ಡಿ.23ರಿಂದ ZEE 5 ಯಲ್ಲಿ ಭಜರಂಗಿ-2 ಅಬ್ಬರ!
Bhajarangi 2: (ಡಿ.18) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ ಭಜರೇ ಭಜರಂಗಿ-2 ಸಿನಿಮಾ ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಶಿವಣ್ಣನ ನಟನೆಯ.. ಹರ್ಷ ಡೈರೆಕ್ಷನ್ ಗೆ ಪ್ರೇಕ್ಷಕ ಸಖತ್ ರೆಸ್ಪಾನ್ಸ್ ಕೊಟ್ಟಿದ್ದ. ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು-ಸುದ್ದಿ ಮಾಡಿದ್ದ ಭಜರಂಗಿ-2 ಈಗ ಒಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಟೀಸರ್, ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಭಜರಂಗಿ-2 ಅಕ್ಟೋಬರ್ 29ರಂದು ತೆರೆಗಪ್ಪಳಿಸಿತ್ತು. ರಾಜ್ಯಾದ್ಯಂತ ರೇ ರೇ ಭಜರಂಗಿ-2 ಕಣ್ತುಂಬಿಕೊಂಡು ಶಿವಣ್ಣನ ಭಕ್ತಗಣ ಖುಷಿಪಟ್ಟಿದ್ದು. ಹೊಸ ಕಥೆ, ಒಳ್ಳೆ ಸಂದೇಶ ಹೊತ್ತು ತಂದಿದ್ದ ಭಜರಂಗಿ-2 ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು.
ರೋಮಾಂಚನಗೊಳಿಸುವ ಅದ್ಭುತ ದೃಶ್ಯ ವೈಭವದ "ಭಜರಂಗಿ 2" ಅತಿ ಶೀಘ್ರದಲ್ಲಿ..!#Bhajarangi2 Coming Soon on #ZEE5 #Bajarangi2OnZEE5 #ShivarajKumar #BhavanaMenon #Shruthi #ArjunJanya pic.twitter.com/CrziOmJLWu
— ZEE Picchar (@zee_picchar) December 16, 2021
ಎ ಹರ್ಷ ಡೈರೆಕ್ಷನ್ ನಲ್ಲಿ ರೆಡಿಯಾಗಿದ್ದ ಭಜರಂಗಿ-2 ಸಿನಿಮಾವನ್ನು ಜಯಣ್ಣ ಮತ್ತು ಭೋಗಣ್ಣ ಅದ್ಧೂರಿಯಾಗಿ ತಯಾರಿಸಿದ್ದರು. ಪ್ರೇಕ್ಷಕ ಮೆಚ್ಚಿಕೊಂಡ ಭಜರಂಗಿ-2 ಇದೇ ತಿಂಗಳ 23ರಂದು ಜೀ5 ಒಟಿಟಿಯಲ್ಲಿ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾಗಿದೆ. ಹಾಗಿದ್ರೆ ಮತ್ಯಾಕೆ ತಡ ಜೀ5 ಆಪ್ ಡೌನ್ ಲೋಡ್ ಮಾಡ್ಕೊಂಡು ಸಬ್ ಸ್ಕ್ರೈಬರ್ ಆಗಿ ಇಡೀ ಫ್ಯಾಮಿಲಿ ಕುತುಕೊಂಡು ಭಜರಂಗಿ-2 ಕಣ್ತುಂಬಿಕೊಳ್ಳಿ.
ಇದನ್ನೂ ಓದಿ: Sakath:‘ಸಖತ್’ ಖುಷಿಯಲ್ಲಿ ಗಣಿ-ಸುನಿ… 25ನೇ ದಿನದತ್ತ ‘ಸಖತ್’ ಜರ್ನಿ!