ಬೆಂಗಳೂರು: (ಡಿ.11): Religious Conversion: ಬಲವಂತವಾಗಿ ಅಥವಾ ವಂಚಿಸಿ ಮತಾಂತರ ಮಾಡುವವರಿಗೆ 1 ರಿಂದ ಗರಿಷ್ಠ 10 ವರ್ಷಗಳ ಶಿಕ್ಷೆ ಹಾಗೂ ದಂಡ ಸೇರಿದಂತೆ ಹಲವು ಕಠಿಣ ಅಂಶ ಇರುವ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಬೇರೆ ದೇಶಗಳ ರಾಜ್ಯದಲ್ಲಿರುವ ಮತಾಂತರ ನಿಷೇಧ ಕಾಯ್ದೆ ಯನ್ನು ಕುರಿತು ಅಧ್ಯಯನ ಮಾಡಿ, ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಕರಡು ಮಸೂದೆ ಸಿದ್ಧಪಡಿಸಲಾಗಿದ್ದು ಕಾನೂನು ತಜ್ಞರು ಮಸೂದೆ ಮಂಡನೆಗೆ ಸಿದ್ಧಪಡಿಸುತ್ತಿದ್ದಾರೆ.
ಇದನ್ನೂ ಓದಿ: Child Marriage : ರಾಜಸ್ಥಾನದಲ್ಲಿ ಬಾಲ್ಯವಿವಾಹ ಇನ್ನು ಜೀವಂತ!! ಅರಿಯದ ಮಕ್ಕಳ ಮದುವೆ ವಿಡಿಯೋ ವೈರಲ್
ವಿಧೇಯಕದಲ್ಲಿ ಏನಿದೆ?
ಕಾನೂನಿನಲ್ಲಿ ಯಾರೂ ಯಾವ ಧರ್ಮವನ್ನು ಆಚರಿಸಬಹುದು. ಆದರೆ ಬಲವಂತವಾಗಿ ಅಥವಾ ಆಮಿಷ ಒಡ್ಡಿ ಮತಾಂತರ ಮಾಡುವವರಿಗೆ ಜೈಲು ಶಿಕ್ಷೆ ಅಥವಾ ಹೆಚ್ಚಿನ ದಂಡ ವಿಧಿಸುವುದನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಬಲವಂತವಾಗಿ ಇತರರನ್ನು ಮತಾಂತರಕ್ಕೆ ಕುಮ್ಮಕ್ಕು ಕೊಡುವ ವ್ಯಕ್ತಿಗೆ ಜಾಮೀನು ನಿರಾಕರಿಸಬೇಕು ಹಾಗೂ ಯಾವುದೇ ವ್ಯಕ್ತಿ ಮತಾಂತರಗೊಳ್ಳುವ ಮುನ್ನ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಮೊದಲೇ ನೋಟಿಸ್ ನೀಡಬೇಕು ಎಂದು ಉಲ್ಲೇಖಿಸಿದೆ.
ಮತಾಂತರ ಮಾಡುವ ಧಾರ್ಮಿಕ ವ್ಯಕ್ತಿ ಅಥವಾ ಮತಾಂತರ ಮಾಡುವ ಮುನ್ನ ಹಾಗೂ ಮತಾಂತರ ಮಾಡಿದ ನಂತರ ಸಕ್ಷಮ ಪ್ರಾಧಿಕಾರಕ್ಕೆ ಗಮನಕ್ಕೆ ತರಬೇಕು. ಮದುವೆಯಾಗುವ ಉದ್ದೇಶದಿಂದ ನಡೆದ ಮತಾಂತರ ಅಸಿಂಧುಗೊಳಿಸಲು ಅಂಶಗಳನ್ನು ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತಾಂತರಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿ ಅಥವಾ ಮತಾಂತರವನ್ನು ಸರ್ಕಾರ ನಿಗದಿಪಡಿಸಿದ ಕಾನೂನಿನ ಪ್ರಕಾರ ಮಾಡದೇ ಇದ್ದರೆ ಅಂಥವರಿಗೆ ಜೈಲು ಹಾಗೂ ದಂಡ ವಿಧಿಸುವ ಅಂಶವನ್ನು ವಿವೇಕದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಮತಾಂತರಗೊಂಡವರಿಗೆ ಶಿಕ್ಷೆ ವಿಧಿಸುವ ಪ್ರಸ್ತಾಪವಿದೆ ಎಂದು ಹೇಳಿದ್ದಾರೆ.
