ಬೆಂಗಳೂರು: (ಡಿ.9) Coronavirus: ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಶಾಲಾ ಮಕ್ಕಳ ಮೇಲೆ ಹೆಚ್ಚು ನಿಗಾ ಇಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಾಸ್ಟೆಲ್ಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
ಮಾರ್ಗಸೂಚಿಗಳು :
- ಹಾಸ್ಟೆಲ್ ನಲ್ಲಿ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ.
- ಸಮಾಜಿಕ ಸ್ಥರ ಪಾಲಿಸಿಕೊಂಡು ಊಟ ಮಾಡುವುದಕ್ಕೆ ಹಾಸ್ಟೆಲ್ಗಳಲ್ಲಿ ವ್ಯವಸ್ಥೆ ಮಾಡಬೇಕು.
- ಹಾಸ್ಟೆಲ್ ನಲ್ಲಿ ಇರುವ ಸಿಬ್ಬಂದಿಗಳಿಗೆ 2 ಡೋಸ್ ಲಸಿಕೆ ಕಡ್ಡಾಯ.
- ಹಾಸ್ಟೆಲ್ಗಳಲ್ಲಿ ಹೊಸಬರಿಗೆ ಕಡ್ಡಾಯವಾಗಿ ಪ್ರವೇಶವಿಲ್ಲ.
ಮೌಂಟ್ ಕಾರ್ಮೆಲ್ ಪಿಯು ತರಗತಿಯಲ್ಲಿ ಪಾಸಿಟಿವ್ ಆಗಿದೆ ಹಾಗೂ ಕೋವಿಡ್ ಸೋಂಕು ತಗಲಿದವರು ಸದ್ಯ ಆರೋಗ್ಯವಾಗಿದ್ದಾರೆ. ಶಾಲೆಗಳೆಲ್ಲ ಮತ್ತೆ ಪ್ರಾರಂಭವಾಗಿದ್ದು ಶಾಲೆಗಳಿಗೆ ಮಕ್ಕಳು ಆಸಕ್ತಿಯಿಂದಲೇ ಬರುತ್ತಿದ್ದಾರೆ.
172 ಶಿಕ್ಷಕರು ಮತ್ತು ಮಕ್ಕಳಿಗೆ ಸೋಂಕು ತಗುಲಿದೆ ನೂರು ಮಕ್ಕಳು ಇದರಿಂದ ಗುಣಮುಖರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.