ಮಂಗಳೂರು: (ಡಿ.8)Police Commissioner N.Shashikumar : ಮಂಗಳೂರಿನ ಜನಪರ ಸ್ನೇಹಿ ಅಧಿಕಾರಿಯಾಗಿರುವ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಗೋವುಗಳನ್ನು ಸಾಕುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ವಿವಿಧ ಕಾರಣಗಳಿಂದ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಶಶಿಕುಮಾರ್ ಅವರು ತಮ್ಮ ಮನೆಯಲ್ಲಿ ಗೋವುಗಳನ್ನು ಸಾಕುತ್ತಿದ್ದು, ಕಮಿಷನರ್ ಲಾಲನೆ ಪಾಲನೆ ಮಾಡಿ ಬೆಳೆಸಿದ್ದ ಹಸುವೊಂದು ಗಂಡು ಕರುವಿಗೆ ಜನ್ಮ ನೀಡಿದೆ.
ಅಪ್ಪು ಎಂದು ನಾಮಕರಣ:
ಪೊಲೀಸ್ ಕಮಿಷನರ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿ, ಪುನೀತ್ ರಾಜಕುಮಾರ್ ಅವರ ನಿಧನದ ಹಿನ್ನೆಲೆ ಕಂಬನಿ ಮಿಡಿದಿದ್ದರು. ಪುನೀತ್ ರಾಜಕುಮಾರ್ ಅವರು ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಪ್ರಾರ್ಥನೆ ಮಾಡುವುದು ಜನರಲ್ಲಿ ಮನವಿ ಮಾಡಿಕೊಂಡಿದ್ದರು.
ಗಂಡು ಕರುವಿಗೆ “ಅಪ್ಪು” ಎಂದು ನಾಮಕರಣ ಮಾಡುವ ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಸದ್ಯ ನಗರದ ಪಾಂಡೇಶ್ವರ ಪೊಲೀಸ್ ಲೇನ್ ನಲ್ಲಿ ವಾಸವಿರುವ ಏನ್ ಶಶಿಕುಮಾರ್ ಅವರು, ತಮ್ಮ ಮನೆಯಲ್ಲಿ ದೇಸಿ ಹಸುವನ್ನು ಸಾಕಿಕೊಂಡಿದ್ದಾರೆ.

ಬಿಳಿ ಮತ್ತು ಕಂದುಬಣ್ಣದ ಕರುವನ್ನು ಹಿಡಿದುಕೊಂಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಮನೆಗೆ ನೂತನ ಸದಸ್ಯನ ಆಗಮನವಾಗಿದೆ ಅವನಿಗೆ ಅಪ್ಪು ಎಂದು ಹೆಸರಿಟ್ಟಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Assaulted on Police: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆ ಪುಂಡರ ಅಟ್ಟಹಾಸ
ಕೃಷಿಯ ಮೇಲಿನ ಆಸಕ್ತಿ:
ಪೊಲೀಸ್ ಕಮಿಷನರ್ ಅವರು ಮೊದಲಿಂದಲೂ ಗ್ರಾಮೀಣ ಬದುಕು ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ತಮ್ಮ ಕೆಲಸದ ಒತ್ತಡಗಳ ನಡುವೆಯೂ ಗೋವುಗಳನ್ನು ಬಂದಿದ್ದಾರೆ.
ಎನ್. ಶಶಿಕುಮಾರ್ ಅವರು ಇತ್ತೀಚೆಗೆ ಅಂದರ ಜೊತೆ ಹಾಡನ್ನು ಹಾಡಿ ಸಂಭ್ರಮಿಸಿದರು. ಪೊಲೀಸರ ಆರೋಗ್ಯ ದೃಷ್ಠಿಯಿಂದಲೂ ವಿಶೇಷ ಚಟುವಟಿಕೆಗಳನ್ನು ಹಾಗೂ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರು.
ಪೊಲೀಸ್ ಆಯುಕ್ತರ ವಿರುದ್ಧ ಹಲವಾರು ಟೀಕೆಗಳು ಎದುರಾಗಿದೆ, ಜನಸ್ನೇಹಿಯಾಗಿ ಗುರುತಿಸಿಕೊಂಡಿರುವ ಕಮಿಷನರ್ ಸಾಹೇಬರು, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ ಮಂಗಳೂರಿನಲ್ಲಿರುವ ಕಿಡಿಗೇಡಿಗಳನ್ನು ಮಟ್ಟಹಾಕಲಿ ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿರುವ ಎಸ್ಎನ್ ರಾಜೇಶ್ ಅವರು ನಾಪತ್ತೆಯಾಗಿ 50 ದಿನಗಳು ಕಳೆದರು ಆತನನ್ನು ಬಂಧಿಸಿ ಬರುವುದು ಪೊಲೀಸ್ ಕಮಿಷನರ್ ವೈಫಲ್ಯ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ಆರೋಪಿಸಿದ್ದಾರೆ.
ಕೇವಲ ಕಮಿಷನರ್ ಅವರು ಹಾಡುವುದು ಮಾತ್ರವಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ.