ಬೆಂಗಳೂರು:( ಡಿ.9) VidhanaParishath Election: ನಾಳೆ ನಡೆಯಲಿರುವ ವಿಧಾನಪರಿಷತ್ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಮತದಾರರು ಮತದಾನ ಮಾಡಬೇಕಿದ್ದರೆ
ಲಸಿಕೆ ಪಡೆದಿರಬೇಕು ಎಂದು ಹೇಳಿದ್ದಾರೆ ಹಾಗೂ ಲಸಿಕೆಯ ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ. ಸೂಚಿಸಿದ್ದಾರೆ.
ಮತದಾನದಲ್ಲಿ ಬ್ಯಾಲೆಟ್ ಕಾಗದ ಮುಖ್ಯವಾಗಿರುವ ಕಾರಣ ಮತದಾರರು ಹೊರಗೆ ತೆಗೆದುಕೊಂಡು ಹೋದರೆ ಅಥವಾ ಕಾಗದವನ್ನು ದುರ್ಬಳಕೆ ಮಾಡುವುದು ಕಂಡು ಬಂದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮತದಾರರಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಬಹಿರಂಗ ಪ್ರಚಾರ ನಿಷೇಧ
ನಾಳೆ ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವುದರಿಂದ ಸಾರ್ವಜನಿಕ ಸಭೆ ಸಮಾರಂಭಗಳು ಬೈಕ್ ರ್ಯಾಲಿ ಬೀದಿ ನಾಟಕ ಮುಂತಾದ ಬಹಿರಂಗ ಪ್ರಚಾರಗಳನ್ನು ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಮುಂಚಿತವಾಗಿ ನಿಲ್ಲಿಸುವಂತೆ ಹಾಗೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮತಗಟ್ಟೆಯ ವಿವರ:
ಯಲಹಂಕ ಆನೇಕಲ್ ಬೆಂಗಳೂರು ಉತ್ತರ ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 2,073 ಮತದಾರರಿದ್ದಾರೆ.
ಮತದಾನದ ಪ್ರಕ್ರಿಯೆಗೆ ಒಟ್ಟು 83 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಈ ಪೈಕಿ ಅತಿ ಸೂಕ್ಷ್ಮ ಮೂರು ಮತಗಟ್ಟೆ ಗಳಿದ್ದರೇ, 38 ಸೂಕ್ಷ್ಮ ಮತಗಟ್ಟೆಗಳು ಇದೆ ಎಂದು ಹೇಳಿದರು.
313 ಪೊಲೀಸ್ ಭದ್ರತಾ ವ್ಯವಸ್ಥೆ
ಬೆಂಗಳೂರು ನಗರ ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಪೊಲೀಸರು v ಭದ್ರತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು. ನಾಲ್ವರು ಡಿವೈಎಸ್ಪಿ, 18 ಇನ್ಸ್ಪೆಕ್ಟರ್ ಸೇರಿದಂತೆ 313 ಪೊಲೀಸರನ್ನು ನಿಯೋಜಿಸಲಾಗಿದೆ.
ಅನಕ್ಷರಸ್ಥರ ಮತದಾರರಿಗೆ ಸಹಾಯಕರನ್ನು ನೇಮಿಸಲಾಗಿದೆ. ಆದರೆ ಅನಕ್ಷರಸ್ಥ ಮತದಾರರಿಗೆ ಸಹಾಯಕರನ್ನು ಪಡೆದಿರುವ ಸಂಖ್ಯೆಯು ಕಡಿಮೆ ಇದೆ ಮತದಾನ ಪ್ರಕ್ರಿಯೆಗೆ ಮತಗಟ್ಟೆ ಅಧಿಕಾರಿ ಗಳನ್ನು ಕರೆದೊಯ್ಯಲು 17 ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಐದು ತಾಲೂಕುಗಳಲ್ಲಿ ಒಟ್ಟು 14 ಸ್ಪೆಕ್ಟರಲ್ ಅಧಿಕಾರಿಗಳನ್ನು ಹಾಗೂ 15 ಎಂಸಿಸಿ ತಂಡವನ್ನು ರಚನೆ ಮಾಡಲಾಗಿದೆ.
ಮತ ಎಣಿಕೆ:
ನಾಳೆ ಮತದಾನ ನಡೆದರೆ, ನ.14 ರಂದು ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ8 ರಿಂದ ಮತಎಣಿಕೆ ಗಳು ಆರಂಭವಾಗಲಿದೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಸುವಸ್ತು ಕಾಪಾಡುವ ಸಲುವಾಗಿ ಡಿ.8 ರಂದು ಸಂಜೆ 4 ರಿಂದ ಡಿ.10ರ 10:00 ಯವರೆಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.