ಬೆಂಗಳೂರು: (ಡಿ.11): Omicron Virus: ಕೂರೋನ ರೂಪಾಂತರಿ ಒಮಿಕ್ರಾನ್ ವೈರಸ್ ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ.
ತಜ್ಞರ ಸಮಿತಿಯಲ್ಲಿ ಚರ್ಚಿಸಿ ನೀಡಿದ ಸಲಹೆಯನ್ನು ಆದರೆ ಇಲಾಖೆಯು ಒಮಿಕ್ರೋನ್ ಸೋಂಕು ಪರೀಕ್ಷೆ ಹಾಗೂ ಚಿಕಿತ್ಸೆಗಳ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ?
ಸೋಂಕು ದೃಢಪಟ್ಟರೆ ಕಡ್ಡಾಯವಾಗಿ ಹತ್ತು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.
ಬಿಡುಗಡೆಗೂ ಮುನ್ನ ಎರಡು ಬಾರಿ ನೆಗೆಟಿವ್ ವರದಿ ಹಾಗೂ ಒಂದು ವಾರ ಹೋಂ ಕ್ವಾರಂಟೈನ್ ಗೆ ಒಳಪಡಬೇಕು.
ಬಿಡುಗಡೆಗೂ ಮುನ್ನ ಮೂರು ದಿನ ಸೋಂಕಿನ ಲಕ್ಷಣಗಳು ಇರಬಾರದು.
ಸತತ ನಾಲ್ಕು ದಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ.95% ಕಿಂತ ಹೆಚ್ಚು ಇರಬೇಕು.
ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಮತ್ತು 48 ಗಂಟೆಗಳ ಬಳಿಕ ಪರೀಕ್ಷೆ ನಡೆಸಬೇಕು.
ಆಸ್ಪತ್ರೆಯ ಬಿಡುಗಡೆ ಸಂದರ್ಭದಲ್ಲಿ ಡಿ ಡಿಮ್ಮರ್, ಎಸ್. ಫೆರಿಟಿನ್ , ಎಸ್ ಎಲ್ ಡಿ ಹೆಚ್ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಸಮಾಧಾನಕರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಒಂದು ವೇಳೆ ಕ್ವಾರಂಟೈನ್ ಸೌಲಭ್ಯ ಇಲ್ಲವಾದರೆ ಸಾಂಸ್ಥಿಕ Quarantine ಸಲಹೆ ನೀಡಬೇಕು.
ಅವಧಿಯಲ್ಲಿ ಆರೋಗ್ಯ ಸಿಬ್ಬಂದಿ ದೂರವಾಣಿ ಮೂಲಕ ನಿಗಾವಹಿಸಬೇಕು.
6ನೇ ದಿನ ಮತ್ತೊಮ್ಮೆ ಸೋಂಕು ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರೆ ಬಿಡುಗಡೆ ಮಾಡಬಹುದು.
ಅಂಗಾಂಗ ಕಸಿ ಹಾಗೂ ಹೆಚ್ಐವಿ ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಹಾಗೂ ಇತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅವರಿಗೆ ಸೋಂಕು ದೃಢಪಟ್ಟಿದ್ದರೂ ಹೆಚ್ಚಿನ ನಿಗಾ ವಹಿಸಬೇಕು.
ಸಂಪೂರ್ಣ ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಜೊತೆಗೆ ಇತರೆ ಒಮಿಕ್ರೋನ್ ಸೋಂಕಿತರ ಬಿಡುಗಡೆಗೆ ಸಂದರ್ಭದಲ್ಲಿ ಕ್ರಮಗಳನ್ನು ಪಾಲಿಸಬೇಕು