ದಕ್ಷಿಣ ಕನ್ನಡ: (ಡಿ.10) MLC Election: ವಿಧಾನಪರಿಷತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ಇಂದು 99.55 ರಷ್ಟು ಮತದಾನವಾಗಿದೆ.
ಒಟ್ಟು 6040 ಮತದಾರರ ಪೈಕಿ 2902 ಪುರುಷರು ಹಾಗೂ 3111 ಮಹಿಳೆಯರು ಸೇರಿ ಒಟ್ಟು 6013 ಮಂದಿ ಮತಚಲಾಯಿಸಿದ್ದಾರೆ.
ಜಿಲ್ಲೆಯ ಕಡಬ ಬಂಟ್ವಾಳ,ಮೂಡಬಿದರೆ, ಹೆಬ್ರಿ ಬೈಂದೂರು ತಾಲೂಕಿನಲ್ಲಿ ಶೇಕಡ 100ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶೇಕಡವಾರು ಮತದಾನ:
ಬೆಳ್ತಂಗಡಿ: 99.71%
ಮಂಗಳೂರು: 99.22%
ಸುಳ್ಯ: 99.0%
ಪುತ್ತೂರು: 99.20%
ಕಾರ್ಕಳ: 99.53%
ಕಾಪು: 98.96%
ಉಡುಪಿ: 99.73%
ಬ್ರಹ್ಮವರ: 99.53%
ಕುಂದಾಪುರ: 99.19%
ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.