ಬೆಂಗಳೂರು: (ಡಿ.7) Theft : ಬೆಂಗಳೂರು ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ ಈ ನಡುವೆ ಕೆಂಗೇರಿ ಅಪಾರ್ಟ್ಮೆಂಟ್ ಒಂದರಲ್ಲಿ ಶೂ, ಚಪ್ಪಲಿಗಳು ಹಾಗೂ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ.
ಕಳ್ಳರು ಅಪಾರ್ಟ್ಮೆಂಟ್ ಒಂದರಲ್ಲಿ ಕದಿಯುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿ.5ರ ಮಧ್ಯರಾತ್ರಿಯಲ್ಲಿ ಬಂದ ನಾಲ್ಕು ಜನರ ತಂಡವೊಂದು ಕೆಂಗೇರಿ ಸ್ಯಾಟಲೈಟ್ ಸುತ್ತಮುತ್ತಲಿರುವ 3, 4 ಅಪಾರ್ಟ್ ಮೆಂಟ್ ಗಳಲ್ಲಿ ಶಿವು ಚಪ್ಪಲಿ ಹಾಗೂ ಬಟ್ಟೆಗಳನ್ನು ಕದ್ದಿದ್ದಾರೆ.

ಈ ಬಗ್ಗೆ ಯಾವ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎನ್ನಲಾಗಿದೆ. ಘಟನೆಯಿಂದ ಜನರು ಭಯಭೀತರಾಗಿದ್ದು ಯಾವಾಗ ಯಾವ ಮನೆಗೆ ನುಗ್ಗಿ ಕನ್ನ ಹಾಕುತ್ತಾರೆ ಎಂಬ ಭಯ ಸೃಷ್ಟಿಯಾಗಿದೆ.
ಸುಮಾರು 1.30 ರಿಂದ 2.30 ರ ವೇಳೆ ಕೆಂಗೇರಿ ಅಪಾರ್ಟ್ಮೆಂಟ್ ನಲ್ಲಿ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಅಪಾರ್ಟ್ಮೆಂಟ್ ಜನರು ಬಟ್ಟೆಗಳು ಹಾಗೂ ಶೂಗಳು ಕಳವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: 131 ವಿದ್ಯಾರ್ಥಿಗಳಿಗೆ ಪಾಸಿಟಿವ್.. ಶಾಲೆ ಬಂದ್ ಆಗುತ್ತಾ? ನೂತನ ಗೈಡ್ ಲೈನ್ಸ್ ಬಿಡುಗಡೆ