SIP (ಡಿ.15) :ಮುಂದಿನ ಜೀವನಕ್ಕಾಗಿ ಅಥವಾ ಕನಸುಗಳನ್ನು ಪೂರ್ಣಗೊಳಿಸಲು ಹೂಡಿಕೆ ಮಾಡುತ್ತಾರೆ. ಹೂಡಿಕೆದಾರರು ಸಿಪ್ ಮೂಲಕ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ.
ಕೆಲವೊಮ್ಮೆ ಸಿಪ್ ಹಾಗೂ ಮ್ಯೂಚುವಲ್ ಫಂಡ್ ಗಳ ಬಗ್ಗೆ ಗೊಂದಲಕ್ಕೀಡಾಗುತ್ತಾರೆ. ಹಾಗಾಗಿ ಈ ಎರಡು ನಡುವಿನ ವ್ಯತ್ಯಾಸಗಳನ್ನು ಇಂದು ತಿಳಿದುಕೊಳ್ಳಿ.
SIP ಎಂದರೇನು?
ಸಿಪ್ ಎಂದರೆ ಮ್ಯೂಚುವಲ್ ಫಂಡ್ ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಗೆ ಉತ್ತಮ ಸಂಪತ್ತನ್ನು ಪಡೆಯಲು ಇದು ಸಹಾಯಕವಾಗುತ್ತದೆ. ಸಿಪ್ ಗಳ ಮೂಲಕ ಹಣಕಾಸು ಗುರಿಗಳನ್ನು ಈಡೇರಿಸಿ ಕೊಳ್ಳಬಹುದು.
ಸಿಪ್ ಏತಕ್ಕಾಗಿ ಬೇಕು?
ನಿಮ್ಮ ಹಣಕಾಸು ಬದುಕಿಗೆ ಒಂದು ಶಿಸ್ತುಬದ್ಧತೆ ಬೇಕೆಂದರೆ ಸಿಪ್ ಅಗತ್ಯವಾಗಿರುತ್ತದೆ. ಎಲ್ಲರಿಗೂ ಒಂದೇ ರೀತಿಯ ಆರ್ಥಿಕ ವ್ಯವಸ್ಥೆ ಇರುವುದಿಲ್ಲ. ಕೆಲವರು ಒಂದೇ ಸಲ ಹಣವನ್ನು ಕಟ್ಟಿದರೆ, ಇನ್ನು ಕೆಲವರು ಸ್ವಲ್ಪಸ್ವಲ್ಪವೇ ಹಣವನ್ನು ಕಟ್ಟಿ ಹೂಡಿಕೆ ಮಾಡುತ್ತಾರೆ.
ಅಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಹಣದಿಂದಲೇ ಹೂಡಿಕೆಯನ್ನು ಆರಂಭಿಸಲು ಸಿಪ್ ಸಹಾಯಕಾರಿ.
ಸಿಪ್ ನಲ್ಲಿ ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಯೋಚನೆ ಮಾಡದೆ ನಿಶ್ಚಿಂತೆಯಿಂದ ಬಂಡವಾಳ ಹೂಡಿಕೆ ಮಾಡಲು ಸಹಾಯವಾಗುತ್ತದೆ.

ಹೂಡಿಕೆ ಮಾಡಲು ಯೋಚಿಸುತ್ತಿದ್ದಾರೆ ಅದರ ಮಾರುಕಟ್ಟೆಯ ಏರಿಳಿತವನ್ನು ದಿನನಿತ್ಯ ಗಮನಿಸಬೇಕು. ಮಾರುಕಟ್ಟೆ ಪರಿಸ್ಥಿತಿ ಕೆಲವೊಮ್ಮೆ ಏರುತ್ತದೆ ಕೆಲವೊಮ್ಮೆ ಇಳಿಯುತ್ತದೆ.
ಯಾವಾಗ ಹೂಡಿಕೆ ಮಾಡಬೇಕು ಯಾವಾಗ ಮಾಡುವುದು ಎಂಬ ಗೊಂದಲ ಕಾಡುತ್ತದೆ.
ಆದರೆ ಸಿಪ್ ನಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ಇರುವುದಿಲ್ಲ. ಮಾರುಕಟ್ಟೆಯ ಪರಿಸ್ಥಿತಿ ಹೇಗೆ ಇದ್ದರೂ ಪ್ರತಿತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತೀರಿ ಸಿಪ್ ನಲ್ಲಿ ಪೂರ್ವನಿರ್ಧಾರಿತ ಮತವನ್ನು ನಿಯಮಿತವಾಗಿ ಹೂಡಿಕೆ ಮಾಡಲಾಗುತ್ತದೆ.

