Omicron Virus: (ಡಿ.16): ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದ್ದು ಇಂದು ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಈ ಕುರಿತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.
ಸೋಂಕು ತಗುಲಿದ್ದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಹೀಗಿದೆ
ಯುಕೆಯಿಂದ (U K)ಹಿಂತಿರುಗಿದ 19 ವರ್ಷದ ಪುರುಷ.
ದೆಹಲಿಯಿಂದ (Delhi)ಹಿಂತಿರುಗಿದ್ದ 36 ವರ್ಷದ ಪುರುಷ ಹಾಗೂ 70 ವರ್ಷದ ಮಹಿಳೆ
ನೈಜೀರಿಯ ದೇಶದಿಂದ (Nigeria )ಹಿಂದಿರುಗಿದ 52 ವರ್ಷದ ಪುರುಷ
ದಕ್ಷಿಣ ಆಫ್ರಿಕಾ (South Africa) ದೇಶದಿಂದ ಹಿಂದಿರುಗಿದ 33ವರ್ಷದ ಪುರುಷನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಸೋಂಕು ಪತ್ತೆಯಾಗಿರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ಐಸೋಲೇಶನ್ ಹಾಗೂ ಕ್ವಾರಂಟೈನ್ ಇರುವಂತೆ, (RTPCR)ಆರ್ಟಿ ಪಿಸಿಆರ್ ಟೆಸ್ಟಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ.
ಒಮಿಕ್ರೋನ್ ಸೋಂಕಿತರು ಪ್ರಸ್ತುತ ಆರೋಗ್ಯವಾಗಿದ್ದು ಯಾವುದೇ ಅಪಾಯದ ಲಕ್ಷಣಗಳು ಕಂಡಿಲ್ಲಬಂದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ
ಸಾರ್ವಜನಿಕರು ಸೋಂಕಿನ ಬಗ್ಗೆ ಭಯ ಪಡೆದೆ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಎರಡು ಲಸಿಕೆಗಳನ್ನು ಹಾಕಿಸಿಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಹಾಗೂ ಯಾವುದೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣವೇ ಟೆಸ್ಟ್ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.