ಬೆಂಗಳೂರು:( ಡಿ.7) Assaulted on Police : ಕಾರಿಗೆ ಬೈಕ್ ಟಚ್ ಆಗಿದೆ ಎಂಬ ಕಾರಣಕ್ಕಾಗಿ ಪೊಲೀಸರ ಮೇಲೆ ನಿನ್ನೆ ತಡರಾತ್ರಿ ಹಲ್ಲೆ ನಡೆದ ಘಟನೆ ನಗರದ ಯಲಹಂಕದ ನ್ಯೂಟೌನ್ ನ ಚಿಕ್ಕಬೆಟ್ಟಹಳ್ಳಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ ಹಾಗೂ ಕಾನ್ಸ್ಟೇಬಲ್ ಅಸ್ಲಾಂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಷಮೆ ಕೇಳಿದರು ಬಿಡಲಿಲ್ಲ ಪುಂಡರು:
ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆ ಎಲ್ಲಾ ವಾಹನಗಳು ಒಂದೇ ರಸ್ತೆಯಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ವೇಳೆ ಪಿಎಸ್ಐ ಶ್ರೀಶೈಲ ಹಾಗೂ ಪೇದೆ ಹೋಗ್ತಿದ್ದ ಬೈಕ್ ಸುಧೀರ್ನ ಕಾರ್ಗೆ ಟಚ್ ಆಗಿದೆ.
ಕಾರಿಗೆ ಬೈಕ್ ಟಚ್ಚಾಯ್ತು ಎನ್ನುವ ಕಾರಣಕ್ಕೆ ಆರೋಪಿ ಸುಧೀರ್ ಮತ್ತು ಆತನ ತಂಡ ಕರ್ತವ್ಯ ನಿರತ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿದ್ದಾರೆ.

ಆ ವೇಳೆ ಪಿಎಸ್ಐ ಕ್ಷಮೆ ಕೇಳಿದ್ರೂ ಹಿಂದೆಮುಂದೆ ನೋಡದೆ ಸುಧೀರ್ ಮತ್ತು ಆತನ ಸಹಚರರು ಹಲ್ಲೆ ಮಾಡಿ ಎಸ್ಕೇಪ್ ಹಾಗಿದ್ದಾರೆ. ಪುಂಡರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Police officials beaten up by miscreants in #Bengaluru's Yelahanka New Town police station limits. The incident took place last night. The miscreants were said to be drunk while attacking. FIR registered under sec 353. Miscreants identified and they have been nabbed. pic.twitter.com/T5jSWY5Z2n
— Suraj Suresh (@Suraj_Suresh16) December 7, 2021