Salim Ahmed: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.
ಈ ಚುನಾವಣೆ ಬಹಳ ಪ್ರಮುಖವಾದ ಚುನಾವಣೆ. ಈ ಗೆಲುವು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಗೆಲುವು, ಪಕ್ಷದ ಕಾರ್ಯಕರ್ತರ ಗೆಲವು, ಇದು ಬಿಜೆಪಿ ವೈಫಲ್ಯ, ಭ್ರಷ್ಟ ಸರ್ಕಾರದ ವಿರುದ್ಧ ಜನರ ಆಕ್ರೋಶದ ಗೆಲುವು. ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಗೆಲುವಾಗಿದೆ.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಎಲ್ಲ ಹಿರಿಯ ಮುಖಂಡರ ಆಶೀರ್ವಾದದಿಂದ ಈ ಗೆಲವು ಸಾಧಿಸಲಾಗಿದೆ.
ಈ ಚುನಾವಣೆಯಲ್ಲಿ ಹಲವು ವಿಚಾರವಾಗಿ ಚುನಾವಣೆ ಮಾಡಿದ್ದೇವೆ. ಈ ಗೆಲುವಿನಿಂದ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚಿನ ಶಕ್ತಿ ತುಂಬುವಂತಹ ಕೆಲಸ ಮಾಡುತ್ತೇನೆ. ಧಾರವಾಡ, ಗದಗ್, ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗುವಂತೆ ಶ್ರಮಿಸುತ್ತೇನೆ. ವಿಧಾನ ಪರಿಷತ್ ಒಳಗೆ ಹಾಗೂ ಹೊರಗೆ ಹೊರಾಟ ಮಾಡಿ ಈ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ.
ಬಿಜೆಪಿ ಶೇ.41, ಕಾಂಗ್ರೆಸ್ ಶೇ.48ರಷ್ಟು ಗೆಲುವು

ಈ ಚುನಾವಣೆಯಲ್ಲಿ ನಾವು 11 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, 2 ಕ್ಷೇತ್ರಗಳಲ್ಲಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಶೇ.48ರಷ್ಟು, ಬಿಜೆಪಿ ಶೇ.41ರಷ್ಟು ಮತ ಪಡೆದಿದ್ದು, ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ.
ಹಾನಗಲ್ ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ದಿಕ್ಸೂಚಿಯಾಗಿದೆ. ಈ ಚುನಾವಣೆಯಲ್ಲಿ ನಾವು ಪಕ್ಷದ ಸಿದ್ಧಾಂತಗಳು, ಯುಪಿಎ ಸರ್ಕಾರದ ಸಾಧನೆ, ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆ ಜತೆಗೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳು, ಭ್ರಷ್ಟಾಚಾರ, ಬೆಲೆ ಏರಿಕೆ, ಪೆಟ್ರೋಲ್ ಬೆಲೆ 50ರಿಂದ 100 ರೂ ಆಗಿದೆ.
ಮೋದಿ ಸರ್ಕಾರ ಮಾತು ತಪ್ಪಿದೆ:
ಡೀಸೇಲ್ 45 ರೂನಿಂದ 95 ರೂ. ಆಗಿದೆ. ಅಡುಗೆ ಅನಿಲ 400 ರೂ. ನಿಂದ, ಸಾವಿರ ರೂ. ಆಗಿದೆ. ಮೋದಿ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 100 ದಿನಗಳಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಮಾತು ತಪ್ಪಿದರು. ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಕೊಡಲಿಲ್ಲ. ಕೋವಿಡ್ ವಿರುದ್ಧ 21 ದಿನಗಳಲ್ಲಿ ಜಯ ಸಾಧಿಸುತ್ತೇವೆ ಎಂದರು. ನಂತರ ದೀಪ ಹಚ್ಚಿಸಿ, ಜಾಗಟೆ ಬಾರಿಸಿತ್ತು.

ಜನ ಬೆಡ್, ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಯಾವ ಕಾರಣಕ್ಕೆ ಬಿಜೆಪಿಗೆ ಮತ ಹಾಕಬೇಕು ಎಂದು ನಾವು ಮತದಾರರನ್ನು ಪ್ರಶ್ನಿಸಿದ್ದೆವು. ರೈತರು ಇಂದು ಕಂಗಾಲಾಗಿದ್ದಾರೆ, ನೆರೆಯಿಂದ ಮನೆ ಕೊಚ್ಚಿಹೋಗಿದೆ. ಇವರಿಗೆ ನೆರವಾಗದ ಸರ್ಕಾರಕ್ಕೆ ಮತ ಹಾಕಬೇಕಾ? ಪಂಚಾಯ್ತಿ ವ್ಯಾಪ್ತಿಯಲ್ಲಿ 3 ವರ್ಷವಾದರೂ ಒಂದು ಮನೆ ಕೊಟ್ಟಿಲ್ಲ.
