ಹಾಸನ: (ಡಿ.10) MLC Election: ವಿಧಾನಸಭಾ ಚುನಾವಣೆ ಮತದಾನ ಹಾಸನದಲ್ಲಿ ಭರದಿಂದ ನಡೆಯುತ್ತಿದೆ ಈ ನಡುವೆ ಮತದಾನ ಮಾಡಿದ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಬಗ್ಗೆ ಕಾಂಗ್ರೆಸ್ ಬೆಂಬಲಿಗರು ಆರೋಪ ಮಾಡಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿದ ಜೆಡಿಎಸ್ ಜೆಡಿಎಸ್ ಅಭ್ಯರ್ಥಿ ಸೂರಜ ರೇವಣ್ಣನವರಿಗೆ ಮೊದಲ ಮತ ನೀಡಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋಟೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಜೆಡಿಎಸ್ ಅವರು ಅಕ್ರಮ ಎಸಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿಯವರು ಆರೋಪ ಮಾಡಿದ್ದಾರೆ.
ಗೌಪ್ಯ ಮತದಾನದ ನಿಯಮ ಉಲ್ಲಂಘನೆ ಯಾಗಿದೆ ಎಂದು ಚುನಾವಣಾಧಿಕಾರಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಇದನ್ನೂ ಓದಿ: MLC Election: ವಿಧಾನ ಪರಿಷತ್ ಚುನಾವಣೆ: ಸಂಸದ ನಳಿನ್ ಕುಮಾರ್ ಮತ ಚಲಾವಣೆ

ಅಭ್ಯರ್ಥಿ ಸೂರಜ್ ಜಯಗಳಿಸುತ್ತಾರೆ
ಹಾಸನದ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ ಚಲಾಯಿಸಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿ ಸೂರಜ್ ಹೆಚ್ಚು ಮತಗಳಿಂದ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಮತ್ತು ಎಂಪಿ ಅವರು ಮತದಾನ ಮಾಡಿದ್ದೇವೆ, ಏಳು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಲ್ಲಿ ಜೆಡಿಎಸ್ಗೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು.
ಪುತ್ರನಿಂದ ವಾಸ್ತುಪ್ರಕಾರ, ಸಂಖ್ಯಾ ಅದೃಷ್ಟದ ಪ್ರಕಾರ ಮತದಾನ ಮಾಡಿಸಿ, ಸರತಿ ಸಾಲಿನಲ್ಲಿ ಬಂದಿದ್ದ ತಮ್ಮ ಸದಸ್ಯರೊಬ್ಬರನ್ನು ಹಿಂದೆ ಕಳಿಸಿ, ಸಂಸದ ಪ್ರಜ್ಚಲ್ ರೇವಣ್ಣರನ್ನು ಒಂಬತ್ತನೇ ಮತದಾರನಾಗಿ ಮತದಾನ ಮಾಡಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.
ಬ್ಯಾಲೆಟ್ ಪೇಪರ್ ಜೊತೆಗೆ ಮೊಬೈಲ್ ತೆಗೆದುಕೊಂಡು ಹೋಗಿ ಮತ ಹಾಕಿದ್ದಾರೆ ಸ್ವಾಮೀಜಿಯವರ ಫೋಟೋ ಮೊಬೈಲ್ನಲ್ಲಿ ನೋಡಿಕೊಂಡು ಮತಗಟ್ಟೆಯೊಳಗೆ ಮೊಬೈಲ್ ಸಮೇತ ಒಳಗೆ ಹೋಗಿ ಮತ ಚಲಾಯಿಸಿದ್ದಾರೆ.
ಮತಗಟ್ಟೆಯಲ್ಲಿ ಯಾರಿಗೂ ಮೊಬೈಲ್ ಮತ್ತು ಪೆನ್ನು ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಹೇಗಿದ್ದರೂ ಅವರು ಮೊಬೈಲನ್ನು ತೆಗೆದುಕೊಂಡು ಮತ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ ಹೇಗಿದ್ದರೂ ಚುನಾವಣೆ ಸಿಬ್ಬಂದಿಯವರು ನೋಡಿದರೂ ಪ್ರಶ್ನೆ ಮಾಡಿಲ್ಲ.