Lipstick: (ಡಿ.17) ಮಾಸ್ಕ್ ಬಂದಮೇಲಂತೂ ಹುಡುಗಿಯರಿಗೆ ಮೇಕಪ್ ಮಾಡಲು ಕಷ್ಟವಾಗಿದೆ. ಇನ್ನು ಕೊರೋನಾ ಕಾರಣದಿಂದ ತಪ್ಪಿಸಿಕೊಳ್ಳಲು ಮಾಸ್ಕ ಧರಿಸುವುದು ಅಗತ್ಯವಾಗಿದೆ ಇದು ಸುರಕ್ಷತೆಯು ಕೂಡ. ಇದರಿಂದ ಕೆಲ ಮೇಕಪ್ ಪ್ರಿಯರಿಗೆ ಬೇಜಾರ್ ಆಗಿರುವುದಂತೂ ಸುಳ್ಳಲ್ಲ.

ಮಾಸ್ಕ ಧರಿಸಿದ ನಂತರ ಲಿಪ್ಸ್ಟಿಕ್ ಅಳಿಸಿ ಹೋಗುತ್ತದೆ ಎಂದು ಕೆಲವರು ನಿರ್ಲಕ್ಷತೆ ತೋರಿಸುವುದು ಜಾಸ್ತಿ ಆಗಿದೆ. ಹಾಗಂತ ಮಾಸ್ಕ ಧರಿಸಿದ ನಂತರ ನಿಮ್ಮ ಲಿಪ್ಸ್ಟಿಕ್ ಅನ್ನು ಉಳಿಯುವಂತೆ ಮಾಡುವುದು ಕಷ್ಟವಾಗುತ್ತದೆ ಆದರೆ ಇಲ್ಲಿ ಹೇಳುವ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಲಿಪ್ಸ್ಟಿಕ್ ಕೂಡ ಹಾಗೆ ಇರುತ್ತದೆ.
ಹಾಗಾದರೆ ಲಿಪ್ಸ್ಟಿಕ್ ಅನ್ನು ಹೇಗೆ ಹೆಚ್ಚುಕಾಲ ಉಳಿಸಬಹುದು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

ಲಿಪ್ ಬಾಂಬ್
ಇದು ಯಾವಾಗಲೂ ನೆನಪಿರಲಿ, ತುಟಿಗಳು ಅತ್ಯಂತ ಮೃದು ಚರ್ಮವನ್ನು ಹೊಂದಿರುತ್ತದೆ. ತುಟಿಗಳಿಗೆ ಎಂದು ಡೈರೆಕ್ಟಾಗಿ ಲಿಪ್ಸ್ಟಿಕ್ ಹಚ್ಚುವುದು ಬೇಡ. ಅದರ ಬದಲು ಲಿಪ್ ಬಾಂಬ್ ಅನ್ನು ಮೊದಲು ಬಳಸಿ ಆನಂತರ ಲಿಪ್ಸ್ಟಿಕ್ ಅನ್ನು ಹಚ್ಚಿದರೆ ದೀರ್ಘಕಾಲದವರೆಗೆ ಉಳಿಯುತ್ತದೆ.
ಲಿಪ್ ಲೈನರ್:
ಲಿಪ್ ಲೈನರ್ ಬಳಸುವುದರಿಂದ ನಿಮ್ಮ ಲಿಪ್ಸ್ಟಿಕ್ ಹೆಚ್ಚುಕಾಲ ಉಳಿಯಬಹುದು ತುಟಿಗಳಿಗೆ ಆಕಾರ ನೀಡಲು ಸಹಾಯ ಮಾಡುವ ಲಿಪ್ ಲೈನರ್, ಲಿಪ್ಸ್ಟಿಕ್ ಬಣ್ಣವನ್ನು ಮರೆಯಾಗುವುದು ಅನ್ನು ತಡೆಯುತ್ತದೆ.

ಮ್ಯಾಟ್ ಲಿಪ್ ಸ್ಟಿಕ್:
ನಿಮ್ಮ ತುಟಿಗಳಿಗೆ ಮ್ಯಾಚ್ ಲಿಪ್ಸ್ಟಿಕ್ ಅನ್ನು ಬಳಸಿ. ಮ್ಯಾಟ್ ಲಿಪ್ಸ್ಟಿಕ್ ನಿಂದ ಹೆಚ್ಚು ಕಾಲ ತುಟಿಯ ರಂಗನ್ನು ಉಳಿಸುತ್ತದೆ. ಇತರೆ ಹೊಳೆಯುವ ಲಿಪ್ಸ್ಟಿಕ್ ಗಳು ಹೆಚ್ಚು ಕಾಲ ಉಳಿಯುವುದಿಲ್ಲ.
ಪೌಡರ್ ಬಳಸಿ:
ಲಿಪ್ಸ್ಟಿಕ್ ಮೇಲೆ ಸ್ವಲ್ಪ ಪೌಡರ್ ಅನ್ನು ಬಳಸುವುದರಿಂದ ಬಹುಕಾಲ ಉಳಿಯಲು ಸಹಾಯ ಮಾಡುತ್ತದೆ. ತುಟಿಗೆ ಹಚ್ಚುವ ಬ್ರಷ್ ನಿಂದ ಪುಡಿಯನ್ನು ಅದು ನಿಮ್ಮ ಲಿಪ್ಸ್ಟಿಕ್ ಮೇಲೆ ನಿಧಾನವಾಗಿ ಹಚ್ಚಿ. ಇದರಿಂದ ದೀರ್ಘ ಕಾಲ ಉಳಿಯುವಂತೆ ಮಾಡುತ್ತದೆ ಇದರಿಂದ ನಿಮ್ಮ ಮಾಸ್ಕ್ ಗಳಿಗೆ ಬಣ್ಣ ಅಂಟುವುದನ್ನು ಕೂಡ ತಡೆಯಬಹುದು.
ಮುಂದಿನ ಲೇಖನದಲ್ಲಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಹೇಗೆ ರಂಗಾಗಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.