ಬೆಳಗಾವಿ: (ಡಿ.21): Anti Conversion Bill: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದರು,
ಮಧ್ಯಾಹ್ನ ನಂತರ ಕಲಾಪ ಆರಂಭವಾಯಿತು. ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ಅವಕಾಶ ನೀಡಿದ್ದು ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ನೀಡಿರುವ ಮತಾಂತರ ನಿಷೇಧ ಕಾಯಿದೆ ವಿಧೇಯಕ ಮಂಡನೆಯಲ್ಲಿರುವ ಪ್ರಮುಖ ಅಂಶಗಳು:
1.ಬಲವಂತದ ಮತಾಂತರ ಶಿಕ್ಷಾರ್ಹ ಎಂಬ ಪ್ರಕಾರವೇ ಸಿದ್ಧಾಂತ ಹಂತದಲ್ಲಿದೆ.
- ಯಾವುದೇ ವ್ಯಕ್ತಿ ಅಥವಾ ಸಮುದಾಯದಿಂದ ಬಲವಂತದ ಮತಾಂತರ ಮಾಡುವ ಹಾಗಿಲ್ಲ.
- ಯಾವುದೇ ವ್ಯಕ್ತಿ ಮತಾಂತರ ಹೊಂದಲು ಇಚ್ಚಿಸಿದಲ್ಲಿ ಪ್ರಾಧಿಕಾರದ ಮುಂದೆ ಎರಡು ತಿಂಗಳ ಮೊದಲೇ ಅರ್ಜಿಯನ್ನು ಸಲ್ಲಿಸಬೇಕು.
4.ಅರ್ಜಿ ಸಲ್ಲಿಸಿದ ವ್ಯಕ್ತಿಗೆ ತನ್ನ ಇಚ್ಛೆಯಂತೆ ನೀಡಿರುವ ಅರ್ಜಿಯನ್ನು ಹಿಂಪಡೆಯಲು ಸ್ವಾತಂತ್ರ್ಯವಿರುತ್ತದೆ.
- ಮತಾಂತರ ಆಗಲು ಬಯಸುವ ವ್ಯಕ್ತಿಯು ತನ್ನ ಖಾಸಗಿತನವನ್ನು ಕಾಪಾಡಲು ಹಾಗೂ ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾಂತರ ಪ್ರಕ್ರಿಯೆ ಗೌಪ್ಯವಾಗಿ ಇಡುವಂತಿಲ್ಲ.
- ಮತಾಂತರ ಪ್ರಕ್ರಿಯೆ ಯೊಳಗೆ ಯಾವುದೇ ವ್ಯಕ್ತಿಯನ್ನು ಬಲವಂತ ಮಾಡಲು ಅವಕಾಶವಿಲ್ಲ.
- ವ್ಯಕ್ತಿಯನ್ನು ಬಲವಂತವಾಗಿ ಮತಾಂತರಕ್ಕೆ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಬಹುದು.
- ಬಂಧಿತವಾಗಿರುವ ವ್ಯಕ್ತಿಗೆ ಜಾಮೀನು ಪಡೆಯಲು, ಜಾಮೀನುರಹಿತ ಇಲ್ಲದಂತೆ ಪರಿಗಣಿಸುವುದು.
- ಮತಾಂತರ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡಗಳು ಹಾಗೂ ಪ್ರಾರ್ಥನಾ ಕೇಂದ್ರಗಳಲ್ಲಿ ಯಾರಿಗೂ ಗೊತ್ತಿಲ್ಲದೆ ಮಾಡುವಂತಿಲ್ಲ.
- ನಿಗದಿತ ಸ್ಥಳದಲ್ಲಿ ಕಾನೂನುಬದ್ಧವಾಗಿ ಮತಾಂತರ ಪ್ರಕ್ರಿಯೆ ಮಾಡುವುದು ಕಡ್ಡಾಯವಾಗಿದೆ.
- ಮತಾಂತರವಾಗಲು ಮುಂದಾಗಿರುವ ವ್ಯಕ್ತಿ ಕನಿಷ್ಠ 60 ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ತಿಳಿಸಬೇಕು.
- ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶವಿದೆ.
- ಮತಾಂತರಗೊಂಡ ವ್ಯಕ್ತಿಯು ಮತಾಂತರಗೊಂಡ ದಿನಾಂಕದಿಂದ ಹಿಡಿದು ಮೂಲಧರ್ಮ ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.