ಸಿಪ್ ನಲ್ಲಿ ಹೂಡಿಕೆ ಮಾಡಿ ಸಿಗುವ ಅನುಕೂಲತೆಗಳೇನು?
ನಿಮ್ಮ ಹೂಡಿಕೆಯ ಖರೀದಿಯ ಸರಾಸರಿ ವೆಚ್ಚವನ್ನು ಇದು ತಗ್ಗಿಸುತ್ತದೆ. ಗರಿಷ್ಠ ಪ್ರತಿಫಲ ಪಡೆಯಲು ಇದು ನೆರವಾಗುತ್ತದೆ. ಮಾರುಕಟ್ಟೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ನಿಯಮಿತವಾಗಿ ಮ್ಯೂಚುವಲ್ ಫಂಡ್ ಯೂನಿಟ್ ಗಳನ್ನು ಕೊಳ್ಳುವಾಗ, ಮಾರುಕಟ್ಟೆ ಸೂಚ್ಯಂಕ ಇಳಿದಿದ್ದಾರೆ ಹೆಚ್ಚು ಯೂನಿಟ್ ಗಳು ನಿಮ್ಮದಾಗುತ್ತದೆ. ಈ ವಿಧಾನದಿಂದ ಸರಾಸರಿ ವೆಚ್ಚ ನಿಮಗೆ ಅನುಕೂಲಕರವಾಗಿರುತ್ತದೆ ಎಲ್ಲದಕ್ಕಿಂತ ಮುಖ್ಯವಾಗಿ ಹೂಡಿಕೆಯ ಸಂಯೋಜನೆಯಿಂದ ನಿಮ್ಮ ಹೂಡಿಕೆಯಿಂದ ಸಿಗುವ ಆದಾಯ ದುಪ್ಪಟ್ಟಾಗುತ್ತದೆ. ದೀರ್ಘಕಾಲೀನವಾಗಿ ಹೆಚ್ಚು ಸಂಪತ್ತನ್ನು ಈ ಮೂಲಕ ಪಡೆಯಬಹುದು.
ಸಿಪ್ ಆರಂಭಿಸಲು ಕನಿಷ್ಠ ಮೊತ್ತ ಎಷ್ಟಿರಬೇಕು?
ನೀವು ಕನಿಷ್ಠ ಮಾಸಿಕ 500 ರೂಪಾಯಿ ಗಳಿಂದಲೂ ಆರಂಭಿಸಬಹುದು. ಕನಿಷ್ಟ ಮೊತ್ತದಿಂದ ಮ್ಯೂಚುವಲ್ ಫಂಡ್ ಗಳಲ್ಲಿ ಆರಾಮಾಗಿ ಹೂಡಿಕೆ ಮಾಡಬಹುದು.
ಪ್ರತಿ ತಿಂಗಳು ಸಿಪ್ ನಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎನ್ನುವುದಾದರೆ ಕೆಲವು ಮ್ಯೂಚುವಲ್ ಫಂಡ್ ಗಳಲ್ಲಿ ದ್ವೈಮಾಸಿಕ ಪಾಕ್ಷಿಕ ಅವಧಿಗೂ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ.

ಸಿಪ್ ಹುಡುಗಿಗೆ ಬೇಕಾಗುವ ದಾಖಲೆಗಳು ಏನು?
ಪಾನ್ ಕಾರ್ಡ್, ವಿಳಾಸ ದೃಢೀಕರಣ ಪತ್ರ, ಪಾಸ್ಪೋರ್ಟ್ ಗಾತ್ರದ ಫೋಟೋ ಹಾಗೂ ಚಕ್ ಬುಕ್ ಇದ್ದರೆ ಸಾಕು ಹಾಗೂ ನಿಮ್ಮ ಬ್ಯಾಂಕ್ ಖಾತೆ ವಿವರ ಸಲ್ಲಿಕೆಗೆ ಚಕ್ಕ ಬೇಕಾಗುತ್ತದೆ.
ಮ್ಯೂಚುವಲ್ ಫಂಡ್ ಹೂಡಿಕೆ ಯಲ್ಲಿ ಕೆವೈಸಿ ಪ್ರಕ್ರಿಯೆ ಮಾಡಬೇಕಾಗುತ್ತದೆ. ನಿಮ್ಮ ಹೆಸರು, ಜನ್ಮದಿನಾಂಕ ,ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಕೆವೈಸಿ ಗೆ ಒದಗಿಸಬೇಕು ಎಂದು ಆನ್ಲೈನ್ ಮೂಲಕವೂ ಮಾಡಬಹುದು.
ಆನ್ಲೈನ್ ಮೂಲಕವು ಸಿಪ್ ಮೂಲಕ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು
ಸಂತೈಸಬೇಕು ಸೈಟಿಗೆ ತೆರಳಿ ನಿಮ್ಮ ಹೆಸರನ್ನು ನೊಂದಾಯಿಸಿಕೊಂಡು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೂಡಿಕೆ ಮಾಡಬಹುದು.
ಉತ್ತಮ ಮ್ಯೂಚುವಲ್ ಫಂಡ್ ಗಳ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ವಿಚಾರಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು