Rajnaikanth Birthday : (ಡಿ.12): ಸೂಪರ್ ಸ್ಟಾರ್ ಎಂದರೆ ನೆನಪಾಗುವುದೇ ರಜನಿಕಾಂತ್ ! ಕಂಡಕ್ಟರ್ ಆಗಿದ್ದ ಸಾಮಾನ್ಯ ವ್ಯಕ್ತಿ, ಸೂಪರ್ ಸ್ಟಾರ್ ಆಗುವುದೆಂದರೆ ಸಾಮಾನ್ಯವಲ್ಲ.. ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ 71ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ.

ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ ರಜನಿಕಾಂತ್. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರೆಟಿಗಳು ಕೂಡ ಅವರ ಅಭಿಮಾನಿಗಳು ಆಗಿದ್ದಾರೆ. ರಜನಿಕಾಂತ್ ಅವರಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಅವರ ಕೊಡುಗೆ ಅಪಾರ. ಕನ್ನಡ ಹಿಂದಿ ತೆಲುಗು ಸಿನಿಮಾಗಳಲ್ಲಿ ನಟಿಸಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ಭಾರತ ಸರ್ಕಾರ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೆ ಭಾಜನರಾದರು ರಜನಿಕಾಂತ್.
ಇದನ್ನೂ ಓದಿ: Dhamaka : ಶಿವರಾಜ್ ಕೆ.ಆರ್.ಪೇಟೆ ಹಾಗೂ ಯೋಗರಾಜ್ ಭಟ್ ರ ಕಾಮಿಡಿ ‘ಧಮಾಕ’
ಇತ್ತೀಚೆಗೆ ಅವರು ನಟಿಸಿದ ಅಣ್ಣಾತೆ ಸಿನಿಮಾ ಅದ್ದೂರಿಯಾಗಿ ಪ್ರದರ್ಶನಗೊಂಡಿತ್ತು. ಮೊದಲ ದಿನವೇ ಎಪ್ಪತ್ತು ಕೋಟಿ ಕಲೆಕ್ಷನ್ ಮಾಡಿದ್ದು. ಕೊಟ್ಟರೆ ಮೊದಲ ವಾರಾಂತ್ಯಕ್ಕೆ 202.47 ಕೋಟಿ ಸಿನಿಮಾ ಗಳಿಸಿತ್ತು.
ಡಿಸೆಂಬರ್ 12. 1950 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಚಿತ್ರರಂಗಕ್ಕೆ ಸೇರಿದ ನಂತರ ಶಿವಾಜಿ ರಾವ್ ಗಾಯಕ್‍ವಾಡ್ ಅವರು ರಜನೀಕಾಂತ್ ಆದರು.

ವೃತ್ತಿಜೀವನ:
ರಜನಿಕಾಂತ್ ಅವರು ಬೆಂಗಳೂರು ಮಹಾನಗರ ಸಾರಿಗೆ ಯಲ್ಲಿ ನಿರ್ವಾಹಕ ರಾಗಿದ್ದರು. ನಾಟಕಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಸಂಸ್ಥೆಗೆ ಸೇರಿಕೊಂಡರು.ಇವರ ಚೊಚ್ಚಲ ಚಿತ್ರ “ಅಪೂರ್ವ ರಾಗಂಗಳ್”ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ “ಸೂಪರ್ ಸ್ಟಾರ್” ಎಂದು ಕರೆಯಲಾಯಿತು, ಮತ್ತು ಅಂದಿನಿಂದ ಈ ಬಿರುದನ್ನು ಉಳಿಸಿಕೊಂಡಿದ್ದಾರೆ.
ಶಿವಾಜಿ ಚಿತ್ರದ ಪಾತ್ರಕ್ಕೆ26 ಕೋಟಿ ರುಪಾಯಿಗಳನ್ನು ಪಡೆದ ನಂತರ, ಇವರು ಎಶಿಯಾದ ಎರಡನೆ ಅತಿ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕಗೆ ಪಾತ್ರರಾದರು, ಮೊದಲ ಸ್ಥಾನದಲ್ಲಿ ಜಾಕೀ ಚಾನ್ ಇದ್ದರು. ಭಾರತದ ಇತರೆ ಪ್ರಾದೇಶಿಕ ಭಾಶೆಗಳ ಚಿತ್ರಗಳಲ್ಲಿ ನಟಿಸುತ್ತ, ಇವರು ಕೆಲ ಅಮೇರಿಕಾದ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳು
ಕಥಾಸಂಗಮ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್ ,ಕುಂಕುಮ ರಕ್ಷೆ. ಗಲಾಟೆ ಸಂಸಾರ, ಕಿಲಾಡಿ ಕಿಟ್ಟು
ಮಾತು ತಪ್ಪದ ಮಗ, ಸಹೋದರರ ಸವಾಲ್, ತಪ್ಪಿದ ತಾಳ , ಪ್ರಿಯ, ಘರ್ಜನೆ ಚಿತ್ರಗಳಲ್ಲಿ ನಟಿಸಿದ್ದಾರೆ.