ಬಾಗಲಕೋಟೆ: (ಡಿ.9) Tribute to Army Chief: ಸೀನ ಹೆಲಿಕಾಪ್ಟರ್ ದುರಂತದಲ್ಲಿ ಸೀನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಿಧನರಾದ ಹಿನ್ನೆಲೆ ಬಾಗಲಕೋಟೆಯ ಜಮಖಂಡಿಯ ಶಿಕ್ಷಕರೊಬ್ಬರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
ಜಮಖಂಡಿ ಪಟ್ಟಣದ ಕಲಾವಿದರೊಬ್ಬರು ರಕ್ತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಚಿತ್ರವನ್ನು ಬಿಡಿಸಿ ಶ್ರದ್ದಾಂಜಲಿ ಕೋರಿದ್ದಾರೆ.
ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಂಗಮೇಶ ಎಂಬುವವರು ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಬಿಡುತ್ತಾರೆ ನೆನ್ನೆ ಹೆಲಿಕ್ಯಾಪ್ಟರ್ ಪತನದಲ್ಲಿ ನಿಧನರಾದ ಬಿಪಿನ್ ರಾವತ್ ಅವರ ಚಿತ್ರವನ್ನು ತಮ್ಮ ರಕ್ತದಿಂದ ಬಿಡಿಸಿದ್ದಾರೆ.

ಹೊಸೂರಿನ RMSA ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರು ರಕ್ತದಲ್ಲಿಯೇ ಮಹಾತ್ಮ ಗಾಂಧಿ ಅಂಬೇಡ್ಕರರ ಅಬ್ದುಲ್ ಕಲಾಂ ಇಂದಿರಾಗಾಂಧಿ ಸೇರಿದಂತೆ ಹಲವಾರು ಸ್ವತಂತ್ರ ಹೋರಾಟಗಾರರ ಚಿತ್ರಗಳನ್ನು ಬಿಡಿಸಿದ್ದಾರೆ.
ಇತ್ತೀಚಿಗೆ ಕೊರೀನಾ ಸಮಯದಲ್ಲಿ ಜಾಗೃತಿ ಮೂಡಿಸುವ ಚಿತ್ರಕಲೆ ಹಾಗೂ ಹುತಾತ್ಮರಾದ ಸೈನಿಕರ ಚಿತ್ರ ಸೇರಿದಂತೆ ಹಲವಾರು ಚಿತ್ರಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: Rohini Court: ದೆಹಲಿಯ ರೋಹಿಣಿ ಕೋರ್ಟ್ ಒಳಗೆ ನಿಗೂಢ ಸ್ಪೋಟ : ಕಲಾಪಗಳು ಸ್ಥಗಿತ
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಚಿತ್ರವನ್ನು ಮೊಬೈಲ್ ನಲ್ಲಿ ನೋಡಿಕೊಂಡು ಚಿತ್ರ ಬಿಡಿಸುವುದರ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ ಶಿಕ್ಷಕ ಸಂಗಮೇಶ ಬಗಲಿ.