Pushpa: (ಡಿ.19) ಅಲ್ಲು ಅರ್ಜುನ ನಟನೆಯ ಪುಷ್ಪ ಸಿನಿಮಾ ಬಗ್ಗೆ ಎಲ್ಲೆಡೆ ಚರ್ಚೆಗೆ ಒಳಗಾಗುತ್ತದೆ. ಸಿನಿಮಾ ಬಗ್ಗೆ ಎರಡು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಚಿತ್ರದಲ್ಲಿರುವ ಐಟಂ ಸಾಂಗ್ ಬಗ್ಗೆ ತೀವ್ರ ಚರ್ಚೆಗೆ ಒಳಗಾಗುತ್ತದೆ.
ಸಿನಿಮಾ ಹಾಡನ್ನು ಪ್ರಸಾರ ಮಾಡದಂತೆ ಕೆಲ ಸಂಘಟನೆಗಳು ಒತ್ತಡ ನೀಡುತ್ತದೆ. ನಿರೀಕ್ಷೆಗಿಂತ ಹಿಟ್ ಆಗದ ಪುಷ್ಪ ಸಿನಿಮಾ ಬಗ್ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ಗಳು ಬರುತ್ತಿದ್ದೆ.
ಇದೀಗ ತೆಲುಗು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಹೇಳಿಕೆಯೊಂದನ್ನು ನೀಡಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.ಪುಷ್ಪ ಸಿನಿಮಾದ ಹಾಡಿನ ಬಗ್ಗೆ ಮಾತನಾಡಿ “ಐಟಂ ಹಾಡುಗಳು ನನಗೆ ದೇವರ ಹಾಡಿಗೆ ಸರಿಸಮ” ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪುಷ್ಪ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಒಂದು ಐಟಂ ಸಾಂಗ್ ಬಗ್ಗೆ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ನನಗೆ ಐಟಂ ಹಾಡುಗಳು ದೇವರ ಹಾಡುಗಳು ಹಾಡುಗಳಂತೆ ಅಲ್ಲದೆ ಹಾಡುಗಳು ಧ್ಯಾನದ ಒಂದು ಪ್ರಕಾರ ಎಂದು ಹೇಳಿದ್ದಾರೆ. ಇವರ ಹೇಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕ್ಷಮೆ ಕೇಳುವಂತೆ ಆಗ್ರಹಿಸುತ್ತಾರೆ.

ಇನ್ನು ಈ ವಿಚಾರವಾಗಿ ಬಿಜೆಪಿ ಎಂಎಲ್ಎ ರಾಜ್ಯ ಸಿಂಗ್ ಅವರು ಮಾತನಾಡಿ, ದೇವಿಶ್ರೀ ಪ್ರಸಾದ್ ಒಬ್ಬರು ಸಂಗೀತ ನಿರ್ದೇಶಕ ಇವರಿಗೆ ಐಟಂ ಹಾಡುಗಳು ದೇವರ ಹಾಡುಗಳು ಹೇಗೆ ಮಾಡುತ್ತಿದ್ದಾರೆ. ಇದು ಅಗತ್ಯವಿರಲಿಲ್ಲ ಇದರಿಂದ ಹಲವರಿಗೆ ನೋವುಂಟಾಗಿದೆ ಅವರು ಕ್ಷಮೆ ಕೇಳಬೇಕು ಇಲ್ಲವಾದರೆ ಅವರಿಗೆ ಚಪ್ಪಲಿಯಿಂದ ಸ್ವಾಗತ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಹಿಂದುಗಳು ಬಿಸಿ ಮುಟ್ಟಿಸುತ್ತಾರೆ ತೆಲಂಗಾಣದಲ್ಲಿ ಅವರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rashmika Mandanna: ಪುಷ್ಪ ಫಿಲಂ ಪ್ರಮೋಷನ್ ವೇಳೆ ಕಿರಿಕ್ ಬೆಡಗಿ ಬೋಲ್ಡ್ ಲುಕ್
“ದೇವಿಶ್ರೀ ಅವರು ಐಟಂ ಸಾಂಗ್ ನ್ನು ಭಕ್ತಿ ಗೀತೆಗೆ ಹೇಗೆ ಹೋಲಿಸುತ್ತಾರೆ? ಅವರು ಅನಗತ್ಯವಾಗಿ ಹಿಂದೂ ಭಕ್ತಿ ಗೀತೆಗಳ ವಿರುದ್ಧ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ. ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ಹಿಂದೂ ಸಮುದಾಯದಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅವರು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ದೇವಿಶ್ರೀ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈದರಾಬಾದ್‌ನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.