Body Purifying (ಡಿ.7) ನಮ್ಮ ದೇಹ ದೇಗುಲವಿದ್ದಂತೆ, ದೇಗುಲವನ್ನು ಹೇಗೆ ಸ್ವಚ್ಛ ಗೊಳಿಸುತ್ತೇವೆ ಹಾಗೆಯೇ ನಮ್ಮ ದೇಹವನ್ನು ನಾವು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ಬರೀ ದೈಹಿಕವಾಗಿ ಸ್ವಚ್ಛಗೊಳಿಸಿದರೆ ಸಾಲದು. ದೇಹದ ಒಳಗೂ ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.

ಬಾಯಿಯ ಸ್ವಚ್ಛತೆ:
ಕೆಲವರಿಗೆ ಬಾಯಿಯಿಂದ ದುರ್ವಾಸನೆ ಹೊರಡುವುದು ಸಾಮಾನ್ಯ, ಅಂಥವರು ದಿನಕ್ಕೆ ಐದು ಕಾಳು ಏಲಕ್ಕಿಯನ್ನು ಅಗೆಯಬೇಕು. ಹಲ್ಲುಗಳನ್ನು ಬ್ರಷ್ ಮಾಡಿದರೆ ಬಾಯಿಯ ದುರ್ವಾಸನೆ ಹೋಗುವುದಿಲ್ಲ. ಜಾಹೀರಾತುಗಳನ್ನು ನಂಬಿ ಮೋಸ ಹೋಗದಿರಿ. ಮಾರುಕಟ್ಟೆಯಲ್ಲಿ ಬಾಯಿಯ ದುರ್ವಾಸನೆ ಹೋಗುವ ದ್ರವಣ ಸಿಗುತ್ತದೆ ಅಥವಾ ತಜ್ಞ ವೈದ್ಯರನ್ನು ಸಂಪರ್ಕಿಸಿ ಬಾಯಿಯ ದುರ್ವಾಸನೆ ಕುರಿತು ಚಿಕಿತ್ಸೆ ಪಡೆಯಿರಿ.

ಮೂತ್ರಪಿಂಡಗಳ ಸಮತೋಲನ:
ನಮ್ಮ ದೇಹದಲ್ಲಿ ನೀರು ಲವಣ ಮತ್ತು ಖನಿಜಗಳನ್ನು ಸಮತೋಲನ ಕಾಪಾಡಿಕೊಳ್ಳಲು ಮೂತ್ರಪಿಂಡ ಒಂದು ಮುಖ್ಯ ಭಾಗವಾಗಿದೆ.
ಮೂತ್ರಪಿಂಡದ (kidney)ಆರೋಗ್ಯ ತುಂಬಾ ಮುಖ್ಯ, ಸಂಸ್ಕರಿಸಿದ ಆಹಾರವನ್ನು ತ್ಯಜಿಸಿ ಇದರಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ನೀರು ಸೇವನೆ:
ದೇಹವನ್ನು ನೀರಿನಿಂದಲೂ (Water)ಶುಚಿಯಾಗಿಟ್ಟುಕೊಳ್ಳುಬಹುದು. ದೇಹಕ್ಕೆ ನೀರು ಸೇವನೆಯಿಂದ ದೇಹವು(Dehydration)ಒಣಗುವುದನ್ನು ತಪ್ಪಿಸುತ್ತದೆ. ಕಲ್ಮಶಗಳನ್ನು ಮೂತ್ರ ವಿಸರ್ಜನೆಯಿಂದ ಹೊರಹಾಕುತ್ತದೆ.
ದಿನಕ್ಕೆ ನಿಮಗೆ ಆಗುವಷ್ಟು ನೀರನ್ನು ಕುಡಿಯಿರಿ.

ಎಳನೀರು ಸೇವನೆ:
ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಗಳನ್ನು(coconut Water) ತ್ಯಜಿಸಿ, ಎಳನೀರು ಸೇವನೆ ಮಾಡಿ ಇದರಿಂದ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು.
ರಕ್ತ ಶುದ್ಧೀಕರಣ:
ನಮ್ಮ ದೇಹದಲ್ಲಿನ ರಕ್ತ ಶುದ್ಧೀಕರಣ ರಕ್ತದಾನ ಮಾಡಬಹುದು. (Blood Donation )ಯಾರೂ ರಕ್ತದಾನ ಮಾಡಬಹುದು ಆದರೆ ಕೆಲವರಿಗೆ ರಕ್ತದಾನ ಮಾಡುವುದನ್ನು ನಿರ್ಬಂಧ ಗೊಳಿಸಲಾಗಿದೆ ( ಮಧುಮೇಹ etc) ಇರುವವರು ರಕ್ತದಾನ ಮಾಡುವಂತಿಲ್ಲ. ರಕ್ತದಾನದ ಮೂಲಕ ಹೊಸ ರಕ್ತ (new Blood Production)ಉತ್ಪಾದನೆಯಾಗುತ್ತದೆ ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ.

ವ್ಯಾಯಾಮ:
ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ (Workout)ದೇಹದಲ್ಲಿ ವ್ಯಾಯಾಮ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ಕಶ್ಮಲಗಳು (sweat)ಬೆವರಿನ ಮೂಲಕ ಆಚೆ ಬರುತ್ತದೆ. ಹಾಗೂ ಕೆಟ್ಟ(Bad Fat) ಕೊಬ್ಬಿನ ಶೇಖರಣೆ ಕಡಿಮೆಯಾಗುತ್ತದೆ.