ಬೆಂಗಳೂರು: (ಡಿ.14 ) Rajeshwari Tejaswi:ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಪೂರ್ಣಚಂದ್ರ ತೇಜಸ್ವಿ ಧರ್ಮ ಪತ್ನಿಯಾದ ರಾಜೇಶ್ವರಿ ತೇಜಸ್ವಿಯವರು ಇಂದು ನಿಧನರಾಗಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ವರಿ ತೇಜಸ್ವಿ (85) ಅವರು ನಿಧನರಾದರು.
1937 ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ರಾಜೇಶ್ವರಿಯವರು ಜನಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎ ಪದವಿ ಪಡೆದ ಇವರು ಸಾವಿರ 966 ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಜೊತೆ ವಿವಾಹವಾಗಿದ್ದರು.
ರಾಜೇಶ್ವರಿ ತೇಜಸ್ವಿ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಂಡ್ಪೋಸ್ಟ್ ನಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು ‘ನನ್ನ ತೇಜಸ್ವಿ’ ತುಂಬ ಮೊಟ್ಟಮೊದಲ ಪುಸ್ತಕ ಇವರದಾಗಿತ್ತು. ‘ನಮ್ಮ ಮನೆಗೆ ಬಂದರು ಗಾಂಧೀಜಿ’ ಎರಡನೇ ಪುಸ್ತಕ ವಾಗಿದ್ದು ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದು ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತೋಟದ ಮನೆಯಲ್ಲಿ ಒಬ್ಬರೇ ಇದ್ದವರು ಕಾಫಿ ತೋಟವನ್ನು ನೋಡಿಕೊಳ್ಳುತ್ತಿದ್ದರು. ಇದೀಗ ತನ್ನ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.