ನವದೆಹಲಿ:(ಡಿ16) ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ (Minimum Age For Marriage Of Women) ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪಿಸಿದ್ದರು.
“ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ನಿರಂತರವಾಗಿ ಕಾಳಜಿ ವಹಿಸುತ್ತದೆ. ಹೆಣ್ಣು ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಅವರು ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಅವಶ್ಯಕ” ಎಂದು ಪ್ರಧಾನಿ ಹೇಳಿದ್ದರು.
ಪ್ರಸ್ತುತ, ಪುರುಷರ ಮದುವೆಯ ಕನಿಷ್ಠ ವಯಸ್ಸು (Minimum Age For Marriage) 21 ಆದರೆ ಮಹಿಳೆಯರಿಗೆ 18 ಆಗಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಾಲ್ಯವಿವಾಹ ನಿಷೇಧ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಗಳಲ್ಲಿ ಬದಲಾವಣೆಗಳನ್ನು ಮಾಡಲು ಸರ್ಕಾರ ಯೋಜಿಸಿದೆ.

ಹೆಣ್ಣು ಮಕ್ಕಳ ಆರೋಗ್ಯದ ಕಾಳಜಿ
2020 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Modi) ಅವರು ಈ ಯೋಜನೆಯನ್ನು ಘೋಷಿಸಿದ ಒಂದು ವರ್ಷದ ನಂತರ, ಕೇಂದ್ರ ಸಚಿವ ಸಂಪುಟ ಬುಧವಾರ ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತು ಎಂದು ತಿಳಿದುಬಂದಿದೆ.
ಜಯಾ ಜೇಟ್ಲಿ ನೇತೃತ್ವದ NITI ಆಯೋಗ ಕಾರ್ಯಪಡೆ ಈ ಪ್ರಸ್ತಾಪವನ್ನು ಬೆಂಬಲಿಸಿದೆ. ಸರ್ಕಾರದ ಉನ್ನತ ತಜ್ಞ ವಿ.ಕೆ.ಪೌಲ್, ಆರೋಗ್ಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಕಳೆದ ವರ್ಷ ಜೂನ್‌ನಲ್ಲಿ ರಚಿಸಲಾದ ಕಾರ್ಯಪಡೆಯ ಸದಸ್ಯರಾಗಿದ್ದರು.
ಮೊದಲ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಟಾಸ್ಕ್ ಫೋರ್ಸ್ ಒತ್ತಿಹೇಳಿದ್ದರಿಂದ ಡಿಸೆಂಬರ್‌ನಲ್ಲಿ ಪ್ರಸ್ತಾವನೆಯಲ್ಲಿ ಶಿಫಾರಸುಗಳನ್ನು ಸಲ್ಲಿಸಲಾಯಿತು
ಮದುವೆಯ ವಿಳಂಬವು ಕುಟುಂಬಗಳು, ಸಮಾಜ ಮತ್ತು ಮಕ್ಕಳ ಮೇಲೆ ಧನಾತ್ಮಕ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.