ಚಂಡಿಗಢ: (ಡಿ.19) Golden Temple: ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ವ್ಯಕ್ತಿಯನ್ನು ಥಳಿಸಿದ ಘಟನೆ ನಡೆದಿದೆ.ಮುಂಜಾನೆ 4:00 ಗಂಟೆಗೆ ಸುಮಾರಿಗೆ ವ್ಯಕ್ತಿ ನಿಶಾನ್ ಸಾಹೇಬ್ ಸಿಕ್ಕ ಧ್ವಜಕ್ಕೆ ಅಗೌರವ ತೋರಿದ ಘಟನೆಗೆ ಸಂಬಂಧಿಸಿ ಕಪೂರ್ತಲಾ ಜಿಲ್ಲೆಯ ನಿಜಂಪುರ ನಿವಾಸಿಗಳು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ.
ಪೋಲಿಸ್ ತಂಡವು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಬಂಧಿಸಿದ್ದರು ಸಿಕ್ಕ ಗುಂಪುಗಳು ನಮ್ಮ ಮುಂದೆ ಪ್ರಶ್ನಿಸುವಂತೆ ಒತ್ತಾಯಿಸಿದೆ. ಬಳಿಕ ಪೊಲೀಸರು ಮಂದಿಗೆ ನಡೆದ ಮಾತಿನ ಚಕಮಕಿಯಲ್ಲಿ ಸ್ಥಳೀಯರು ವ್ಯಕ್ತಿಯನ್ನು ಮನಬಂದಂತೆ ಥಳಿಸಿದ್ದಾರೆ.
ತೀವ್ರ ಥಳಿತಕ್ಕೊಳಗಾದ ವ್ಯಕ್ತಿ ಜೀವ ಕಳೆದುಕೊಂಡಿದ್ದಾನೆ. ಯುವಕರು ನಿಶಾಂತ ಸಾಹೇಬರಿಗೆ ಅಗೌರವ ತೋರಿಸಿರುವುದನ್ನು ನೋಡಿದ್ದು ನಾನು ಶಂಕಿತಂಗೆ ಸವಾಲು ಹಾಕಿದಾಗ ಅವನು ಕತ್ತಲಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆದರೆ ಸ್ವಲ್ಪ ಸಮಯದ ನಂತರ ಸಿಕ್ಕಿಬಿದ್ದಾರೆ ಎಂದು ಹೇಳಿದ್ದಾರೆ.
ಅಂದು ನೆಡೆದದ್ದು ಏನು?
ಸಂಜೆ ಪ್ರಾರ್ಥನೆಯ ಸಮಯದಲ್ಲಿ, ತಲೆಯ ಮೇಲೆ ಹಳದಿ ಬಟ್ಟೆಯನ್ನು ಕಟ್ಟಿಕೊಂಡಿದ್ದ ಸುಮಾರು 20 ರಿಂದ 25 ವರ್ಷ ವಯಸ್ಸಿನ ವ್ಯಕ್ತಿ ಬೇಲಿ ಹಾರಿ ಸುತ್ತುವರಿದ ಪ್ರದೇಶಕ್ಕೆ ಪ್ರವೇಶಿಸಿದನು. ಈ ವೇಳೆ ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಒಳಗಿದ್ದ ಜನರು ಅವನನ್ನು ಹಿಡಿದು ಕಾರಿಡಾರ್‌ಗೆ ಕರೆದೊಯ್ದರು. ಅಲ್ಲಿ ಹಿಂಸಾತ್ಮಕ ವಾಗ್ವಾದ ನಡೆಯಿತು ಮತ್ತು ಅವನು ಥಳಿತದಿಂದ ಸಾವನ್ನಪ್ಪಿದ್ದಾನೆ” ಎಂದು ಅವರು ಹೇಳಿದರು.
CCTV footage of alleged sacrliege incident at Darbar Sahib (Golden Temple) today.@iepunjab @IndianExpress pic.twitter.com/klqRkedF1w
— Kamaldeep Singh ਬਰਾੜ (@kamalsinghbrar) December 18, 2021
ಥಳಿತದಿಂದ ಪ್ರಾಣ ಹೊಯ್ತು:
ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಗುಂಪೊಂದು ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಶನಿವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಗೋಲ್ಡನ್ ಟೆಂಪಲ್‌ನಲ್ಲಿ ದೈನಂದಿನ ಸಂಜೆ ಪ್ರಾರ್ಥನೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಟೆಂಪಲ್ ಒಳಗಿನ ಗರ್ಭಗುಡಿಯ ರೇಲಿಂಗ್ ಮೇಲೆ ಹಾರಿ ಮತ್ತು ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಮುಂದೆ ಇರಿಸಲಾದ ಕತ್ತಿಯನ್ನು ಹಿಡಿಯಲು ಪ್ರಯತ್ನಿಸಿದನು.
ಆಗ ಅಲ್ಲಿದ್ದವರು ಆತನನ್ನು ತಡೆದು ಥಳಿಸಿದ್ದಾರೆ. ಬಳಿಕ ವ್ಯಕ್ತಿ ಅಸುನೀಗಿದ್ದಾನೆ. ಘಟನೆ ಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಹತ್ಯಾಕಾಂಡದ ಯತ್ನವನ್ನು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಖಂಡಿಸಿದ್ದಾರೆ.
ಇದನ್ನೂ ಓದಿ: Road Safety: ರಸ್ತೆ ಸುರಕ್ಷೆತೆಗೆ ನ್ಯಾವಿಗೇಶನ್ ಅಪ್ಲಿಕೇಶನ್