ಬೆಳಗಾವಿ: (ಡಿ.13) Winter Session: ರಾಜ್ಯದಲ್ಲಿ ರೈತರು ಬೆಳೆ ಕಾಲಿಂದ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಕರ್ನಾಟಕದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರೈತರು ಸಮಸ್ಯೆಗಳನ್ನು ತುಂಬಾ ಎದುರಿಸುತ್ತಿದ್ದಾರೆ. ರಾಜ್ಯದ 21 ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಲಾಗಿದೆ ಎಂದರು.
ಒಟ್ಟು 78.93 ಲಕ್ಷ ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಸಲಾಗಿತ್ತು, ಮಳೆಯಿಂದ ಬಹುಪಾಲು ಪ್ರದೇಶ ಹಾಳಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಬಹುತೇಕ ರಾಗಿ ಭತ್ತ ಶೇಂಗಾ ಬೆಳೆಗಳು ನಾಶವಾಗಿದೆ. ಟೊಮೆಟೊ, ಮೆಣಸಿನಕಾಯಿ, ಮೆಕ್ಕೆಜೋಳ, ಕಾಫಿ, ಕಾಳುಮೆಣಸು ಸೇರಿದಂತೆ ಹಲವಾರು ಬೆಳೆಗಳು ಹಾಳಾಗಿದೆ.
ರೈತರು ಬೆಳೆ ಬೆಳೆಯಲು 1.30 ಲಕ್ಷ ಖರ್ಚು ಮಾಡಿರುತ್ತಾರೆ. ಕೋಲಾರ ಮಂಡ್ಯ ಮೈಸೂರು ಭಾಗಗಳಲ್ಲಿ ಬೆಳೆಗಳು ನೆಲಕಚ್ಚಿ ಹೋಗಿದೆ. ರೈತರು ಕಣ್ಣೀರಿನಲ್ಲಿ ಕೈ ತೊಳೆದ ಪರಿಸ್ಥಿತಿ ಬಂದಿದೆ ಎಂದರು. ಈ ವರ್ಷ ಒಟ್ಟು 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಹೇಳಿದರು.
ಸಿಎಂ ಇಲ್ಲದ ಸದನದಲ್ಲಿ ಮಾತನಾಡುವುದಿಲ್ಲ:
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸದನದಲ್ಲಿ ಇಲ್ಲ ಹಾಗಾಗಿ ನಾನು ಇದರ ಬಗ್ಗೆ ಮಾತನಾಡುವುದಿಲ್ಲ. ನಾನು ಹೇಳಿದ್ದಕ್ಕೆಲ್ಲಾ ನೀವು ಒಪ್ಪಿಕೊಳ್ಳಬಹುದು ಆದರೆ ಬೇಡಿಕೆಗಳನ್ನು ಈಡೇರಿಸಲು ಹಣ ಎಲ್ಲಿಂದ ಹಂಗಿಸುತ್ತಾರೆ ಎಂಬ ಪ್ರಶ್ನೆ ಉಳಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ:Puneeth Rajkumar: ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಹೆಸರು ಶಿಫಾರಸ್ಸು : ಸಿಎಂ ಬೊಮ್ಮಾಯಿ
ನಾನು ಮಾತನಾಡಿದ್ದಕ್ಕೆ ನಿಮ್ಮ ಒಪ್ಪಿಗೆ ಇದೆ ಎಂದು ಆಡಳಿತ ಪಕ್ಷದವರ ಸಿದ್ದರಾಮಯ್ಯ ಅವರ ನೋಡಿದಾಗ, ಸಚಿವ ಕೆಎಸ್ ಈಶ್ವರಪ್ಪ ಅವರು ಓಕೆ ಎಂದರು.
ಪುನೀತ್ ಸ್ಮರಣೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ:
ಬೆಳಗಾವಿ ಅಧಿವೇಶನ ಆರಂಭಗೊಳ್ಳುವ ಮೊದಲು ಅಗಲಿದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಿದರು. ಈ ಸಾಲಿನಲ್ಲಿ ದಕ್ಷಿಣ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಚಿತ್ರನಟ ಪುನೀತ್ ರಾಜಕುಮಾರ್, ಹಿರಿಯ ಚಿತ್ರನಟ ಶಿವರಾಮ ಅವರನ್ನು ನಡೆಸಿಕೊಂಡರು.
ಸಿದ್ದರಾಮಯ್ಯ ಅವರು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುತ್ತಾ, ಮೈಸೂರಿನಲ್ಲಿ ಥಿಯೇಟರ್ ಗೆ ಹೋಗಿ ರಾಜಕುಮಾರ ಸಿನಿಮಾ ನೋಡಿದ್ದೆ. ಪುನೀತ್ ನನ್ನನ್ನು ಮಾಮಾ ಎಂದು ಅವರ ತಂದೆಗಿಂತಲೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ನೆನಪಿಗೆ ಲೈಬ್ರರಿ ಮಾಡಲು ಸಾಧ್ಯವಾಗುತ್ತದೆಯ ಎಂದು ಸರ್ಕಾರವು ಯೋಚಿಸಬೇಕು ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಅವರು ಮಾತನಾಡುತ್ತಾ, ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅತಿವೃಷ್ಟಿ ಬರಗಾಲ ಬಂದಿದೆ ಎಂದರು. ಈ ವೇಳೆ ಮಧ್ಯದಲ್ಲಿ ಪ್ರವೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಅವರು ನಾವು ಬಂದಮೇಲೆ ರಾಜ್ಯಕ್ಕೆ ಬರಗಾಲ ಇಲ್ಲ ಬರೀ ಮಳೆ ಎಂದು ಪ್ರತ್ಯುತ್ತರ ನೀಡಿದರು. ಕೊನೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.