ನವದೆಹಲಿ:( ಡಿ.19): Dowry: ಮದುವೆಯ ಮೊದಲೇ ವರನನ್ನು ವಧುವಿನ ಕುಟುಂಬದವರು ಥಳಿಸಿದ ಘಟನೆ ನವದೆಹಲಿಯ ಘಾಸಿಯಬಾದ್ ನಲ್ಲಿ ನಡೆದಿದೆ.
ಮದುವೆಗೆ ಕುಟುಂಬಸ್ಥರು ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕುಟುಂಬಸ್ಥರು ವಧುವಿನ ಮೇಲೆ ಕೈ ಮಾಡಿರುವ ಹಿಂದೆ ಒಂದು ಕಥೆಯಿದೆ.
ಮದುವೆಗೂ ಮೊದಲು, ಹುಡುಗಿಯ ತಂದೆಗೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಯನ್ನು ನೀಡಲು ಷರತ್ತು ಹಾಕಿದ್ದರೆನ್ನಲಾಗಿದೆ. ವರದಕ್ಷಿಣೆ ನೀಡದಿದ್ದರೆ ಮದುವೆಯಾಗುವುದಿಲ್ಲ ಎಂದು ಷರತ್ತು ಹಾಕಿದರು.

ಮದುವೆ ಮೊದಲೇ ಕಾಸ್ಟ್ಲಿ ಗಿಫ್ಟ್
ಮದುವೆಯ ಮುನ್ನವೇ ಹುಡುಗಿಯ ಮನೆಯವರು ವರನ ಮನೆಗೆ ಮೂರು ಲಕ್ಷ ರೂಪಾಯಿ ಹಾಗೂ ಒಂದು ಲಕ್ಷ ಬೆಲೆ ಬಾಳುವ ವಜ್ರದ ಉಂಗುರವನ್ನು ನೀಡಿದ್ದರು ಆದರೂ ಇಷ್ಟಕ್ಕೆ ಒಪ್ಪದ ವರನ ಮನೆಯವರು ಇನ್ನಷ್ಟು ನೀಡಬೇಕೆಂದು ಮನವಿ ಮಾಡಿದ್ದರು.
ವರನನ್ನು ಎಳೆದಾಡಿ ಥಳಿಸುತ್ತಿರುವ ವಿಡಿಯೋದಲ್ಲಿ, ಸಂಬಂಧಿಕರು ಏಕಾಏಕಿ ಹೊಡೆದಿದ್ದಾರೆ. ಅವರನ್ನು ರಕ್ಷಿಸಲು ಅವರ ಸಂಬಂಧಿಕರು ಪ್ರಯತ್ನಿಸುತ್ತಿದ್ದಾರೆ. ಸಂಬಂಧಿಕರು ಹೊಡೆಯುತ್ತಿರುವ ವಿಡಿಯೋ ಲೈವ್ ಶೋ ಆರಂಭವಾದ ನಂತರ ಮತ್ತಷ್ಟು ಕಥೆಗಳು ಹೊರಬಿದ್ದಿದೆ.

ವಿಷಯವೇನೆಂದರೆ, ಹುಡುಗನಿಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದುಬಂದಿದೆ. ವರದಕ್ಷಿಣೆ ಎಂಬುದೇ ಒಂದು ಅಪರಾಧವಾದರೆ, ಈಗಾಗಲೇ ಮೂರು ನಾಲ್ಕು ಬಾರಿ ಮದುವೆಯಾಗಿ ಮತ್ತೊಂದು ಸುಳ್ಳು ಹೇಳಿಕೊಂಡು ಮದುವೆಯಾಗುತ್ತಿರುವುದು ಇನ್ನೊಂದು ಅಪರಾಧ ಅಲ್ಲವೇ.
ಇದನ್ನೂ ಓದಿ: Deer Goal: ಫುಟ್ ಬಾಲ್ ಆಟವಾಡಿ ಗೋಲ್ ಬಾರಿಸಿದ ಮುದ್ದು ಜಿಂಕೆ!