ದಕ್ಷಿಣ ಕನ್ನಡ :(ಡಿ.10) MLC Election: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಮತದಾನ ಆರಂಭವಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಗಣ್ಯರು ಮತ ಚಲಾಯಿಸಿದ್ದಾರೆ.

ಚುನಾವಣೆಯ ಮುನ್ನಾ ದಿನವಾದ ಗುರುವಾರವೇ ಚುನಾವಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗಳು ಚುನಾವಣಾ ಸಾಮಗ್ರಿಗಳೊಂದಿಗೆ ನಿಗದಿ ಪಡಿಸಿದ ಮತಗಟ್ಟೆಗಳಿಗೆ ತೆರಳಿದ್ದಾರೆ.

ಮಂಗಳೂರು ತಾಲೂಕಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ತೆರಳಲು ಚುನಾವಣಾ ಮತದಾನಕ್ಕೆ ನಿಯೋಜಿಸಲಾಗಿದ್ದ ಚುನಾವಣಾ ಸಿಬ್ಬಂದಿಗಳಾದ ಪಿಆರ್‍ಓ, ಪೋಲಿಂಗ್ ಅಧಿಕಾರಿಗಳು, ಗ್ರೂಪ್ ಡಿ ಹಾಗೂ ಸಂಬಂಧಿಸಿದವರು ಚುನಾವಣಾ ಸಾಮಗ್ರಿಗಳಾದ ಬ್ಯಾಲೆಟ್ ಬಾಕ್ಸ್, ಪೇಪರ್, ಇಂಕ್, ರಬ್ಬರ್ ಸ್ಟಾಂಪ್, ಸೀಲ್, ಟ್ಯಾಗ್ ಸೇರಿದಂತೆ ಅಗತ್ಯ ಪರಿಕರಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ತೆರಳಿದ್ದರು.
ಇದನ್ನೂ ಓದಿ: MLC Election:ವಿಧಾನ ಪರಿಷತ್ ಚುನಾವಣೆ: 25 ಸ್ಥಾನಗಳಿಗೆ 20 ಕ್ಷೇತ್ರಗಳಿಂದ ಚುನಾವಣೆ

ಮತ ಚಲಾವಣೆ ಬಳಿಕ ನಳಿನ್ ಕುಮಾರ್ ಮಾತನಾಡಿ, ವಿಧಾನ ಪರಿಷತ್ ನ 25 ಸ್ಥಾನಗಳ ಪೈಕಿ 20 ರಲ್ಲಿ ಬಿಜೆಪಿ ಸ್ಪರ್ಧಿಸಿದೆ
15 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ದಕ್ಷಿಣ ಕನ್ನಡ ಉಡುಪಿ ದ್ವಿಸದಸ್ಯ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಜಯಗಳಿಸಲಿದ್ದಾರೆ
ಪ್ರಥಮ ಪ್ರಾಶಸ್ತ್ಯದ ಮತಗಳ ಮೂಲಕ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು ಸಾಧಿಸಲಿದ್ದಾರೆ. ಮಂಗಳೂರು ಮಹಾನಗರಪಾಲಿಕೆ ಮತಕೇಂದ್ರದಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ ಚಲಾವಣೆ.