ಬೆಂಗಳೂರು: (ಡಿ.18) Ceiling Fan: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿಯಮಗಳನ್ನು ತಂದಿದೆ.
ಕಾಲೇಜು ಕ್ಯಾಂಪಸ್ ನಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ಸಲುವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್ಗಳಲ್ಲಿ ಇರುವ ಸೀಲಿಂಗ್ ಫ್ಯಾನ್ ಗಳನ್ನು ತೆರವುಗೊಳಿಸುವ ಬಗ್ಗೆ ವರದಿ ಮಾಡಿದೆ..

ಭಾರತೀಯ ವಿಜ್ಞಾನ ಸಂಸ್ಥೆಯ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕ್ಯಾಂಪಸ್ನಲ್ಲಿ 6 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಫ್ಯಾನ್ ಗಳನ್ನು ತೆಗೆಯುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: New Year: ಅದ್ದೂರಿ ಹೊಸ ವರ್ಷಾಚರಣೆ ಬೇಡ: ಕೇಂದ್ರ ಆರೋಗ್ಯ ಸಚಿವಾಲಯ ಮನವಿ
ಹಾಸ್ಟೆಲ್ ನಲ್ಲಿ ಫ್ಯಾನ್ ಗಳ ಬದಲಾಗಿ ನೇರವಾಗಿ ಗೋಡೆಗೆ ಅಳವಡಿಸಬಹುದಾದ ಅಂತಹ ವಾಲ್ ಮೌಂಟೆಡ್ ಫ್ಯಾನ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಗಂಡನಿಗೆ ಮುಖ್ಯಸ್ಥರಿಗೆ ಈ ಮೇಲ್ ಮಾಡಿ ವಿಷಯ ತಿಳಿಸಿದ್ದಾರೆ.
ಅವೈಜ್ಞಾನಿಕ ನಿರ್ಧಾರ
ಸೀಲಿಂಗ್ ಫ್ಯಾನ್ ತೆಗೆಯುವ ನಿರ್ಧಾರದ ಬಗ್ಗೆ ವಿದ್ಯಾರ್ಥಿಗಳು ಸಮೀಕ್ಷೆಯನ್ನು ನಡೆಸಿದ್ದು ಈ ಪೈಕಿ ಶೇಕಡ 89 ವಿದ್ಯಾರ್ಥಿಗಳು ಈ ನಿರ್ಧಾರವನ್ನು ವಿರೋಧ ಮಾಡಿದ್ದಾರೆ ಉಳಿದ ವಿದ್ಯಾರ್ಥಿಗಳು ನಿರ್ಧಾರವನ್ನು ಸರಿ ಎಂದು ಸಮೀಕ್ಷೆಯಲ್ಲಿ ಉತ್ತರ ನೀಡಿದ್ದಾರೆ.
ಫ್ಯಾನ್ ಬದಲಿಸುವುದರಿಂದ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಐಐಎಸ್ಸಿ ಮ್ಯಾನೇಜ್ಮೆಂಟ್ ತೆಗೆದುಕೊಂಡಿರುವ ಈ ನಿರ್ಧಾರವು ವೈಜ್ಞಾನಿಕ ಕ್ರಮವಾಗಿದೆ ಇಂದು ಯುವ ಆಪ್ತ ಸಮಾಲೋಚಕರು ಹಾಗೂ ಸಮುದ್ರ ಫೌಂಡೇಶನ್ ಸಿಇಓ ಭಾರತೀ ಸಿಂಗ್ ಹೇಳಿದ್ದಾರೆ.
ಕ್ಷೇಮ ಕೇಂದ್ರವು ಪರಿಣಾಮಕಾರಿಯಾಗಿಲ್ಲ
ವಿದ್ಯಾರ್ಥಿಗಳಲ್ಲಿರುವ ಆತಂಕದಲ್ಲಿ ವಾರಗಳಿಗೆ ಸಮಾಲೋಚಕರಾದ ಪರಿಹಾರ ವಹಿಸುವಂತಹ ಕೆಲಸ ಆಗಬೇಕು ಅದರ ಬದಲು ಈ ತರಹದ ನಿರ್ಧಾರ ಸರಿಯಲ್ಲ. ಓದಿನ ಒತ್ತಡದ ಜೊತೆ ಕೆಲವೊಮ್ಮೆ ವಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಕಾರಣವಾಗುತ್ತದೆ.
ಐಐಎಸ್ಸಿ ವಿದ್ಯಾರ್ಥಿ ಪರಿಷತ್ ಸದಸ್ಯರೊಬ್ಬರು ಹೇಳಿರುವ ಪ್ರಕಾರ, ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬೆಂಬಲ ಒದಗಿಸಲು ಕ್ಯಾಂಪಸ್ನಲ್ಲಿ ಸ್ಥಾಪಿಸಲಾದ ಕ್ಷೇಮ ಕೇಂದ್ರವು ಪರಿಣಾಮಕಾರಿಯಾಗಿಲ್ಲ ಹಾಗೂ ಅದನ್ನು ಸುಧಾರಿಸಲು ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ವಸತಿಗೃಹಗಳ ಮಹಡಿ ಹಾಗೂ ಚಾವಣಿಯು ಬಳಿ ವಿದ್ಯಾರ್ಥಿಗಳು ಒಂಟಿಯಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ಇತ್ತೀಚಿಗೆ IISC ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ ಇದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.