- ಅಪರಾಧ ಪುನರಾವರ್ತನೆ ಆದಲ್ಲಿ 5 ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೆ ಅವಕಾಶವಿದೆ ಹಾಗೂ ಮತಾಂತರದ ಉದ್ದೇಶದಿಂದ ನ್ಯಾಯಾಲಯಕ್ಕೆ ಅವಕಾಶವಿದೆ.
- ಅಪ್ರಾಪ್ತ ವ್ಯಕ್ತಿ ಮಹಿಳೆಯರ ಎಸ್ ಟಿ ಅಥವಾ ಎಸ್ಟಿಗೆ ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ 10 ವರ್ಷದ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಇದರ ಜೊತೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.
- ಬಲವಂತದ ಮತಾಂತರಕ್ಕೆ ಒಳಗಾದ ವ್ಯಕ್ತಿಗೆ 5ಲಕ್ಷ ಗರಿಷ್ಠ ಪರಿಹಾರ ಕೊಡಿಸಲು ಅವಕಾಶವಿದೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021 ಮಂಡನೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ಸ ಪಕ್ಷ ವಿರೋಧ ವ್ಯಕ್ತಪಡಿಸಿ ವಿರೋಧ ಪಕ್ಷಗಳ ಗದ್ದ ನಡುವೆ ವಿಧೇಯಕ ಮಂಡನೆ ಮಾಡಲಾಯಿತು.

ಮತಾಂತರ ನಿಷೇಧ ಕಾಯಿದೆ ವಿಧೇಯಕ ಕುರಿತು ಸದನದಲ್ಲಿ ಆಕ್ರೋಶ
ವಿಧೇಯಕ ಮಂಡನೆ ಮಾಡಿರುವುದಕ್ಕೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದು ಜನವಿರೋಧಿ ಕಾಯ್ದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿ, ಸದನದಲ್ಲಿ ಇಷ್ಟಬಂದಂತೆ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು ಇಂತಹ ಕೆಟ್ಟ ಸರ್ಕಾರ ಕರ್ನಾಟಕದಲ್ಲಿ ಇತಿಹಾಸದಲ್ಲಿ ಬರುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕದ್ದುಮುಚ್ಚಿ ಏಕೆ ಮಸೂದೆ ತರುತ್ತೀರಿ ರಾಜಾರೋಷವಾಗಿ ತನ್ನಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು. ಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಮಾಹಿತಿ ತಿಳಿಸಿಲ್ಲ ಇದರ ಹಿಂದೆ ಬೇರೆ ದುರುದ್ದೇಶವಿದೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವ ಅರಗ ಜ್ಞಾನೇಂದ್ರ ಅವರು, ಹೆಚ್ಚುವರಿ ಅಜೆಂಡಾ ಮೂಲಕ ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ ಕಾನೂನು ಪ್ರಕಾರವಾಗಿ ವಿಧೇಯಕ ಮಂಡನೆ ಮಾಡಿದ್ದೇವೆ ಎಂದು ಹೇಳಿದರು.
ವಿಧೇಯಕ ಮಂಡನೆ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗಲಾಟೆ ಜೋರಾಗಿ ಕಾಂಗ್ರೆಸ್ ಸದಸ್ಯರು ಮತ್ತು ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಸಚಿವ ಜೆ ಸಿ ಮಧುಸ್ವಾಮಿ ಅವರು ವಿರೋಧವನ್ನು ನಿರಾಕರಿಸಿ, ಇದರಲ್ಲಿ ಮುಚ್ಚುಮರೆ ಏನೂಇಲ್ಲ ಈ ಕುರಿತಾಗಿ ಬಿಎಸಿ ಸಭೆಯಲ್ಲಿ ಹೇಳಿದ್ದೇವೆ ಹಾಗೂ ಮಸೂದೆ ಮಂಡನೆಗೆ ಏಕೆ ವಿರೋಧ ಮಾಡುತ್ತೀರಿ ಇದು ಸಂವಿಧಾನ ಕವಾಗಿ ಮಸೂದೆ ತಂದಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಕದ್ದುಮುಚ್ಚಿ ವಿದೇಕ ಮಂಡನೆ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕಳ್ಳತನದಿಂದ ವಿಧೇಯಕ ಮಂಡನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಚಿವ ಆರ್ ಅಶೋಕ್ ಅವರು ಮಾತನಾಡಿ ಏಕಾಏಕಿ ಬೇಕೆಂದಿಲ್ಲ ಹಲವು ಸಮಯಗಳಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ ಯಾವುದೇ ಧರ್ಮವನ್ನು ಉದ್ದೇಶಿಸಿ ತಂದಿಲ್ಲ ಎಂದು ಹೇಳಿದರು.