ನವದೆಹಲಿ: (ಡಿ.21) Aishwarya Rai: ಪನಾಮಾ ಪೇಪರ್ಸ್ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿದ್ದ ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ ಸತತ ಐದು ಗಂಟೆಗಳ ಕಾಲ ಇಡಿ ವಿಚಾರಣೆಗೆ ಒಳಪಟ್ಟಿದ್ದಾರೆ.
ನಿನ್ನೆ ಐಶ್ವರ್ಯ ರೈ ಅವರಿಗೆ ಸಂಬಂಧ ನೋಟಿಸ್ ಜಾರಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು ದಿನಾಂಕವನ್ನು ಮುಂದೂಡಲು ಐಶ್ವರ್ಯ ರೈ ಅವರು ಮನವಿ ಮಾಡಿಕೊಂಡಿದ್ದರು.
ನೆನ್ನೆ ಸಂಜೆ ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿ ದೇಶದಲ್ಲಿ ಸಂಪತ್ತನ್ನು ಹೊಂದಿರುವ ಆರೋಪವನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಪನಮ ಪೇಪರ್ಸ್ ಎಂಬ ರಹಸ್ಯದ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯ ರೈ ಸೇರಿದಂತೆ 500ಕ್ಕೂ ಹೆಚ್ಚು ಪ್ರಮುಖ ಭಾರತೀಯ ಹೆಸರುಗಳು ಹಾಗೂ ರಾಜಕಾರಣಿಗಳ ಮತ್ತು ಉದ್ಯಮಿಗಳ ಹೆಸರುಗಳು ಕೇಳಿಬಂದಿದೆ. ಮಹಿಳಾ ಅಧಿಕಾರಿ ಸೇರಿದಂತೆ ಆರು ಅಧಿಕಾರಿಗಳ ತಂಡ ನಟಿ ಐಶ್ವರ್ಯ ರೈ ಅವರನ್ನು ವಿಚಾರಣೆ ಮಾಡಿದ್ದಾರೆ.
ವಿಚಾರಣೆಯಲ್ಲಿ ಅಮಿತಾಬ್ ಬಚ್ಚನ್ ಗೆಸೇರಿದ ಸಂಸ್ಥೆಗೆ ಸಂಬಂಧಪಟ್ಟಂತೆ ಮತ್ತು ಪ್ರಶ್ನೆಗಳನ್ನು ಐಶ್ವರ್ಯ ರೈ ಅವರಿಗೆ ಕೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ಬಾರಿ ಸಮನ್ಸ್ ಪಡೆದಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗಿರಲಿಲ್ಲ ಆದರೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಐಶ್ವರ್ಯ ರೈ ಗೆ ಕೇಳಲಾದ ಪ್ರಶ್ನೆಗಳು?
- ಅಮಿಕ್ ಪಾಟ್‌ನರ್ಸ್ 2005 ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನಲ್ಲಿ ಸಂಘಟಿತವಾದ ಮತ್ತು ನೋಂದಾಯಿಸಲಾದ ಕಂಪನಿಯಾಗಿದೆ. ಈ ಕಂಪನಿಯೊಂದಿಗೆ ನೀವು ಯಾವ ಸಂಬಂಧವನ್ನು ಹೊಂದಿದ್ದೀರಿ?
- ಮೊಸಾಕ್ ಫೋನ್ಸೆಕಾ ಕಂಪನಿಯನ್ನು ನೋಂದಾಯಿಸಿದ ಕಾನೂನು ಸಂಸ್ಥೆ ನಿಮಗೆ ತಿಳಿದಿದೆಯೇ?
- ಈ ಕಂಪನಿಯ ನಿರ್ದೇಶಕರಲ್ಲಿ ನೀವು, ನಿಮ್ಮ ತಂದೆ ಕೋಟೆದಡಿರಮಣ ರೈ ಕೃಷ್ಣ ರೈ, ನಿಮ್ಮ ತಾಯಿ ಕವಿತಾ ರೈ ಮತ್ತು ನಿಮ್ಮ ಸಹೋದರ ಆದಿತ್ಯ ರೈ ಇದ್ದಾರೆ. ಇದರ ಬಗ್ಗೆ ನೀವು ಏನು ಹೇಳಬಹುದು?
- ಆರಂಭಿಕ ಪಾವತಿಸಿದ ಬಂಡವಾಳವು 50,000 ಡಾಲರ್ ಆಗಿದೆ. ಪ್ರತಿ ಷೇರು ಒಂದು ಡಾಲರ್ ಮೌಲ್ಯದ್ದಾಗಿತ್ತು ಮತ್ತು ಪ್ರತಿ ನಿರ್ದೇಶಕರು 12,500 ಷೇರುಗಳನ್ನು ಹೊಂದಿದ್ದರು. ನಿರ್ದೇಶಕರಾಗಿದ್ದ ನೀವು ಷೇರುದಾರರಾಗಲು ಕಾರಣವೇನು?
- ಜೂನ್ 2005 ರಲ್ಲಿ ನೀವು ಷೇರುದಾರರಾಗಿದ್ದು ಏಕೆ?
- 2008 ರಲ್ಲಿ ಕಂಪನಿಯು ಏಕೆ ನಿಷ್ಕ್ರಿಯವಾಯಿತು?
- ಹಣಕಾಸಿನ ವಹಿವಾಟುಗಳಿಗೆ ಆರ್‌ಬಿಐನಿಂದ ಅನುಮತಿ ಕೇಳಲಾಗಿದೆಯೇ?