ಆಮಿಷವೊಡ್ಡಿ ಮತಾಂತರ ಮಾಡಿದವರಿಗೆ ಒಂದರಿಂದ ಐದು ವರ್ಷ ಶಿಕ್ಷೆ ಹಾಗೂ ಬಲವಂತದಿಂದ ಮಹಿಳೆ ಅಥವಾ ಅಪ್ರಾಪ್ತ ಪರಿಶಿಷ್ಟರನ್ನು ಮತಾಂತರ ಮಾಡಿದರೆ ಗರಿಷ್ಠ 10 ವರ್ಷ ಶಿಕ್ಷೆ ನೀಡುವುದು. ಬಲವಂತವಾಗಿ ಮತಾಂತರ ಆಗಿಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಮತಾಂತರಗೊಂಡ ವ್ಯಕ್ತಿ ಹೊಂದಿರುತ್ತಾನೆ.
ಒಂದು ವೇಳೆ ಮತಾಂತರ ಬಲವಂತವಾಗಿ ಆಗಿದೆ ಎಂಬ ದೂರು ಕಂಡು ಬಂದಲ್ಲಿ ಸಕ್ಷಮ ಪ್ರಾಧಿಕಾರ ಪೊಲೀಸ್ ತನಿಖೆಗೆ ಒಪ್ಪಿಸುವ ಅಂಶ ಒಳಗೊಂಡು ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ.

ಕರಡು ಮಸೂದೆಯಲ್ಲಿಇರುವ ಅಂಶಗಳೇನು?
- ಮತಾಂತರಗೊಳ್ಳುವ/ಮಾಡುವ ವ್ಯಕ್ತಿ ಮೊದಲೇ ಸರ್ಕಾರಕ್ಕೆ ತಿಳಿಸಬೇಕು
- ಬಲವಂತ, ಆಮಿಷ, ವಂಚಿಸಿ ಮತಾಂತರ ಮಾಡಿದರೆ 1-10 ವರ್ಷ ಶಿಕ್ಷೆ
- ಮದುವೆಯಾಗುವ ಉದ್ದೇಶದಿಂದ ಮತಾಂತರವಾದರೆ ಅಸಿಂಧು ಸಾಧ್ಯತೆ
- ಸ್ತ್ರೀ, ಅಪ್ರಾಪ್ತ, ಪರಿಶಿಷ್ಟರನ್ನು ಅಕ್ರಮವಾಗಿ ಮತಾಂತರ ಮಾಡಿದರೆ ಗರಿಷ್ಠ ಶಿಕ್ಷೆ
- ಮತಾಂತರದ ಬಗ್ಗೆ ಪೊಲೀಸರಿಂದ ತನಿಖೆಗೆ ಅವಕಾಶ ನೀಡುವ ಸಾಧ್ಯತೆ
- ಕಾನೂನು ಉಲ್ಲಂಘಿಸಿದರೆ ಮತಾಂತರ ಮಾಡಿದ, ಮತಾಂತರ ಆದವರಿಗೂ ಶಿಕ್ಷೆ
ಧರ್ಮದ ಪ್ರಕಾರ ನಡೆದುಕೊಳ್ಳಬೇಕು : ಕಂದಾಯ ಸಚಿವ ಆರ್.ಅಶೋಕ್
ಆಮಿಷ ಒಡ್ಡಿ ಮತಾಂತರ ಮಾಡುವುದು ಕಾನೂನುಬಾಹಿರ. ಇಂತಹ ಕೃತ್ಯ ಮಟ್ಟಹಾಕಲಾಗುವುದು. ಮತಾಂತರ ನಿಷೇಧಿಸುವ ಬಗ್ಗೆ ಯಾರೂ ಭಯಗೊಳ್ಳುವ ಅವಶ್ಯಕತೆ ಇಲ್ಲ. ಯಾರು ತಪ್ಪು ಮಾಡುತ್ತಾರೋ ಅವರು ಹೆದರಬೇಕು. ಪ್ರತಿಯೊಬ್ಬರೂ ತಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.