ಗ್ರಾಮ ಪಂಚಾಯ್ತಿ ಬಗ್ಗೆ ಗಮನಹರಿಸುತ್ತಿಲ್ಲ. ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡದೇ ಪಲಾಯನವಾದ ಮಾಡುತ್ತಿರುವುದನ್ನು ಜನರ ಮುಂದೆ ಇಟ್ಟು ಚುನಾವಣೆ ಮಾಡಿದ್ದೆವು.
ಕಾಂಗ್ರೆಸ್ ಪಕ್ಷದ ಹೊರಟದ ಫಲವಾಗಿ ನಮಗೆ ಶೇ.48ರಷ್ಟು ಮತ ಬಂದಿದೆ. ರಾಜ್ಯದ ಜನ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.ಈ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದು, ಇದೊಂದು ಗೊತ್ತುಗುರಿ ಇಲ್ಲದ, ಅಭಿವೃದ್ಧಿ ಇಲ್ಲದ ಸರ್ಕಾರ. ಇದೇ ಮುಂದಿನ ಚುನಾವಣೆ ದಿಕ್ಸೂಚಿ.
ಸಚಿವ ಭೈರತಿ ಬಸವರಾಜ್ ಅವರು ರಾಜೀನಾಮೆ ನೀಡಬೇಕು
ಶೇ.40ರಷ್ಟು ಕಮಿಷನ್ ಕೇಳುತ್ತಿದ್ದಾರೆ , ಇದರ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಘಟನೆ ದೇಶದ ಇತಿಹಾಸದಲ್ಲೇ ಇದೇ ಮೊದಲು. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಪ್ರಧಾನಿಗಳು ಕ್ರಮ ಕೈಗೊಂಡಿಲ್ಲ. ಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಿರಬಹುದು. ಮುಖ್ಯಮಂತ್ರಿಗಳು ಮುಖ್ಯಕಾರ್ಯದರ್ಶಿಗೆ ಕಳುಹಿಸಿ ತನಿಖೆ ನಡೆಸುತ್ತೇವೆ ಎನ್ನುತ್ತಿದ್ದಾರೆ.

ಸಚಿವ ಭೈರತಿ ಬಸವರಾಜ್ ಅವರು ಭೂಹಗರಣ ಮಾಡಿದ್ದು, ಅವರು ರಾಜೀನಾಮೆ ನೀಡಬೇಕು. ಇಲ್ಲವೇ ಮುಖ್ಯಮಂತ್ರಿಗಳೇ ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರ ವಿಶ್ವಾಸ ಕಳೆದುಕೊಳ್ಳಲಿದೆ. ಇದು ಭಾರತೀಯ ಜನತಾ ಪಕ್ಷ ಅಲ್ಲ, ಭ್ರಷ್ಟ ಜನತಾ ಪಕ್ಷ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದು, ರಾಜ್ಯದಲ್ಲಿ ಬಿಜೆಪಿಯ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಇದೇ ಜನರ ತೀರ್ಪು.
ರಾಜ್ಯದ ಜನ ಈ ಸರ್ಕಾರದಿಂದ ಬೇಸತ್ತಿದ್ದಾರೆ
ಈ ಸರ್ಕಾರ ಆದಷ್ಟು ಬೇಗ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡಬೇಕು. ಈ ಚುನಾವಣೆಯಲ್ಲಿ ರಾಜ್ಯದ ಎಲ್ಲ ವರ್ಗದ ಜನ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಇನ್ನಾದರೂ ಬಿಜೆಪಿ ಸರ್ಕಾರ ಅಭಿವೃದ್ಧಿ ರಾಜಕಾರಣ ಮಾಡಲಿ.
ನಾವು ಸದಸ್ಯ ನೋಂದಣಿ ಅಭಿಯಾನ ಮಾಡುತ್ತಿದ್ದು, ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸಿ ಕೇಡರ್ ಬೇಸ್ ಪಕ್ಷವಾಗಿ ಮಾಡುತ್ತಿದ್ದೇವೆ. ಬೂತ್ ಸಮಿತಿಗಳ ಮೂಲಕ ಬಲಪಡಿಸಲಾಗುವುದು. ಪಕ್ಷದ ಸಿದ್ಧಾಂತ, ಬಿಜೆಪಿ ಸರ್ಕಾರದ ವೈಫಲ್ಯವನ್ನು ಬೂತ್ ಮಟ್ಟದಿಂದ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ.
ಸಿಎಂ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಈ ಸರ್ಕಾರ ನೇರವಾಗಿ ಆಯ್ಕೆಯಾದ ಸರ್ಕಾರವಲ್ಲ. ಆಪರೇಷನ್ ಕಮಲದ ಮೂಲಕ ಬಂದ ಸರ್ಕಾರ. ನಮ್ಮ ಶಾಸಕರನ್ನು ಖರೀದಿ ಮಾಡಿ ಅಧಿಕಾರ ಹಿಡಿದ ಸರ್ಕಾರ. ಇದಕ್ಕೆ ಗೊತ್ತುಗುರಿ ಇಲ್ಲ.
ಒಟ್ಟಾರೆಯಾಗಿ ರಾಜ್ಯದ ಜನ ಈ ಸರ್ಕಾರದಿಂದ ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ. ರಾಜ್ಯದಲ್ಲಿ ಎಲ್ಲ ವರ್ಗದ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಬೇಕು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ’ ಎಂದರು.
ಬೆಳಗಾವಿಯಲ್ಲಿನ ಗದ್ದಲದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ನಿಲುವು ಈಗಾಗಲೇ ತಿಳಿಸಲಾಗಿದೆ. ಈ ಬಗ್ಗೆ ಇವತ್ತು ಚರ್ಚೆ ನಡೆಯುತ್ತಿದ್ದು, ಕೆಲವು ಪುಂಡರು ಈ ಕೃತ್ಯ ಎಸಗಿದ್ದು ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ಅಧಿವೇಷನ ನಡೆಯುವ ಸಮಯದಲ್ಲಿ ಈ ರೀತಿ ನಡೆದಿರುವುದು ದುರ್ದೈವ. ಇಂತಹ ಘಟನೆ ಆಗಬಾರದು’ ಎಂದರು.
ಪದಾಧಿಕಾರಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ
ಬೆಳಗಾವಿಯಲ್ಲಿ ದಾಳಿ ಹಿಂದೆ ಮಹಾರಾಷ್ಟ್ರ ಕಾಂಗ್ರೆಸ್ ಮರಾಠಿಗರಿಂದ ಈ ಕೃತ್ಯ ನಡೆಸಲಾಗಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಶ್ರೀರಾಮುಲು ಅವರು ಮುಖ್ಯಮಂತ್ರಿಗಳೂ ಅಲ್ಲ, ಗೃಹಸಚಿವರೂ ಅಲ್ಲ. ಅವರು ತಮ್ಮ ಖಾತೆ ನಿರ್ವಹಣೆ ಮಾಡಿದರೆ ಸಾಕು.
ಈ ವಿಚಾರವಾಗಿ ಮುಖ್ಯಮಂತ್ರಿಗಳೋ ಅಥವಾ ಗೃಹ ಸಚಿವರು ಮಾತನಾಡಿದರೆ ನಾವು ಪ್ರತಿಕ್ರಿಯೆ ನೀಡುತ್ತೇವೆ. ಶ್ರೀರಾಮುಲು ಅವರದ್ದು ಬಾಲಿಷ ಹೇಳಿಕೆ, ಹೀಗಾಗಿ ಅದಕ್ಕೆ ಪ್ರಾಮುಖ್ಯತೆ ಇಲ್ಲ’ ಎಂದರು.
ಪಕ್ಷ ತೊರೆದವರನ್ನು ಕಾಂಗ್ರೆಸ್ ಗುರಿ ಮಾಡುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಯಾವುದೇ ಚರ್ಚೆ ಅಲ್ಲ. ನಾವು ಪಕ್ಷದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಚರ್ಚೆ ಮಾಡುತ್ತಿದ್ದೇವೆ. ಸರ್ಕಾರದ ವೈಫಲ್ಯ ಹಾಗೂ ಪಕ್ಷ ಸಂಘಟನೆ ಬಗ್ಗೆಯಷ್ಟೇ ನಾವು ಗಮನಹರಿಸುತ್ತಿದ್ದೇವೆ’ ಎಂದರು.
ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಪದಾಧಿಕಾರಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ. ಮುಂದಿನ ತಿಂಗಳು ಮೊದಲ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಿಂದೆ ಇದ್ದ ಪದಾಧಿಕಾರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿ ನೀಡಿದ್ದು, ಅವರು ಕೆಲಸ ಮಾಡುತ್ತಿದ್ದಾರೆ. ಸುಮಾರು 448 ಸಹಸಂಚಾಲಕರನ್ನು ನೇಮಿಸಿದ್ದೇವೆ. ಪಕ್ಷ ಸಂಘಟನೆಯ ಯಾವುದೇ ಕಾರ್ಯ ನಿಂತಿಲ್ಲ’ ಎಂದರು.
ಪಕ್ಷ ಬಿಟ್ಟು ಹೋದವರು ಮತ್ತೆ ಬಂದಿದ್ದಾರೆ
ವಿಧಾನ ಪರಿಷತ್ ಸ್ಥಾನಕ್ಕೆ ಬಂಡವಾಳಶಾಹಿಗಳಿಗೆ ಟಿಕೆಟ್ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ವಿಧಾನ ಪರಿಷತ್ ಎಂದರೆ ಅದು ಚಿಂತಕರ ಚಾವಡಿ. ಎಸ್.ಎಂ ಕೃಷ್ಣ ಹಾಗೂ ಧರಂಸಿಂಗ್ ಅವರ ಸರ್ಕಾರದಲ್ಲಿ 6 ವರ್ಷಗಳ ಕಾಲ ಮುಖ್ಯಸಚೇತಕರಾಗಿ ಕೆಲಸ ಮಾಡಿದ್ದೇನೆ.
ಈ ವಿಚಾರದಲ್ಲಿ ನಾವು ಬದಲಾವಣೆ ತರಬೇಕಾಗಿರುವುದು ನಿಜ. ಪರಿಷತ್ತಿಗೆ ಅದರದೇ ಆದ ಇತಿಹಾಸವಿದೆ. ನಮ್ಮ ಅನೇಕ ನಾಯಕರು ಬದಲಾವಣೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಇದಕ್ಕೆ ನಾವು ಅಂಕುಶ ಹಾಕಬೇಕು. ಸಮಾಜ ಇಂತಹದನ್ನು ಒಪ್ಪುವುದಿಲ್ಲ. ಇದರಲ್ಲಿ ಸುಧಾರಣೆ ತರಬೇಕು ಎಂಬುದು ನನ್ನ ಆಶಯ’ ಎಂದರು.
ಪರಿಷತ್ ವಿರೋಧ ಪಕ್ಷದ ನಾಯಕತ್ವ ಸ್ಥಾನದ ಆಕಾಕ್ಷಿಯೇ ಎಂಬ ಪ್ರಶ್ನೆಗೆ, ‘ನಾನು ಈಗಾಗಲೇ ಕಾರ್ಯಾಧ್ಯಕ್ಷನಾಗಿದ್ದು, ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಇದರಲ್ಲಿ ನನಗೆ ಸಂತೋಷವಿದ್ದು, ಬೇರೆ ಯಾವುದೇ ಆಕಾಂಕ್ಷೆ ಇಲ್ಲ’ ಎಂದರು.
ಇದನ್ನೂ ಓದಿ:Road Safety: ರಸ್ತೆ ಸುರಕ್ಷೆತೆಗೆ ನ್ಯಾವಿಗೇಶನ್ ಅಪ್ಲಿಕೇಶನ್
ಪಕ್ಷ ಬಿಟ್ಟು ಹೋದವರಲ್ಲಿ ಎಷ್ಟು ಮಂದಿ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷಕ್ಕೆ ಮರಳಲು ಮುಂದಾಗಿರುವವರ ಸಂಖ್ಯೆ ನಿಮ್ಮ ಊಹೆಗೂ ಮೀರಿದೆ. ಪಕ್ಷದ ಸಿದ್ದಾಂತ, ನಾಯಕತ್ವವನ್ನು ಒಪ್ಪಿ, ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರಲು ಬಯಸುವವರು ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ನೀಡಬೇಕು.
ಅವರು ಅದನ್ನು ಹೀರಿಯ ನಾಯಕರಾದ ಅಲ್ಲಂ ವಿರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಕಳುಹಿಸಲಾಗುತ್ತದೆ. ಆ ಸಮಿತಿ ಪರಿಶೀಲನೆ ನಡೆಸಿ ನಂತರ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಲಬೇಕೇ ಎಂಬುದರ ಬಗ್ಗೆ ತಾರ್ಮಾನ ಕೈಗೊಳ್ಳಲಿದೆ. ಪಕ್ಷ ಸಂಘಟನೆಗೆ ಅಡ್ಡಿಯಾಗುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದರು.