Love you Racchu Trailer: (ಡಿ.16) ಸ್ಯಾಂಡಲ್ವುಡ್ ಕೃಷ್ಣ ನಟ ಅಜಯ್ ರಾವ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಲವ್ ಯು ರಚ್ಚು ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಮೊದಲ ಬಾರಿಗೆ ರಚಿತ ರಾಮ್ ಹಾಗೂ ಅಜಯ ರಾವ್ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡು ಕ್ಯೂರಿಯಸಿಟಿ ಮೂಡಿಸಿದ್ದಾರೆ.
ಟ್ರೈಲರ್ ನೋಡಿದಾಕ್ಷಣ ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ ಕುತೂಹಲ ಮೂಡಿಸುತ್ತಿದೆ. ಇದೊಂದು ಹೊಸದಾಗಿ ಮದುವೆಯಾದ ಜೋಡಿಯ ಕಥೆಯಾಗಿದ್ದು, ಸುಖಕರ ಸಂಸಾರದಲ್ಲಿ ಕಾರ್ ಡ್ರೈವರ್ ಎಂಟ್ರಿಯಾಗಿ ಆಗುವ ಆನಾಹುತ ಎಳೆಯನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಬೋಲ್ಡ್ ಪಾರ್ಟ್ ನಲ್ಲಿ ರಚಿತಾರಾಮ್:
ಕೃಷ್ಣ ಲೀಲಾ ನಿರ್ದೇಶಕ ಶಶಾಂಕ್ ಬರೆದಿರುವ ಕಥೆಯಲ್ಲಿ ರೋಮ್ಯಾಂಟಿಕ್ ಜೊತೆ ಥ್ರಿಲ್ಲಿಂಗ್ ಕೂಡಾ ಇದೆ. ಡ್ರೈವರ್ ಕೊಲೆ ಸುತ್ತ ನಡೆಯುವ ಕತೆಯಲ್ಲಿ ಹೆಂಡತಿಯನ್ನು ಗಂಡ ಹೇಗೆ ಆಪತ್ತಿನಿಂದ ಕಾಪಾಡುತ್ತಾನೆ ಎಂಬುದು ಕತೆಯಾಗಿದೆ.

ಇನ್ನು, ಟೈಲರ್ ನಲ್ಲಿ ಬರುವ ಹಾಡಿನ ದೃಶ್ಯದಲ್ಲಿ ರಚಿತಾರಾಮ್ ಮತ್ತೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಲವ್ ಯು ರಚ್ಚು ಸಿನಿಮಾದ ‘ಮುದ್ದು ನೀನು” ಹಾಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಗಾಯಕ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದ್ದು, ಕದ್ರಿ ಮಣಿಕಾಂತ ಸಂಗೀತ ನೀಡಿದ್ದಾರೆ. ಹಾಡನ್ನು ತುಂಬಾ ಬ್ಯೂಟಿಫುಲ್ ಆಗಿ ಚಿತ್ರೀಕರಣ ಮಾಡಿದ್ದು, ಕೆಲವೊಂದು ರೋಮ್ಯಾಂಟಿಕ್ ದೃಶ್ಯಗಳನ್ನು ಟ್ರೇಲರ್ ನಲ್ಲಿಯೂ ನೋಡಬಹುದು.
ಗುರು ದೇಶಪಾಂಡೆ ಜಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಶಂಕರ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರದ ಟ್ರೇಲರನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಲಾಂಚ್ ಮಾಡಲಿದ್ದಾರೆ. ಇದೇ ತಿಂಗಳ 31ರಂದು ರಾಜ್ಯದ್ಯಂತ ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಲಿದೆ.