ಪಾಕಿಸ್ತಾನ:( ಡಿ.21) Hindu Temple: ಪಾಕಿಸ್ತಾನದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ ನಡೆದಿದ್ದು. ಪಾಕಿಸ್ತಾನದ ಉರ್ದು ಚಾನಲ್ ಒಂದರಲ್ಲಿ ಈ ಬಗ್ಗೆ ವರದಿ ಮಾಡಿದ್ದು ಕರಾಚಿಯ ಲೈನ್ ಚೋರ್ ಪ್ರದೇಶದಲ್ಲಿರುವ ಹಿಂದೂ ದೇಗುಲಕ್ಕೆ ನುಗ್ಗಿದ ದುಷ್ಕರ್ಮಿ ಗರ್ಭಗುಡಿಯಲ್ಲಿದ್ದ ಜೋಗ್ ಮಾಯಾದೇವಿಯ ಮೂರ್ತಿಯನ್ನು ಸುತ್ತಿಗೆಯಿಂದ ಹೊಡೆದು ಧ್ವಂಸ ಮಾಡಿದ್ದಾರೆ.
ದುಷ್ಕರ್ಮಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಆರೋಪಿಯ ವಿರುದ್ಧ ಧರ್ಮನಿಂದನೆ ಗೆ ಸಂಬಂಧಪಟ್ಟ ಕೇಸು ದಾಖಲಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನ ಸರ್ಕಾರ ಬೆಂಬಲಿತ ಭಯೋತ್ಪಾದನೆ ಎಂದು ಸಿರ್ಸಾ ಕ್ವಿಟ್ ಮಾಡಿದೆ.
ಪಾಕಿಸ್ತಾನದಲ್ಲಿ ಪದೇಪದೇ ಹಿಂದುಗಳ ಮೇಲೆ ಆಕ್ರಮಣ ನಡೆಯುತ್ತಿದ್ದರೂ ಸರ್ಕಾರ ಸುಮ್ಮನಿದೆ. ದೇಗುಲಗಳನ್ನು ದಂಸ ಮಾಡಲಾಗುತ್ತಿದ್ದು ಈ ವಿಚಾರವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕು ಎಂದು ಸಿರ್ಸ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರನ್ನು ಒತ್ತಾಯಿಸಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಿಂಧು ಪ್ರಾಂತ್ಯದಲ್ಲಿರುವ ಹನುಮಾನ ದೇವಿಯ ಮಠವನ್ನು ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಅಪವಿತ್ರ ಗೊಳಿಸಿತ್ತು ಮಂದಿರದ ಲಾಕನ್ನು ಮುರಿದು ನಗದು ಆಭರಣಗಳನ್ನು ಕಳವು ಮಾಡಿದ್ದರು ಹಾಗೂ ದೇವಿಯ ಕುತ್ತಿಗೆಯಲ್ಲಿದ್ದ ಬೆಳ್ಳಿ ನೆಕ್ಲೆಸ್ ಕೂಡ ಕಳವು ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಆಗಸ್ಟ್ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ಇಂಥದ್ದೆ ಘಟನೆ ನಡೆದಿದ್ದು ಸಿದ್ಧಿವಿನಾಯಕ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಗರ್ಭಗುಡಿಯಿಂದ ತೆಗೆದು ಬೆಂಕಿಯಿಂದ ವಿಡಿಯೋಗಳು ಬಯಲಾಗಿದ್ದವು ಆಕ್ರೋಶ ವ್ಯಕ್ತವಾಗಿತ್ತು. ಘಟನೆಯಲ್ಲಿ ಭಾಗಿಯಾಗಿದ್ದ 20 ಜನರನ್ನು ಬಂಧಿಸಿ 150 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಇದೇ ವಿಚಾರವಾಗಿ ಪಾಕ ಸುಪ್ರೀಂಕೋರ್ಟ್ ಕೂಡ ಪೊಲೀಸರಿಗೆ ಛೀಮಾರಿ ಹಾಕಿತ್ತು ಆದರೂ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.