ವಾರಣಾಸಿ:(ಡಿ.13) Kashi Vishwanath Corridor: ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದರು.
ಇಂದು ಬೆಳಗ್ಗೆ ವಾರಣಾಸಿಗೆ ಆಗಮಿಸಿದ್ದ ಮೋದಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ವೈದ್ಯನಾಥ ಅವರು ಪ್ರಾರ್ಥನೆ ಸಲ್ಲಿಸಿ
ನಂತರ ಕಾಶಿವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟಿಸಿದರು.

ಯಾತ್ರಾ ಸುವಿಧ ಕೇಂದ್ರಗಳು, ಪ್ರವಾಸ ಸೌಲಭ್ಯ ಕೇಂದ್ರಗಳು, ವೇದಿಕ ಕೇಂದ್ರಗಳು ಸೇರಿದಂತೆ ಯಾತ್ರಾಥ್ರಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿ ನಂತರ ಪ್ರಧಾನಿ ಮೋದಿಯವರು ಹರಹರ ಮಹಾದೇವ್ ಎಂದು ಘೋಷಣೆಯೊಂದಿಗೆ ಭಾಷಣವನ್ನು ಆರಂಭಿಸಿದರು.

5000 ಹೆಕ್ಟೇರ್ ನಲ್ಲಿ ನಿರ್ಮಾಣ:
ಇದು ಪ್ರಧಾನಿಯವರ ಕನಸಿನ ಯೋಜನೆಯಾಗಿತ್ತು. ವಿಶ್ವನಾಥ ಕಾರಿಡಾರ್ 5000 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮೂರು ಕಡೆ ಕಟ್ಟಡಗಳಿಂದ ಅನಾಥವಾಗಿರುವ ದೇವಾಲಯ ಸಂಕೀರ್ಣವಾಗಿದೆ.
ಕಾರಿಡಾರ್ ನಲ್ಲಿ ಇರುವ ವ್ಯವಸ್ಥೆಗಳೇನು?
ಕಾರಿಡಾರ್‌ನ ಭಾಗದಲ್ಲಿ 10,000 ಜನರು ಧ್ಯಾನ ಮಾಡಬಹುದಾದ 7,000 ಚದರ ಮೀಟರ್ ವೇದಿಕೆ, ಏಳು ಭವ್ಯ ಪ್ರವೇಶ ದ್ವಾರಗಳು, ಕೆಫೆಟೇರಿಯಾ, ಫುಡ್ ಕೋರ್ಟ್, ವೈದಿಕ ಮತ್ತು ಆಧ್ಯಾತ್ಮಿಕ ಗ್ರಂಥಾಲಯ, ವರ್ಚುವಲ್ ಗ್ಯಾಲರಿ, ಪ್ರವಾಸಿ ಕೇಂದ್ರ, ಭದ್ರತಾ ಸಭಾಂಗಣ, ಬಹುಪಯೋಗಿ ಸಭಾಂಗಣವಿದೆ. ಕಾರಿಡಾರ್ ಉದ್ದಕ್ಕೂ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.