ಬೆಂಗಳೂರು:( ಡಿ.8) Dr. A D. Shivaram: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ದಿ.12 ರಂದು ನಡೆಯುತ್ತಿರುವ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಪಶುಪಾಲನಾ ಇಲಾಖೆಯಿಂದ ಬೆಂಗಳೂರು ವಿಭಾಗದಿಂದ ಡಾ. ಎ.ಡಿ. ಶಿವರಾಮ ಅವರು ಸ್ಪರ್ಧಿಸುತ್ತಿದ್ದಾರೆ.
ಡಾ. ಟಿ .ಹೆಚ್ ಆಂಜನಪ್ಪ ಮತ್ತು ನಾರಾಯಣಗೌಡರ ತಂಡದಿಂದ ಸ್ಪರ್ಧಿಸುತ್ತಿರುವ ಡಾ. ಎ.ಡಿ. ಶಿವರಾಮ ಅವರ ಕ್ರಮ ಸಂಖ್ಯೆ 119ಕ್ಕೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ವಿಭಾಗದಿಂದ ಬೆಂಗಳೂರು ನಗರ ಸೇರಿದಂತೆ, ಆನೆಕಲ್ಲು ,ನೆಲಮಂಗಲ, ಹೊಸಕೋಟೆ , ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕಿನ, ಮತದಾರರಿಗೆ 15 ಮತ ನೀಡುವ ಅವಕಾಶ ಇರುತ್ತದೆ.

ಅಭ್ಯರ್ಥಿಯ ಕಿರುನೋಟ
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಅಣ್ಣೆಗನಹಳ್ಳಿ ಯಲ್ಲಿ ಜನಿಸಿದರು. ಪಶುವೈದ್ಯರಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನಲ್ಲಿ BVSC ಪದವಿ ಮತ್ತು MVSC ಸ್ನಾತಕೋತ್ತರ ಪದವಿ ಪಡೆದರು.
ಗುತ್ತಿಗೆ ಆಧಾರದ ಮೇಲೆ ಪಶುವೈದ್ಯ ಕೆಲಸ ಮಾಡಲು ಪ್ರಾರಂಭಿಸಿದ ಇವರು, 1997 ರಲ್ಲಿ ಡಾ. ಎ. ಡಿ. ಶಿವರಾಮ ಅವರು ವೃತ್ತಿ ಆರಂಭಿಸಿದರು.
ಇವರು ಕರ್ನಾಟಕ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 2016 – 2019 ರ ವರೆಗೆ ಕಾರ್ಯನಿರ್ವಹಿಸಿದ್ದರು.
2005- 2007ರವರೆಗೆ ಅರಕಲಗೂಡು ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆಲಸಮಾಡಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.