ಬೆಂಗಳೂರು (ಡಿ.10): Mantri Mall: ಬೆಂಗಳೂರಿನ ಪ್ರಮುಖ ಶಾಪ್ ಮಾಲ್ ಆದ ಮಂತ್ರಿ ಮಾಲ್ ಗೆ ತೆರಿಗೆ ಕಟ್ಟದೆ ಆರೋಪದಲ್ಲಿ ಬೇಗ ಮುದ್ರೆ ಹಾಕಲಾಗಿತ್ತು.
ಮಂತ್ರಿ ಮಾಲ್ ಗೆ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದೆ. ತಕ್ಷಣ 4 ಕೋಟಿ ಮೊತ್ತದ ಚೆಕ್ ನೀಡಲು ಸೂಚನೆ ನೀಡಿದೆ ಡಿಸೆಂಬರ್ 13ರ ಮಧ್ಯಾಹ್ನದ ಒಳಗೆ ಎರಡು ಕೋಟಿ ಡಿಡಿ ಪಾವತಿಗೆ ಸೂಚನೆ ನೀಡಲಾಗಿದೆ ಹೈಕೋರ್ಟ್.
ಮಂತ್ರಿ ಮಾಲ್ ನಲ್ಲಿರುವ ಕೋಟ್ಯಾಂತರ ಮೌಲ್ಯದ ವಸ್ತುಗಳು ಕೊಳೆಯುವಂತಹ ಸ್ಥಿತಿಗೆ ಬರಲಿದೆ ಎಂದು ವಕೀಲರು ವಾದ ಮಂಡಿಸಿದ್ದರು.

ಹೈ ಕೋರ್ಟ್ ನಲ್ಲಿ ವಿಚಾರಣೆ
ಮಂತ್ರಿ ಮಾಲ್ ಬಿಬಿಎಂಪಿ ಎರಡು ನಿಯಮಗಳನ್ನು ಉಲ್ಲಂಘಿಸಿದ ನಿಗದಿತ ಅವಧಿಯಲ್ಲಿ ತೆರೆಗೆ ಪಾವತಿ ಮಾಡದ ಕುರಿತು ಡಿ.13ಕ್ಕೆ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ವಸ್ತುಗಳು ಹಾಳಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲಿಗೆ ಬೀಗಮುದ್ರೆ ತರೇನು ಹೈಕೋರ್ಟ್ ಮಂಧ್ಯಂತರ ಆದೇಶ ನೀಡಿದೆ.
ಅಷ್ಟಕ್ಕೂ ಬೆಂಗಳೂರಿನ ಮಂತ್ರಿ ಮಾಲ್ ಬಿಬಿಎಂಪಿಗೆ ಸುಮಾರು 27 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಮೂರು ವರ್ಷದಿಂದ ತೆರಿಗೆ ಕಟ್ಟಿಲ್ಲ ಪದೇಪದೇ ನೊಟೀಸ್ ಜಾರಿ ಮಾಡಿದರೂ ತೆರಿಗೆ ಪಾವತಿಸದ ಎಂಬ ಕಾರಣಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದರು.
ತೆರಿಗೆ ಪಾವತಿಸಲು 15 ದಿನ ಸಮಯ ನೀಡಲಾಗಿತ್ತು. ನವಂಬರ್ ತಿಂಗಳ ಅಂತ್ಯದೊಳಗೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿತ್ತು ಆದರೂ ತೆರಿಗೆ ನೀಡದ ಕಾರಣ ನೀಡದ ಕಾರಣ ಡಿ.6 ರಂದು ಬೀಗ ಹಾಕಲಾಯಿತು