Dancing Dadi: (ಡಿ.18) ಈಗಂತೂ ಹೊಸ ಸಿನಿಮಾಗಳು ಬಂದರೆ, ಅದರ ಹಾಡುಗಳಿಗೆ ಲಿಪ್ ಸಿಂಕ್, ನೃತ್ಯ ಮಾಡಿ ಸೋಶಿಯಲ್ ವಿಡಿಯೋಗಳಲ್ಲಿ ಹಂಚಿಕೊಳ್ಳುತ್ತಿರುವುದು ಈಗಿನ ಟ್ರೆಂಡ್ ಆಗಿದೆ.
ಈಗಿನ ಯುವಕ-ಯುವತಿಯರು ವಿಡಿಯೋಗಳನ್ನು ಮಾಡುವುದು ಸಾಮಾನ್ಯವಾದರೆ ಅಜ್ಜಿಯರು ಕೂಡಾ ನಾವೇನು ಕಡಿಮೆ ಎಂದು ನೃತ್ಯ ಪ್ರದರ್ಶನ ಮಾಡಿದ್ದಾರೆ.
ಹೌದು ಸಾರಾ ಅಲಿ ಖಾನ್ ಅಭಿನಯದ ಹಾಡಿಗೆ, 65 ವರ್ಷದ ಒಂದು ದೃತ್ಯ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಕ್ಷಣಮಾತ್ರದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರಾ ಅಲಿಖಾನ್ ಮತ್ತು ಧನುಷ್ ಅಭಿನಯದ ಅತ್ರಂಗಿ ರೇ ಚಿತ್ರದ ಚಕಾ ಚಕ್ ಹಾಡಿಗೆ ಯುವತಿಯೊಂದು ಹೆಜ್ಜೆ ಹಾಕಿದರೆ ಅಂತೆಯೇ ಅಜ್ಜಿ ಕೂಡ ಡಾನ್ಸ್ ಮಾಡಿದ್ದಾರೆ. ಕೌಶಲ್ಯ ಪ್ರದರ್ಶನಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ರವಿ ಬಾಲ ಶರ್ಮಾ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ: Bhajarangi 2: OTT ಗೆ ಬರ್ತಿದೆ ಶಿವಣ್ಣನ ಭಜರೇ ‘ಭಜರಂಗಿ-2’
ಇವರನ್ನು ಪ್ರೀತಿಯಿಂದಲೇ ಡ್ಯಾನ್ಸಿಂಗ್ ದಾದಿ ಎಂಬ ಹೆಸರನ್ನು ಕೂಡ ಗಳಿಸಿದ್ದಾರೆ. ವಿಡಿಯೋ ಹೊರಬಂದಂತೆ ನೆಟ್ಟಿಗರು ಸಾಕಷ್ಟು ಪ್ರಶಂಸೆ ನೀಡಿದ್ದಾರೆ.