ATM Charges: (ಡಿ.16) ಸಾರ್ವಜನಿಕರಿಗೆ ಮೇಲಿಂದ ಮೇಲೆ ಬೆಲೆಯೇರಿಕೆಗಳಿಂದ ಕೈ ಸುಟ್ಟುಕೊಂಡಿದ್ದಾರೆ ಕೊಂಡಿದ್ದಾರೆ. ಬ್ಯಾಂಕ್ ವಲಯಗಳಿಂದ ಮತ್ತೊಮ್ಮೆ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹೌದು ಮುಂದಿನ ವರ್ಷದಿಂದ ಅಂದರೆ ಜನವರಿ 1 ರಿಂದ ಈ ನಿಯಮಗಳು ಜಾರಿಗೆ ಬರಲಿದೆ. ಹಾಗಾದ್ರೆ ಬ್ಯಾಂಕ್ ವಲಯಗಳಿಂದ ಯಾವ ನಿಯಮ ಜಾರಿಗೆ ಬರಲಿದೆ ಎಂದು ನೋಡೋಣ.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲಾ ಬ್ಯಾಂಕ್ ಗ್ರಾಹಕರು ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ಹೆಚ್ಚಿನ ಶುಲ್ಕ ನೀಡಬೇಕಾಗಿದೆ.
ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆಯಲ್ಲಿ ಬ್ಯಾಂಕ್‌ಗಳಲ್ಲಿನ ಗ್ರಾಹಕರಿಗೆ ನಿಗದಿತ ಮಿತಿ ಮುಗಿದ ನಂತರ (ATM)ಎಟಿಎಂಗಳ ಮೂಲಕ ಮಾಡಿದರೆ ದೇಶಾದ್ಯಂತ ನಗದು ಹಿಂಪಡೆಯುವಿಕೆಯು ದುಬಾರಿಯಾಗುತ್ತದೆ ಎಂದು ಹೇಳಿದೆ.

ನಿಗದಿತ ಮಿತಿಯನ್ನು(Limit) ಮೀರಿದ ನಂತರ ಎಟಿಎಂ ವಹಿವಾಟುಗಳಿಗಾಗಿ ಗ್ರಾಹಕರು ಜನವರಿ 2022 ರಿಂದ ಇನ್ನೂ ಹೆಚ್ಚಿನ ಶುಲ್ಕವನ್ನು (Fees) ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಎಟಿಎಂ ನಿಯಮ ಬದಲಾವಣೆ ಕುರಿತು ಬ್ಯಾಂಕ್‌ಗಳು ಈಗಾಗಲೇ ಗ್ರಾಹಕರಿಗೆ ಸೂಚನೆ ನೀಡುತ್ತಿವೆ.
RBI ಅಧಿಸೂಚನೆಯ ಪ್ರಕಾರ, ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಜನವರಿ 1, 2022 ರಿಂದ ಬದಲಾವಣೆಯನ್ನು ಜಾರಿಗೆ ತರಲಾಗುತ್ತದೆ. ಈ ಹೊಸ ನಿಯಮ ಜಾರಿಗೆ ಬಂದ ನಂತರ, (Credit & Debit) ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವವರು ಹಿಂಪಡೆಯುವ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೆ 21 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗ್ರಾಹಕರು ಈ ದರಗಳನ್ನು ವಿಧಿಸುವ ಮೊದಲು ತಮ್ಮ ಬ್ಯಾಂಕ್‌ಗಳಲ್ಲಿ 5 ಉಚಿತ ಎಟಿಎಂ (ATM)ವಹಿವಾಟುಗಳನ್ನು ಮಾಡಲು ಅನುಮತಿಸುತ್ತದೆ. ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್‌ಗಳಲ್ಲಿ ನಗದು ಮತ್ತು ನಗದುರಹಿತ ವಹಿವಾಟು ಸೇರಿದಂತೆ ಐದು ಉಚಿತ ವಹಿವಾಟುಗಳಿಗೆ (transactions) ಅರ್ಹರಾಗಿರುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಇದಲ್ಲದೆ, ಗ್ರಾಹಕರು, ಹೇಳಿದೆ. ಇದಲ್ಲದೆ, ಅವರು ಮೆಟ್ರೋ ನಗರಗಳಲ್ಲಿ (ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ) ಇತರ ಬ್ಯಾಂಕ್‌ಗಳಿಂದ ಮೂರು ಉಚಿತ ವಹಿವಾಟುಗಳಿಗೆ (Free Transactions)ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ. ಈ ವರ್ಷದ ಜೂನ್‌ನಲ್ಲಿ ಹೊಸ ಬದಲಾವಣೆಗಳ ಕುರಿತು ಆರ್‌ಬಿಐ (RBI) ಸೂಚನೆ ನೀಡಿತ್ತು ಅಂದಂತೆ ಜನವರಿ 1, 2022ರಿಂದ ರಿಂದ ಬದಲಾವಣೆಯಾಗಿದೆ.