ಗೋಣಿಕೊಪ್ಪಲು: (ಡಿ.9): School Fee: ಶಾಲೆಯ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಹೊರಹಾಕಿದ್ದ ಶಾಲೆಯ ವಿರುದ್ಧ ವಿದ್ಯಾರ್ಥಿಯ ಪೋಷಕರೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.
ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿ ಮುತ್ತಣ್ಣ ಸೇರಿದಂತೆ 20 ವಿದ್ಯಾರ್ಥಿಗಳು ಶಾಲೆಯ ಶುಲ್ಕ ಕಟ್ಟಿಲ್ಲ ವೆಂದು ತರಗತಿಗೆ ಸೇರಿಸದೆ ಗ್ರಂಥಾಲಯದಲ್ಲಿ ಕೂರಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮುತ್ತಣ್ಣ ಎಂಬ ವಿದ್ಯಾರ್ಥಿಯ ತಂದೆ ಬೆಳ್ಳಿಯಪ್ಪ ಎಂಬುವವರು ಡಿ.1 ರಂದು ಪ್ರಧಾನಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಲೆಗೆ ತೆರಳಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮುತ್ತಣ್ಣ ನಾನು ಹಾಗೂ ಪೋಷಕರೊಂದಿಗೆ ತಮ್ಮ ಕಚೇರಿಗೆ ಕರೆದುಕೊಂಡು ಮಾಹಿತಿ ಪಡೆದು ಕೊಂಡಿದ್ದರು

ಕೋವಿಡ್ ನಲ್ಲಿಯೂ ಶುಲ್ಕ ಏರಿಕೆ:
ಅಜ್ಜಿಯೊಂದಿಗೆ ಕಚೇರಿಗೆ ಬಂದ ಮುತ್ತಣ್ಣ ಕರೆದುಕೊಂಡು ಮಾಹಿತಿ ಪಡೆದರು. ಅದೇ ರೀತಿ ಶಾಲೆಯ ಪ್ರಾಂಶುಪಾಲ ರೊಂದಿಗೆ ಚರ್ಚಿಸಿ ವಿದ್ಯಾರ್ಥಿಯನ್ನು ತರಗತಿಗೆ ಸೇರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುತ್ತಣ್ಣನ ತಂದೆ ಬೆಳ್ಳಿಯಪ್ಪ ಅವರು, ಧಾರವಾಡದಲ್ಲಿ ನಾನು ನೆಲೆಸಿದ್ದೇನೆ, ಈ ವರ್ಷ 60 ಸಾವಿರ ರೂಪಾಯಿ ಫೀಸು ಕಟ್ಟಿದ್ದೇನೆ. ಕೋವಿಡ್ ಸಂಕಷ್ಟದಲ್ಲಿಯೂ ಶುಲ್ಕವನ್ನು ಏರಿಸಿದ್ದಾರೆ ಇದರ ಬಗ್ಗೆ ಪ್ರಾಂಶುಪಾಲರಿಗೆ ಕೇಳಿದರೆ ಸರಿಯಾಗಿ ಉತ್ತರಿಸುವುದಿಲ್ಲ .
ಕೇವಲ ವಾಟ್ಸಪ್ ನಲ್ಲಿ ಮೆಸೇಜ್ ಹಾಕಿದ್ದರು ಇದರಿಂದ ಬೇಸರದಿಂದ ನೇರವಾಗಿ ಪ್ರಧಾನಮಂತ್ರಿಯವರಿಗೆ ಪತ್ರವನ್ನು ಬರೆದಿದ್ದು ಈಗ ನನ್ನ ಮಗನನ್ನು ತರಗತಿಗೆ ಸೇರಿಸುತ್ತಿದ್ದಾರೆ ಆದರೆ ಅಲ್ಲಿಂದ ಏನು ಸಂದೇಶ ಬಂದಿದೆ ಗೊತ್ತಿಲ್ಲವೆಂದು ಬೆಳ್ಳಿಯಪ್ಪ ಅವರು ತಿಳಿಸಿದ್ದಾರೆ