Coronavirus (ಡಿ.7) ಕೊರೋನಾ ದಿನೇದಿನೇ ಆರ್ಭಟ ಮುಂದುವರೆದಿದ್ದು ಸೋಂಕು ಮಕ್ಕಳ ಬೆನ್ನಟ್ಟಿದೆ. ರಾಜ್ಯದಲ್ಲಿ ಮತ್ತೆ ಆರ್ಭಟ ಮುಂದುವರಿಸಿರುವ ಕೊರೊನಾ ಸೋಂಕು ಶಾಲಾ-ಕಾಲೇಜುಗಳ ಮಕ್ಕಳನ್ನು ಗುರಿಯಾಗಿಸಿಕೊಂಡಿದೆ. ಡಿಸೆಂಬರ್ ಮೊದಲನೇ ವಾರದಲ್ಲಿ ಶೇ.27.4 ರಷ್ಟು ಏರಿಕೆಯಾಗಿದೆ. ರಾಜ್ಯದ 1ರಿಂದ 10ನೇ ತರಗತಿಯವರೆಗಿನ ಒಟ್ಟು 130 ಮಕ್ಕಳಿಗೆ ಸೋಂಕು ದೃಡಪಟ್ಟಿದೆ.
ಚಿಕ್ಕಮಂಗಳೂರಿನಲ್ಲಿ ಅತಿಹೆಚ್ಚು ಕೇಸ್:
ಚಿಕ್ಕಮಗಳೂರಿನ ನವೋದಯ ಶಾಲೆಯಲ್ಲಿ ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಹಾಗೆ ಕೊಡಗು ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಕೇಸ್ ಪತ್ತೆಯಾಗಿದೆ.
ಇದನ್ನೂ ಓದಿ: Flying Magic Carpet ಹಾರುವ ಮ್ಯಾಜಿಕ್ ಕಾರ್ಪೆಟ್ !! ಈತ ದುಬೈನ ಅಲ್ಲಾವುದ್ದೀನ್
ರಾಜ್ಯದಲ್ಲಿ 1 ರಿಂದ 10ನೆ ತರಗತಿವರೆಗಿನ ಒಟ್ಟು 130 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು, ಕೊಡಗು ಚಾಮರಾಜನಗರ ಜಿಲ್ಲೆಯಲ್ಲೇ ಹೆಚ್ಚು ಕೇಸ್ಗಳು ದಾಖಲಾಗಿವೆ. ಚಿಕ್ಕಮಗಳೂರು-92 ಕೇಸ್, ಕೊಡಗು-11, ಚಾಮರಾಜನಗರ-7, ಬೆಂಗಳೂರು ಉತ್ತರ-2, ಚಿತ್ರದುರ್ಗ-2, ಧಾರವಾಡ-2, ಗದಗ-1, ಹಾಸನ್-4, ಮಧುಗಿರಿ-5, ಮೈಸೂರು-2, ಶಿವಮೊಗ್ಗ-1, ಶಿರಸಿ-1. ಬಾಗಲಕೋಟೆ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಂತರ, ಬೆಳಗಾವಿ, ಬೆಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕೋಡಿ, ದಕ್ಷಿಣ ಕನ್ನಡ, ಹಾವೇರಿ, ಕಲ್ಬುರ್ಗಿ, ಕೋಲಾರ್, ಕೊಪ್ಪಳ, ಮಂಡ್ಯ ರಾಯಚೂರು, ರಾಮನಗರ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ.

ಶಾಲಾ ಆರಂಭಕ್ಕೆ ನೂತನ ಗೈಡ್ ಲೈನ್ಸ್
ಕೊರೋನಾ ಮೂರನೇ ಅಲೆ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ ಆರಂಭಕ್ಕೆ ನೂತನ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.
- ಬೆಳಗ್ಗಿನ ಭೌತಿಕ ತರಗತಿಗಳಿಗೆ ಅವಕಾಶ.
- ಶಾಲೆಯ ಬರುವುದಕ್ಕೆ ಪೋಷಕರ ಅನುಮತಿ ಪತ್ರ ಕಡ್ಡಾಯ
- ಶಾಲೆಯಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ ಧರಿಸಬೇಕು
- ವಿದ್ಯಾರ್ಥಿಗಳಿಗೆ ಶಾಲೆಗೆ ಹಾಜರಾಗುವುದು ಕಡ್ಡಾಯವಿಲ್ಲ
- ಮಗುವಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಈ ಕುರಿತು ಮಾಹಿತಿ ನೀಡಬೇಕು.
- ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ ಹಾಗೂ ಇದಕ್ಕೆ ಪರ್ಯಾಯವಾಗಿ ಆನ್ಲೈನ್ ವಿಧಾನದಲ್ಲಿಯೂ ಹಾಜರಾತಿಗೆ ಅವಕಾಶ ನೀಡಬಹುದು ಎನ್ನಲಾಗಿದೆ.
ಶಾಲೆಗಳ ಆರಂಭಕ್ಕೆ ಗೈಡ್ಲೈನ್ಸ್ ರೂಲ್ಸ್ ಮತ್ತೆ ಜಾರಿಗೆ ತಂದಿದ್ದು. ಶೇಕಡಾ 50ರಷ್ಟು ಹಾಜರಾತಿಯಲ್ಲಿ ತರಗತಿಯನ್ನು ನಡೆಸಲು ಅವಕಾಶವಿರುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಶಾಲೆಗಳು ಓಪನ್ ಉಳಿದ ಎರಡು ದಿನಗಳ ಶಾಲಾ ಕೊಠಡಿಗಳನ್ನು ಸ್ವಚ್ಛತೆ ಮಾಡಬೇಕು. ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ ಸಿಗಲಿದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿನೀರಿನ ವ್ಯವಸ್ಥೆ ಹಾಗೂ 15ರಿಂದ 20 ಮಕ್ಕಳ ತಂಡ ರಚಿಸಿಕೊಂಡು ಮಕ್ಕಳಿಗೆ ಪಾಠ ಮಾಡಬೇಕು. ಶಿಕ್ಷಕರು ಎರಡು ಡೋಸ್ ಕಡ್ಡಾಯವಾಗಿ ಪಡೆದಿರಬೇಕು ಮಾಡಲು ಅವಕಾಶ ಇರುವುದಿಲ್ಲ
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡುವೆ ಸಾಮಾಜಿಕ ಅಂತರ ಕಡ್ಡಾಯ.