Viral Video:( ಡಿ.13): ಮದುವೆ, ಸಮಾರಂಭಗಳಲ್ಲಿ, ಯುನಿಕ್ ಅಗಿ ಕಾಣಿಸಿಕೊಳ್ಳುವುದು, ಡಿಫ್ರೆಂಟಾಗಿ ಕಾಣಿಸಿಕೊಳ್ಳುವುದು ಈಗಿನ ಟ್ರೆಂಡ್. ಇಲ್ಲೊಂದು ಜೋಡಿ ಟ್ರೆಂಡ್ ಸೃಷ್ಟಿಸಲು ಹೋಗಿ ಅನಾಹುತ ಮಾಡಿಕೊಂಡಿದ್ದಾರೆ.
ಛತ್ತೀಸ್ಗಡದ ರಾಯಪುರದಲ್ಲಿ ವಧು-ವರರು ಸುಂದರವಾದ ಉಯ್ಯಾಲೆ ಒಳಗೆ ಕುಳಿತಿದ್ದರು. ಉಯ್ಯಾಲೆ ಮೇಲೆ ಹೋಗುತ್ತಿದ್ದಂತೆ ಉಯ್ಯಾಲೆ ಹಗ್ಗ ತುಂಡಾಗಿದೆ.
ಸುಮಾರು 12 ಅಡಿಯಿಂದ ಮೇಲಿಂದ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: Kili Paul & Neema:ಲಿಪ್ ಸಿಂಕ್ ವಿಡಿಯೋ ಮಾಡಿ ಫೇಮಸ್ ಆದ ತಾಂಜೇನಿಯ ಅಣ್ಣ- ತಂಗಿ ಜೋಡಿ
ವಧು-ವರರು ಉಯ್ಯಾಲೆ ಮೇಲೆ ನಿಂತುಕೊಂಡು ಬದುಕಿಗೆ ಎಂಟ್ರಿ ಕೊಡುವ ದೃಶ್ಯವಿದು. ಎಲ್ಲರೂ ಖುಷಿಯಿಂದ ತೇಲಾಡುತ್ತಿರುವ ಅಲ್ಲೊಂದು ಅನಾಹುತ ನಡೆದು ಹೋಯಿತು. ದಂಪತಿಗಳಿಬ್ಬರೂ ಉಯ್ಯಾಲೆ ಮೇಲೆ ನಿಂತಿದ್ದರು. ಉಯ್ಯಾಲೆ ಮೇಲೆ ಹೋಗುತ್ತಿದ್ದಂತೆ ಹಗ್ಗ ತುಂಡಾಗಿ ದಂಪತಿಗಳಿಬ್ಬರೂ ಬಿದ್ದಿದ್ದಾರೆ.
ಒಂದು ಕ್ಷಣ ನೋಡುಗರ ಕಣ್ಣಲ್ಲಿ ಭಯದ ಛಾಯೆ ಮೂಡಿತ್ತು. ಅತಿಥಿಗಳು ವೇದಿಕೆ ಮೇಲೆ ಓಡಿದ್ದಾರೆ. ದಂಪತಿಗಳ ಇಬ್ಬರ ಪ್ರಾಣಾಪಾಯಕ್ಕೆ ಯಾವುದೇ ತೊಂದರೆಯಾಗಿಲ್ಲ.
Unfortunate accident at Raipur Wedding yesterday.
— Amandeep Singh 💙 (@amandeep14) December 12, 2021
Thank God all are safe.
source : https://t.co/yal9Wzqt2f pic.twitter.com/ehgu4PTO8f