ಬೆಂಗಳೂರು: (ಡಿ.20) Namma Metro: ಬೆಂಗಳೂರಿನಲ್ಲಿರುವ ಮೆಟ್ರೋ ರೈಲು ತನ್ನ ಸಂಚಾರದ ಅವಧಿಯನ್ನು (Travel Time) ಒಂದು ಗಂಟೆ ವಿಸ್ತರಿಸಿ ಮೆಟ್ರೋ ರೈಲ್ವೇನಲ್ಲಿ (Metro Train)ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ನಮ್ಮ ಮೆಟ್ರೋ ರೈಲು ಸಂಚಾರದ (Metro time) ಅವಧಿಯನ್ನು ಒಂದು ಗಂಟೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMLC) ನಿರ್ಧರಿಸಿದೆ.

ಇಷ್ಟು ದಿನ ಬೆಳಗ್ಗೆ 6 ಗಂಟೆಗೆ ಆರಂಭವಾಗುತ್ತಿದ್ದ ಮೆಟ್ರೋ ಸಂಚಾರ ಸೇವೆಗಳು ಇಂದಿನಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ಗಂಟೆಯವರೆಗೆ ಸಂಚಾರ ಮಾಡುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMLC)ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಮುನ್ನ ಇದ್ದ ವೇಳಾಪಟ್ಟಿಯಂತೆ ಮೆಟ್ರೋ ಸೇವೆಗಳು ಎಂದಿನಂತೆ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Road Safety: ರಸ್ತೆ ಸುರಕ್ಷೆತೆಗೆ ನ್ಯಾವಿಗೇಶನ್ ಅಪ್ಲಿಕೇಶನ್

ರೈಲುಗಳ ಅವಧಿ ಹೀಗಿದೆ:
ಮೊದಲ ರೈಲು ಟರ್ಮಿನಲ್ ನಿಲ್ದಾಣಗಳ ( Terminals: Kengeri, Silk Institute, Nagasandra, Bhayyappanahalli)ಕೆಂಗೇರಿ, ಸಿಲ್ಕ್ ಇನ್ಸ್ಟಿಟ್ಯೂಟ್, ನಾಗಸಂದ್ರ ಮತ್ತು ಬೈಯಪ್ಪನಹಳ್ಳಿಯಿಂದ ಬೆಳಗ್ಗೆ ಐದು ಗಂಟೆಗೆ ಹೊರಡಲಿದೆ.
ಈ ನಿಲ್ದಾಣಗಳಿಂದ ಕೊನೆಯದಾಗಿ ರಾತ್ರಿ 11ಗಂಟೆಯವರೆಗೆ ಮೆಟ್ರೋ ರೈಲು ಸಂಚರಿಸಲಿದೆ ಹಾಗೂ (Every Sunday) ಪ್ರತಿ ಭಾನುವಾರದ ಬೆಳಗ್ಗೆ 7:00 ಗಂಟೆಗೆ ಮೆಟ್ರೋ ಸಂಚಾರ (Metro) ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಕರ್ಫ್ಯೂ (Night Curfew)ತೆರವಾದ ನಂತರದಿಂದ ಬಸ್ಸುಗಳು ಹಾಗೂ ರೈಲುಗಳ ಮೂಲಕ ಇಲ್ಲಿಗೆ ಬಂದವರು ಹಾಗೂ ಕೆಲಸಕ್ಕೆ ತೆರಳುವವರ ಸಂಖ್ಯೆ ಸಾಕಷ್ಟು ಏರಿಕೆ ಕಂಡುಬಂದಿದೆ.
ಮೆಟ್ರೋ ಸೇವೆ ಇಲ್ಲದಿದ್ದರಿಂದ ಅನಿವಾರ್ಯವಾಗಿ ಬಸ್ಸು ಅಥವಾ ಟ್ಯಾಕ್ಸಿಗಳನ್ನು ಅವಲಂಬಿಸಿದ್ದರು. ಈ ಸಂಬಂಧ ಪ್ರಯಾಣಿಕರಿಂದ ಮೆಟ್ರೋಗೆ (Metro)ಸಾಕಷ್ಟು ಬೇಡಿಕೆ ಬಂದಿತ್ತು ಈ ನೆಲೆಯಲ್ಲಿ ಬಿಎಂಆರ್ಸಿಎಲ್ ತನ್ನ ಸೇವೆಯನ್ನು ಎಂದಿನಂತೆ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.