ರಾಜಸ್ಥಾನ:( ಡಿ.9) Katrina Kaif Weds Vicky Kaushal : ಬಾಲಿವುಡ್ ನಟಿ ಇಂದು ಅದ್ದೂರಿಯಾಗಿ ಮದುವೆ ಮಾಡಿಕೊಂಡರು. ಇಂದು ಮಧ್ಯಾಹ್ನ ವಿವಾಹ ಕಾರ್ಯ ನೆರವೇರಿತು.
ರಾಜಸ್ಥಾನದ ಸಿಕ್ಸ್ತ್ ಸೆನ್ಸ್ ಪೋರ್ಟ್ ನಲ್ಲಿ ಇಂದು ಮದುವೆ ನೆರವೇರಿತು. ಸಪ್ತಪದಿ ತುಳಿಯುವ ಮುನ್ನ ಮೆಹಂದಿ ಶಾಸ್ತ್ರ ಸಂಗೀತ ಕಾರ್ಯಕ್ರಮಗಳು ನಡೆಯಿತು. ಗಾಜಿನ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೌಶಲ್ ಅವರ ಮದುವೆಯ ಫೋಟೋ ಎಲ್ಲೂ ಹೊರಬಂದಿಲ್ಲ. ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು ಎನ್ನಲಾಗಿದೆ. ಮದುವೆಗೆ ಆಗಮಿಸಿದ ಅತಿಥಿಗಳಿಗೆ ಫೋಟೋ ತೆಗೆಯುವಂತಿಲ್ಲ ಎಂದು ನಿಯಮ ಹಾಕಲಾಗಿತ್ತು.

ಅದ್ಯಾಗೋ ಮದುವೆಯ ಫೋಟೋ ಲೀಕ್ ಆಗಿದ್ದು, ಫೋಟೋದಲ್ಲಿ ವಿವಾಹದ ಬಳಿಕ ಕೋಟೆಯ ಮೇಲೆ ಬಂದು ದಂಪತಿಗಳಿಬ್ಬರೂ ಬಂದ ಅತಿಥಿಗಳಿಗೆ ಕೈಬೀಸುವ ದೃಶ್ಯ ಕಾಣಿಸಿತು.
ಮದುವೆಗೆ ಆಗಮಿಸಿರುವ ಅತಿಥಿಗಳ ಪಟ್ಟಿಯನ್ನು ಬಹಳ ರಾಷ್ಟ್ರವಾಗಿ ಇರಿಸಲಾಗಿತ್ತು ಯಾರು ಯಾರು ಮದುವೆಗೆ ಆಗಮಿಸಿದ್ದಾರೆ ಎಂಬುದು ಸಹ ಗೊತ್ತಾಗಿರಲಿಲ್ಲ ಆದರೆ ಸೋಮವಾರ ಜೈಪುರದಲ್ಲಿ ಸೆಲೆಬ್ರಿಟಿಗಳು ಬರಲು ಪ್ರಾರಂಭಿಸಿದಾಗ ಬಹಿರಂಗವಾಗಿದೆ.
ಕಬೀರ್ ಖಾನ್, ಮಿನಿ ಮಾಥೂರ್, ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ, ನೆಹ ಧೂಪಿಯ, ಅಂಗದ್ ಬೇಡಿ, ನಟಿಯರಾದ ಶಾರ್ವರಿ ವಾಘ್, ರಾಧಿಕಾ ಮದನ್, ವಿಕ್ಕಿ ಕೌಶಲ್ ಅವರ ಸಹೋದರ ಸನ್ನಿ ಹಾಗೂ ಅವರ ಸ್ನೇಹಿತರು, ಲಕ್ಕಿ ಬಾಲ್ಯ ಸ್ನೇಹಿತೆ ನಟಿ ಮಾಳವಿಕ ಮೋಹನ್ ಭಾಗಿಯಾಗಿದ್ದರು.
ಪಂಜಾಬಿ ಸಂಗೀತ ಮದುವೆಗೆ ಸಾಕ್ಷಿಯಾಗಿತ್ತು. ವಿದೇಶದಲ್ಲಿ ಹುಟ್ಟಿದ ಕಟ್ರಿನ ಕೈಫ್ ಭಾರತದ ಹುಡುಗನನ್ನು ಕೈಹಿಡಿದಿರುವುದು ಸಂತಸದ ವಿಷಯವಾಗಿದೆ.