Bharthi Singh: (ಡಿ.11): ಖ್ಯಾತ ಹಾಸ್ಯ ಗಾರ್ತಿ ಭಾರತಿ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ಹೌದು,ಹಾಸ್ಯಗಾರ್ತಿ ಭಾರತೀ ಸಿಂಗ್ ಅವರು ತಾಯಿಯಾಗಲಿರುವ ಸುದ್ದಿಯನ್ನು ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಈ ವಿಷಯವನ್ನು ತನ್ನ ಪತಿಗೆ ತಿಳಿಸಲು ವಿಭಿನ್ನವಾಗಿ ಪ್ರಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀ ಸಿಂಗ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ” Yeh Tha Hamara Sabse Bada Surprise.. Ruke kyu ho Kar do aab Subscribe” ಎಂದು ಬರೆದುಕೊಂಡಿದ್ದಾರೆ.
ಇದು ನನಗೆ ತುಂಬಾ ದೊಡ್ಡ ಸರ್ಪ್ರೈಸ್ ಆಗಿದೆ ಯಾವುದಕ್ಕಾಗಿ ಕಾಯುತ್ತಿದ್ದೀರಾ ಚಾನೆಲ್ ಗೆ subscribe ಮಾಡಿ ಎಂದು ತಮ್ಮ ಹೊಸ ಚಾನಲ್ ಅನ್ನು ಪರಿಚಯಿಸಿದ್ದಾರೆ.
ಭಾರತಿ ಸಿಂಗ್ ಅವರು, ಪ್ರಗ್ನೆನ್ಸಿ ಟೆಸ್ಟ್ ಕಿಟ್ ನಲ್ಲಿ ಬಂದ ಫಲಿತಾಂಶದಿಂದ ಪಡುತ್ತಿರುವುದನ್ನು ನೀವು ಕಾಣಬಹುದು.
ತಾನು ತಾಯಿಯಾಗುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿ, ಸಖತ್ ಸ್ಟೆಪ್ ಹಾಕಿದ್ದಾರೆ. ಆನಂತರ ತನ್ನ ಪತಿಗೆ ವಿಷಯವನ್ನು ತಿಳಿಸಲು ಬರುತ್ತಾರೆ.
ನಿದ್ರಿಸುತ್ತಿರುವ ಪತಿ ಹಾರ್ಶ್ ಲಿಂಬಾಚಿಯ ಅವರಿಗೆ ಸರ್ಪ್ರೈಸ್ ಕೊಡಲು ಹೇಗೆ ಮಾಡಿದ್ದಾರೆ ನೋಡಿ?