ಚೆನ್ನೈ:( ಡಿ.8): Army Helicopter Crash: ತಮಿಳುನಾಡಿನ ಊಟಿಯಲ್ಲಿ ಸೇನಾ ಹೆಲಿಕ್ಯಾಪ್ಟರ್ ಪತನಗೊಂಡ ಸ್ಥಳದಲ್ಲಿ ಅನುಮಾನಸ್ಪದ ವ್ಯಕ್ತಿಯೊಬ್ಬನನ್ನು ಕೋಬ್ರಾ ಪೊಲೀಸ್ ಪಡೆಯ ವಶಕ್ಕೆ ಪಡೆದುಕೊಂಡಿದ್ದಾರೆ.
ಪಂಜಾಬ್ ಮೋಹನ್ ಎಂಬಾತನನ್ನು ಸಿಆರ್ಪಿಎಫ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಸೇನಾ ಸಿಬ್ಬಂದಿ ಪಡೆ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.

ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ವಿಧಿವಶ:
ತಮಿಳುನಾಡಿನ ಊಟಿಯಲ್ಲಿ ಸಂಭವಿಸಿದ ಹೆಲಿಕ್ಯಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಅವರು ದುರಂತದಲ್ಲಿ ಮೃತ ಪಟ್ಟಿದ್ದಾರೆ.
ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 11 ಮಂದಿ ಮೃತ ದೇಹಗಳು ಪತ್ತೆಯಾಗಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಪಿನ್ ರಾವತ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದು, ರಾವತ್ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ವಿಧಿವಶ:
ಸಿಡಿಎಸ್ ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಬ್ರಿಗಡಿಯರ್ ಎಲ್.ಎಸ್ ನಾಯಕ್, ಲೆಫ್ಟಿನೆಂಟ್ ಹರ್ಜಿಂದರ್ ಸಿಂಗ್, ಎನ್.ಕೆ ಗುರು ಸೇವಕ ಸಿಂಗ್ , ಎನ್.ಕೆ ಜಿತೇಂದ್ರ ಸಿಂಗ್ , ಎನ್.ಕೆ ವಿವೇಕ ಕುಮಾರ್ , ಎನ್. ಸಾಯಿ ತೇಜ, ಹೆಚ್ ಎ. ವಿ. ಸಾತ್ಪಾಲ್ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ
ಸೀನ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಸ್ಥಿತಿ ಕ್ಷಣಕ್ಕೂ ಹದಗೆಡುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು ಈ ಮಧ್ಯೆ ವಾಯುಸೇನೆ ಮುಖ್ಯಸ್ಥ ವಿವೇಕ ರಾಮಚಾರಿ ಘಟನಾ ಸ್ಥಳಕ್ಕೆ ತೆರಳಿದ್ದು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.