ಚಾಮರಾಜನಗರ: (ಡಿ.7) Neelakurunji Flower ಗಡಿನಾಡು ಎಂದರೆ ನೆನಪಾಗುವುದೇ ಚಾಮರಾಜನಗರ ಅರಣ್ಯಗಳ ತಾಣ, ಪ್ರಕೃತಿಯ ಅಂದವನ್ನು ಸವಿಯಲು ಚಾಮರಾಜನಗರಕ್ಕೆ ಎಂದಾದರೂ ಭೇಟಿ ನೀಡಬೇಕು.
ಪಶ್ಚಿಮ ಘಟ್ಟಗಳ ಸಾಲು:
ಚಾಮರಾಜನಗರದಲ್ಲಿ ಸುತ್ತ ಮುತ್ತಲೂ ನೋಡಿದರೂ ಬೆಟ್ಟಗಳ ಸಾಲು ಕಾಣುತ್ತದೆ. ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಸೇರಿದಂತೆ ಹಲವಾರು ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಗಡಿ ಪ್ರದೇಶವಾಗಿದೆ.
ಮಡಿಕೇರಿಯ ಮಾಂದಲಪಟ್ಟಿ ಸಮೀಪ ಇರುವ ನೀಲಕುರುಂಜಿ ಸೌಂದರ್ಯವನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.ಅಂದಹಾಗೆ ನೀಲಕುರುಂಜಿ ಹೂವು ಮತ್ತೊಂದೆಡೆ ಅರಳಿ ನಿಂತಿದೆ. ಅದು ಎಲ್ಲಿ ಅಂತೀರಾ?
ಗಡಿ ಜಿಲ್ಲೆ ಚಾಮರಾಜನಗರದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ರಕ್ಷಿತಾರಣ್ಯದ ಬೈಲೂರು ಪುಣಜನೂರು ಪ್ರದೇಶದಲ್ಲಿ ನೀಲಕುರುಂಜಿ ಹೂವು ಅರಳಿ ನಿಂತಿದೆ.
12 ವರ್ಷಕ್ಕೊಮ್ಮೆ ಅರಳುವ ಹೂವು:
ನೀಲಕುರಂಜಿ ಹೂವು ಯಾವಾಗಲೂ ಪ್ರವಾಸಿಗರಿಗೆ ಕಾಣಲು ಸಿಗುವುದಿಲ್ಲ. 12 ವರ್ಷಕ್ಕೊಮ್ಮೆ ಅರಳಿ ನಿಲ್ಲುವ ನೀಲಕುರಂಜಿ ಹೂವು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

ಪ್ರವಾಸಿಗರಿಗೆ ನೋ ಎಂಟ್ರಿ:
ಬಿ.ಆರ್.ಟಿ ಸಂರಕ್ಷಿತ ಅರಣ್ಯದ ಬೈಲೂರು, ಪ್ರದೇಶದಲ್ಲಿ ನೀಲ ಕುರಿಂಜಿ ಹೂಗಳು ಅರಳಿ, ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.
BRT ಸಂರಕ್ಷಿತ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ ಸಂತೋಷ್ ಕುಮಾರ್ ಅವರು, ನೀಲಕುರುಂಜಿ ಹೂವುಗಳನ್ನು ನೋಡಿ ಅದರ ಸೌಂದರ್ಯಕ್ಕೆ ಮನಸೋತಿದ್ದಾರೆ. ಪ್ರವಾಸಿಗರಿಗೆ ಇಲ್ಲಿ ಬರಲು ಅವಕಾಶವಿಲ್ಲದ ಕಾರಣ ತಾವೇ ಸ್ವತಃ ಫೋಟೊ ತೆಗೆದು ಹಂಚಿಕೊಂಡಿದ್ದಾರೆ.
ಸಂರಕ್ಷಿತ ಅಭ್ಯಯರಣ್ಯ (Reserve Forest Area) ಪ್ರದೇಶವಾಗಿರುವ ಕಾರಣ ನೀಲಕುರಿಂಜಿ ಸೊಬಗನ್ನು ನೋಡಲು ಅವಕಾಶವಿಲ್ಲ ಎಂದಿದ್ದಾರೆ.