು ಆಗುವುದಿಲ್ಲ. ಇದು ಎಲ್ಲ ಧರ್ಮಕ್ಕೂ ಸೇರಿದ ವಿಚಾರ. ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲವೂ ಇದರ ವ್ಯಾಪ್ತಿಯಲ್ಲಿದೆ.

ಇಸ್ಕಾನ್, ಅಮೃತಾನಂದಮಯಿ ಆಶ್ರಮ ಸೇರಿದಂತೆ ಹಲವೆಡೆ ವಿದೇಶದಿಂದ ಅನ್ಯ ಧರ್ಮದವರು ಬಂದು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುತ್ತಾರೆ. ಹೀಗಿರುವಾಗ ಈ ಮಸೂದೆ ಎಲ್ಲರಿಗೂ ಕಸಿವಿಸಿ ವಾತಾವರಣ ಸೃಷ್ಟಿಸುತ್ತಿದೆ.

D K Shivakumar

ಎಲ್ಲ ಜನಾಂಗದವರಿಗೂ ಬದುಕುವ ಹಕ್ಕಿದೆ

ಇದು ಜಾತ್ಯಾತೀತ ರಾಜ್ಯ, ಇದೊಂದು ಶಾಂತಿಯ ನಾಡು. ಇಲ್ಲಿ ಎಲ್ಲ ಜನಾಂಗದವರು ಬದುಕಲು ಅವಕಾಶ ಇದೆ ಎಂದು ಹೊರಗಿನವರು ಗೌರವ ಇಟ್ಟುಕೊಂಡಿದ್ದಾರೆ. ಆದರೆ ಇಲ್ಲಿ ಶಾಂತಿ ಕದಡಲು ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಕ್ರೈಸ್ತರನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದ್ದಾರೆ.

ಈ ದೇಶವನ್ನು ಮೊಘಲರು, ಪೋರ್ಚುಗೀಸರು ಹಾಗೂ ಬ್ರಿಟಿಷರು ಆಳಿದ್ದಾರೆ. ಅವರ ಜನಸಂಖ್ಯೆ ಎಲ್ಲಿ ಹೆಚ್ಚಾಗಿದೆ. ಈಗಲೂ ಸುಮಾರು ಶೇ. 2.30 ರಷ್ಟು ಜನ ಇದ್ದಾರೆ.

ಎಲ್ಲ ನಾಯಕರು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಅಂತಾರೆ. ನಾನು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ. ನನಗೆ ಯಾರೂ ಬಂದು ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಆಗಲಿ ಮತಾಂತರಕ್ಕೆ ಬಲವಂತ ಮಾಡಿಲ್ಲ.

ನನಗೆ ಯಾರು ಬಲವಂತ ಮಾಡಿಲ್ಲ:

21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾದರೂ ಒಂದು ಕಡೆ. ಬಲವಂತದ ಮತಾಂತರ ಆಗಿರುವ ಪ್ರಕರಣ ಇದೆಯಾ? ಈ ಸಮುದಾಯ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ಹಿಂದೂ ಧರ್ಮದಲ್ಲೂ ಧಾರ್ಮಿಕ ಸೇವೆ ಮಾಡಿಕೊಂಡು ಬರಲಾಗುತ್ತಿದೆ. ನಾವು ಕೂಡ ಯಾರಿಗೂ ಹಿಂದೂ ಧರ್ಮಕ್ಕೆ ಮತಾಂತರ ಆಗಿ ಎಂದು ಹೇಳುತ್ತಿಲ್ಲ. ಈ ರೀತಿ ಮಾಡುವುದು ಸರಿಯಲ್ಲ. ನಾವು ಈ ಮಸೂದೆ ಖಂಡಿಸುತ್ತೇವೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಲಿದೆ.

ಇಷ್ಟು ವರ್ಷ ಆಗದ ಬಲವಂತ ಮತಾಂತರ ಈಗ ಯಾರು ಮಾಡುತ್ತಿದ್ದಾರೆ. ಮೊಘಲರು ಎಷ್ಟು ವರ್ಷ ದೇಶ ಆಳಿದ್ದಾರೆ. ಎಷ್ಟು ಜನ ಮುಸಲ್ಮಾನರಿದ್ದಾರೆ? ಈಗಲೂ ಶೇ. 11-12 ರಷ್ಟು ಮುಸಲ್ಮಾನರಿದ್ದಾರೆ. ಹಿಂದೂ ರಾಷ್ಟ್ರ ಇದು. ಎಲ್ಲಿ ಬಲವಂತ ಮತಾಂತರ ನಡೆಯುತ್ತಿದೆ.

ಸುಮ್ಮನೆ ರಾಜಕೀಯವಾಗಿ ಇದನ್ನು ಉಪಯೋಗಿಸಿಕೊಳ್ಳುವುದು ಸರಿಯಲ್ಲ. ಇಬ್ಬರ ಹೃದಯ ಪರಸ್ಪರ ಇಷ್ಟಪಟ್ಟು ಪ್ರೀತಿಸಿದರೆ ಅದು ಲವ್ ಜಿಹಾದ್ ಆಗುತ್ತದಾ? ಅಕ್ಕಿ ಒಂದು ಕಡೆ, ಅರಿಶಿನ ಒಂದು ಕಡೆ ಇರುತ್ತದೆ. ಅವೆರಡೂ ಸೇರಿದರೆ ಮಾತ್ರ ಮಂತ್ರಾಕ್ಷತೆ ಆಗುತ್ತದೆ.

ಇದನ್ನೂ ಓದಿ: Bone Marrow: ಕೋವಿಡ್ ರೋಗಗಳ ಚಿಕಿತ್ಸೆಯಲ್ಲಿ ನೆರವಾಗಿದ್ದ ಡಾ.ಮಹಮ್ಮದ್ ಗೆ ಬೇಕಿದೆ ನೆರವಿನ ಹಸ್ತ

ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನಮಗಿಲ್ಲ

ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಹಾಗೂ ಜೆಡಿಎಸ್ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರೋ ಪುಂಡರು ದುಷ್ಕೃತ್ಯ ಮಾಡಿದರು ಎಂದ ಮಾತ್ರಕ್ಕೆ ಒಂದು ರಾಜಕೀಯ ಪಕ್ಷವಾಗಿ ನಾವು ಸಾಕ್ಷ್ಯಾಧಾರ ಇಲ್ಲದೆ ಒಬ್ಬರ ಮೇಲೆ ಆರೋಪ ಮಾಡಲು ಸಾಧ್ಯವಿಲ್ಲ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ನಾವು ಆಗ್ರಹಿಸುತ್ತೇವೆ’ ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಈ ದುಷ್ಕೃತ್ಯ ಎಸಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ರಾಜಕೀಯ ನಾಯಕರೆಂದರೆ ಅನೇಕರು ಬಂದು ಭೇಟಿ ಮಾಡಿ ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ಯಾರೋ ಎಲ್ಲೋ ಕಲ್ಲು ಹೊಡೆದರೆ, ಆತ ದಳದ ನಾಯಕರ ಜತೆ ಫೋಟೋ ತೆಗಿಸಿಕೊಂಡ ಮಾತ್ರಕ್ಕೆ ಆ ಕೆಲಸ ದಳದವರು ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ?’ ಎಂದರು.

ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನಮಗಿಲ್ಲ. ಸಣ್ಣವರ ಬಗ್ಗೆ ಇದ್ದರೆ ಮಾತನಾಡುತ್ತೇವೆ. ದೊಡ್ಡವರ ಸುದ್ದಿ ನಮಗೇಕೆ?’ ಎಂದು ಉತ್ತರಿಸಿದರು.

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
Mekedatu Dam Project:ಮೇಕೆದಾಟು ಯೋಜನೆ ಆರಂಭಿಸುವಂತೆ ಕಾಂಗ್ರೆಸ್ ನಿಂದ ಪಾದಯಾತ್ರೆ

Mekedatu Project:ಜ.9 ದಿಂದ ಮೇಕೆದಾಟು ಯೋಜನೆ ಆರಂಭಿಸುವ ಕುರಿತು ಪಾದಯಾತ್ರೆ: ಡಿ.ಕೆ ಶಿವಕುಮಾರ್

Kannada Flag:ಕನ್ನಡ ಧ್ವಜ ಸುಟ್ಟುಹಾಕಿದ್ದರೂ,ಕರ್ನಾಟಕದ ಪರ ಧ್ವನಿಯೆತ್ತದ ರಾಜ್ಯದ ಸಂಸದರು

Kannada Flag:ಕನ್ನಡ ಧ್ವಜ ಸುಟ್ಟುಹಾಕಿದ್ದರೂ,ಕರ್ನಾಟಕದ ಪರ ಧ್ವನಿಯೆತ್ತದ ರಾಜ್ಯದ ಸಂಸದರು

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist