Naughty Elephant (ಡಿ.19) ಮಕ್ಕಳಿಗೆ ತಮಾಷೆ ಮಾಡಲು ಅವರಿಂದ ಚಾಕಲೇಟನ್ನು ಕಿತ್ತು ತಿನ್ನುವ ಹಾಗೆ ನಟನೆ ಮಾಡುವುದು ಸಾಮಾನ್ಯವೇ ಇದನ್ನೇ ಪ್ರಾಣಿಯೊಂದು ಎಂದು ಅನುಸರಿಸಿದೆ.
ಹೌದು ಪ್ರಾಣಿಗಳ ತುಂಟಾಟ ನೋಡೋದಕ್ಕೆ ತುಂಬಾನೇ ಮಜವಾಗಿರುತ್ತದೆ. ಅದರಲ್ಲೂ ಆನೆಗಳು ಮಾಡುವ ಚೇಷ್ಟೆ ನೋಡಲು ಎರಡು ಕಣ್ಣುಗಳು ಸಾಲದು.

ಪ್ರಾಣಿಗಳು ಎಲ್ಲವೂ ಜೀವಂತ ಪ್ರಾಣಿಗಳ ಅದರಲ್ಲಿ ಎರಡು ಆದರೆ ಪ್ರಾಣಿಗಳಲ್ಲಿಯೇ ಆನೆಗಳು ತುಂಬಾ ಬುದ್ಧಿವಂತ ಪ್ರಾಣಿ. ಆನೆಗೆ ಎಷ್ಟು ಬೇಗ ಕೋಪ ಬರುತ್ತದೆಯೋ ಅಷ್ಟೇ ಚೇಷ್ಟೆಯನ್ನು ಮಾಡುತ್ತದೆ. ಇಲ್ಲೊಂದು ಆನೆ ಮಹಿಳೆಯೊಬ್ಬರ ಟೋಪಿಯನ್ನು ತಿಂದಂತೆ ನಟಿಸುತ್ತಿದೆ.
ಮಹಿಳೆಯೊಬ್ಬರು ಆನೆ ಪಕ್ಕ ನಿಂತಿರುವ ದೃಶ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪಕ್ಕದಲ್ಲಿ ನಿಲ್ಲುತ್ತಿದ್ದಂತೆಯೇ, ಮಹಿಳೆಯ ಟೋಪಿಯನ್ನು ತೆಗೆದು ತನ್ನ ಬಾಯಿಗೆ ಇಟ್ಟುಕೊಳ್ಳುತ್ತದೆ. ಇದರಿಂದ ನಿಬ್ಬೆರಗಾದ ಮಹಿಳೆ ತನ್ನ ಟೋಪಿಯನ್ನು ಹಿಂದಿರುಗಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ ಸ್ವಲ್ಪ ಹೊತ್ತಿನ ಬಳಿಕ ಆನೆ ಮಹಿಳೆಗೆ ಟೋಪಿಯನ್ನು ಹಿಂದಿರುಗಿಸುತ್ತದೆ.
ಇದನ್ನೂ ಓದಿ:Deer Goal: ಫುಟ್ ಬಾಲ್ ಆಟವಾಡಿ ಗೋಲ್ ಬಾರಿಸಿದ ಮುದ್ದು ಜಿಂಕೆ!
ನೋಡಿ.. ಈ ಆನೆಯ ತುಂಟತನಕ್ಕೆ ಅಲ್ಲಿದ್ದವರೆಲ್ಲ ಖುಷಿಪಟ್ಟಿದ್ದಾರೆ.
This elephant pretends to eat a woman’s hat… but then gives it back 😭😂
— Funny Supply (@FunnySupply) December 13, 2021
pic.twitter.com/OV0ZN8wC0F